ಆಪಲ್ ಸ್ಮಾರ್ಟ್ ಫೋನ್ ಗೆ ಐಕಾನ್ ಐ ಡು

|
ಆಪಲ್ ಸ್ಮಾರ್ಟ್ ಫೋನ್ ಗೆ ಐಕಾನ್ ಐ ಡು

ಮ್ಯೂಸಿಕ್ ಸಾಧನಗಳಲ್ಲಿ ಅಷ್ಟೇ ಅಲ್ಲ ಸ್ಮಾರ್ಟ್ ಫೋನ್ ಗಳಲ್ಲಿ ಹಾಡುಗಳನ್ನು ಕೇಳಬಹುದೆಂದು ಎಲ್ಲರಿಗೂ ಗೊತ್ತು. ಆದರೆ ಆಡಿಯೊಫೈಲ್ಸ್ ಪ್ರಕಾರ ಸ್ಪಾರ್ಟ್ ಫೋನ್ ಗಳಲ್ಲಿ ಹಾಡಿನ ಗುಣಮಟ್ಟ ತುಂಬಾ ಕಡಿಮೆ ಇದೆ ಎಂದು ಹೇಳಲಾಗಿದೆ. ಈ ಸಮಸ್ಯೆಯನ್ನು ಪರೀಕ್ಷಿಸಿದ ನ್ಯುಫೋರ್ಸ್, ಐಕಾನ್ ಐ ಡು ಎಂಬ ಸಾಧನವನ್ನು ತಯಾರಿಸಿದ್ದು , ಇದನ್ನು ಬಳಸಿದರೆ ಇನ್ನು ಮುಂದೆ ಇಂತಹ ಸಮಸ್ಯೆ ಕಂಡು ಬರುವುದಿಲ್ಲ ಎಂದು ಹೇಳಿದೆ.

ಆದರೆ ಈ ಸಾಧನವನ್ನು ಆಪಲ್ ಸಾಧನಗಳಲ್ಲಿ ಮಾತ್ರ ಬಳಸಬಹುದಾಗಿದ್ದು ಉಳಿದ ಸ್ಮಾರ್ಟ್ ಫೋನ್ ಗಳು ಈ ಸೌಲಭ್ಯದಿಂದ ವಂಚಿತವಾಗಿದೆ. ಈ ನ್ಯುಫೋರ್ಸ್ ಐಕಾನ್ ಐ ಡು ಸ್ಮಾರ್ಟ್ ಫೋನ್ ಗಳಲ್ಲಿ ಉತ್ತಮ ಗುಣಮಟ್ಟದ ಶಬ್ದವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಈ ಕೆಳಗಿನ ಗುಣಲಕ್ಷಣವನ್ನು ಹೊಂದಿದೆ.

* 6 x 4.5 x 1 ಇಂಚಿನ ಡೈಮೆಂಶನ್

* ನೋಡಲು ಆಕರ್ಷಕವಾಗಿದೆ

* USB ಇನ್ ಪುಟ್ ಪೋರ್ಟ್

* ಅನಾಲೋಗ್ ಔಟ್ ಪುಟ್ ಫೋರ್ಟ್

* ಶಬ್ದದ ಕಂಪನಾಂಕ 10Hz - 20KHz

* ಹೊರಗಿನ ಗದ್ದಲವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯ

ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X