ಲಾಜಿಟೆಕ್ G35 ಗೇಮಿಂಗ್ ಹೆಡ್ ಸೆಟ್

Posted By: Staff

ಲಾಜಿಟೆಕ್ G35 ಗೇಮಿಂಗ್ ಹೆಡ್ ಸೆಟ್
ಲಾಜಿಟೆಕ್ ಹೊಸ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಇರುತ್ತದೆ. ಅವುಗಳ ಸಾಲಿನಲ್ಲಿ ಈಗ ಲಾಜಿಟೆಕ್ G55 ಹೆಡ್ ಸೆಟ್ ಅನ್ನು ಬಿಡುಗಡೆ ಮಾಡಲಿದೆ.

ಈ ಹೆಡ್ ಸೆಟ್ ಗ್ರಾಹಕರನ್ನು ಸೆಳೆಯುವಂತಹ ವಿನ್ಯಾಸ ಹೊಂದಿದ್ದು , ನೋಡಲು ಬಾಕ್ಸ್ ಲುಕ್ ನಲ್ಲಿದೆ.ಇದರ ಬಣ್ಣವು ಕೆಂಪು ಮತ್ತು ಕಪ್ಪು ಹೊಂದಿದ್ದು ನೋಡುಗರು ಅದರ ಬಣ್ಣಕ್ಕೆ ಮಾರುಹೋಗುವುದು ಗ್ಯಾರಂಟಿ.

ಇದು ಗಾತ್ರದಲ್ಲಿ ಸ್ವಲ್ಪ ಹೆಚ್ಚು ಅನಿಸಿದರೂ ಇದರಿಂದ ಕಿವಿಗೇನು ಭಾರ ಎನಿಸುವುದಿಲ್ಲ.ಇದರಲ್ಲಿ ಶಬ್ದವನ್ನು ಹೆಚ್ಚು, ಕಡಿಮೆ ಮಾಡಲು ಬಟನ್ ಇದ್ದು, ಅದರಲ್ಲಿ ಮೈಕ್ರೋಫೋನ್ ಅನ್ನು ಸ್ವಿಚ್ ಆಫ್ ಸಹ ಮಾಡಬಹುದಾಗಿದೆ.

ಇದರಲ್ಲಿರುವ ಕೆಂಪು ಬಣ್ಣದ ಇಂಡಿಕೇಟರ್ ಮೈಕ್ರೋಫೋನ್ ಮ್ಯೂಟ್ನಲ್ಲಿ ಇದೆಯೊ ಇಲ್ಲವೊ ಎಂಬುದನ್ನು ಸೂಚಿಸುತ್ತದೆ. ಇದರ ಡ್ರೈವರ್ಸ್ 40mm ಇದ್ದು ಒಂದರಲ್ಲಿ ನಿಯೋಡೈಮಿಯಂ ಮ್ಯಾಗ್ನಟ್ ಹೊಂದಿದೆ.

ಈ ಸಾಧನವು ಮೈಕ್ರೋಫೋನ್ ನಲ್ಲಿ 100 Hz ಯಿಂದ 10 KHzರವರೆಗೆ ಶಬ್ದದ ಕಂಪನಾಂಕವನ್ನು ನೀಡುತ್ತದೆ. ದರಲ್ಲಿರುವ ಬಟನ್ ಉಪಯೋಗಿಸಿ ಕರೆ ಮಾಡುವಾಗ ಇರುವ ಸುತ್ತಮುತ್ತಲಿನ ಗದ್ದಲದ ಅಡಚಣೆಯನ್ನು ತಪ್ಪಿಸಬಹುದು.ಈ G ಸರಣಿಯ ಹೆಡ್ ಸೆಟ್ ಗೇಮಿಂಗ್ ಅಧಿಕವಾಗಿ ಬಳಸಲಾಗುತ್ತಿದೆ.

ಈ ಲಾಜಿಟೆಕ್ G35 ಸರೌಂಡ್ಡ್ ಸೌಂಡ್ ಹೆಡ್ ಸೆಟ್ ರು. 9, 000 ಬೆಲೆಯದು ಆಗಿದ್ದು 20 %ರವರೆಗೆ ರಿಯಾತಿಯಲ್ಲಿ ಕೊಳ್ಳಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot