ಕೈಗೆಟುಕುವ ದರದಲ್ಲಿ ಎಚ್ ಡಿ ಹೆಡ್ ಫೋನ್ ಸರಣಿ

|
ಕೈಗೆಟುಕುವ ದರದಲ್ಲಿ ಎಚ್ ಡಿ  ಹೆಡ್ ಫೋನ್ ಸರಣಿ

ಸೆನ್ನ್ ಹೀಸರ್ ಮಧ್ಯಮ ವರ್ಗದವರೆಗೆ ಕೈಗೆಟುಕುವ ದರದಲ್ಲಿ ಉತ್ತಮ ರೀತಿಯ ಹೆಡ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮುಖ್ಯವಾಗಿ ಹೆಸರಿಸಬಹುದಾದ ಹೆಡ್ ಫೋನ್ ಗಳೆಂದರೆ ಎಚ್ ಡಿ 200 ಮತ್ತು ಎಚ್ ಡಿ 400ಹೆಡ್ ಫೋನ್ ಗಳಾಗಿವೆ.

ಇದೆ ಹೆಡ್ ಫೋನ್ ಗಳ ಸಾಲಿಗೆ ಇನ್ನೂ ಆರು ಹೆಡ್ ಫೋನ್ ಗಳನ್ನು ಸೇರಿಸಿದ್ದು ಅವುಗಳನ್ನು ಎಚ್ ಡಿ 219, ಎಚ್ ಡಿ 229, ಎಚ್ ಡಿ 239, ಎಚ್ ಡಿ 200 ರೇಂಜ್, ಎಚ್ ಡಿ 429, ಎಚ್ ಡಿ 439 ಮತ್ತು ಎಚ್ ಡಿ 400ರೇಂಜ್ ಎಂದು ಹೆಸರಿಸಲಾಗಿದೆ.ಈ ಎಲ್ಲಾ ಹೆಡ್ ಫೋನ್ ಗಳು ಅಕರ್ಷಕವಾದ ಗುಣ ಲಕ್ಷಣವನ್ನು ಹೊಂದಿವೆ.

ಇವುಗಳಲ್ಲಿ ಕಿತ್ತಳೆ ಮತ್ತು ಬಿಳಿ ಬಣ್ಣದ ಹೆಡ್ ಫೋನ್ ಗಳು ನೋಡಲು ಮತ್ತಷ್ಟು ಆಕರ್ಷಕವಾಗಿದೆ. ಇದರ ಇಯರ್ ಕಪ್ ಡಿಸೈನ್ ಕೂಡ ಸಂಪೂರ್ಣವಾಗಿ ಭಿನ್ನವಾಗಿದೆ. ಇಯರ್ ಕಪ್ ಕೂಡ ಎರಡು ಬಣ್ಣವನ್ನು ಹೊಂದಿದ್ದು ಇನ್ನರ್ ಓವಲ್ ರಿಂಗ್ ನಿರ್ದಿಷ್ಟವಾದ ಬವಣ್ಣವನ್ನು ಹೊಂದಿದೆ.

ಈ ಹೆಡ್ ಫೋನ್ ಗಳನ್ನು ಕೊಂಡೊಯ್ಯಬಹುದಾದ ಪ್ಲೇಯರ್, ಟ್ಯಾಬ್ಲೆಟ್ ಮತ್ತು ನೆಟ್ ಬುಕ್ಸ್ ಗಳಲ್ಲಿ ಬಳಸಬಹುದಾಗಿದೆ. ಈ ಹೆಡ್ ಫೋನ್ ಗಳ ಕಂಪನಾಂಕವು 16-24,000 Hz ಆಗಿದೆ. ಎಲ್ಲಾ ಹೆಡ್ ಫೋನ್ ಗಳು ಕಡಿಮೆ ತೂಕದ್ದು ಆಗಿದ್ದು ಯಾವುದರ ತೂಕ ಕೂಡ 500 ಗ್ರಾಂ ಮೀರಿಲ್ಲ. ಇದರಲ್ಲಿರುವ ದೊಡ್ಡದಾದ ಇಯರ್ ಪ್ಯಾಡ್ ಗಳು ಹೊರಗಿನ ಗದ್ದಲವನ್ನು ತಡೆದು ಗುಣಮಟ್ಟದ ಸಂಗೀತವನ್ನು ನೀಡುತ್ತದೆ.

ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಎಚ್ ಡಿ 219, ಎಚ್ ಡಿ 229, ಎಚ್ ಡಿ 239 ಬೆಲೆ ರು.3000-5000, ಎಚ್ ಡಿ 429, ಎಚ್ ಡಿ 439 ಮತ್ತು ಎಚ್ ಡಿ 400ರೇಂಜ್ ರು. 6, 000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X