ಸಂಗೀತ ಪ್ರೇಮಿಯನ್ನು ಅರಸಿ ಬಂದ ಸೋನಿ

Posted By: Staff

ಸಂಗೀತ ಪ್ರೇಮಿಯನ್ನು ಅರಸಿ ಬಂದ ಸೋನಿ
ಸೋನಿ ಸಂಗೀತ ಸಾದನಗಳ ಸರಣಿಯನ್ನೆ ಮಾರುಕಟ್ಟೆಗೆ ಪರಿಚಯಿಸುತ್ತಿದೆ, ಸ್ವಲ್ಪ ದಿನದ ಹಿಂದೆ ತಾನೆ ವಾಕ್ ಮೆನ್ ಮತ್ತು ಜೊತೆಗೆ ಕೊಂಡೊಯ್ಯಬಲ್ಲ mp3 ಪ್ಲೇಯರ್ ಅನ್ನು ಬಿಡುಗಡೆ ಮಾಡಿ ಸಂಗೀತ ಪ್ರೇಮಿಗಳಿಗೆ ಹತ್ತಿರವಾಗಿದ್ದ ಸೋನಿ ಮತ್ತೊಂದು ಹೊಸ mp3 ಪ್ಲೇಯರ್ ಅನ್ನು ಬಿಡುಗಡೆ ಮಾಡಿದೆ.

ಹೆಡ್ ಫೋನ್ ಗಳಿಗೆ ಜೋಡಿಸಬಹುದಾದ ಈ ಹೆಡ್ ಫೋನ್ 35 ಗ್ರಾಂ ತೂಕವನ್ನು ಹೊಂದಿದೆ. ಇದರಲ್ಲಿ ಶಬ್ದವನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡಿ ಕೊಳ್ಳುವ ಆಯ್ಕೆ ಇರುವ ಈ ಪ್ಲೇಯರ್ ನಲ್ಲಿದೆ.

ಇದನ್ನು ಜಾಗಿಂಗ್ ಮಾಡುವಾಗ ಅಥವಾ ಬೇರೆ ಏನಾದರೂ ಕೆಲಸದಲ್ಲಿ ತೊಡಗಿದಾಗ ಇದನ್ನು ಉಪಯೋಗಿಸಿ ಮನರಂಜನೆಯನ್ನು ಪಡೆಯಬಹುದಾಗಿದೆ.ಇದರ ಮತ್ತೊಂದು ವಿಶೇಷವೆಂದರೆ ಇದು ವಾಟರ್ ಫ್ರೂಫ್ ಗುಣವನ್ನು ಹೊಂದಿದೆ.

ಸ್ವಲ್ಪ ಹೊತ್ತು ಚಾರ್ಜ್ ಮಾಡಿದರೂ ಸಹ ಕೆಲವು ಗಂಟೆಗಳ ಕಾಲ ಸಂಗೀತ ಕೇಳಬಹುದಾಗಿದ್ದು , ಇದನ್ನು ಪೂರ್ಣ ಚಾರ್ಜ್ ಮಾಡಿದರೆ 12 ಗಂಟೆಗಳ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ZAPPIN ಮತ್ತು ರಿಪೀಟ್ ಸಾಮರ್ಥ್ಯವನ್ನು ಹೊಂದಿದೆ.

ಈ 2GB ಮಾದರಿಯ ಸೋನಿ ವಾಕ್ ಮೆನ್ W ಸಿರಿಸ್ ಬೆಲೆ ರು. .5, 000 ಇದು ಗ್ರಾಹರ ಮನಸೆಳೆಯುವ ಅನೇಕ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot