ರೇಡಿಯೊದಲ್ಲಿ ಬಂದಿದೆ ಆಂಡ್ರಾಯ್ಡ್ ಚಮತ್ಕಾರ

Posted By:
ರೇಡಿಯೊದಲ್ಲಿ ಬಂದಿದೆ ಆಂಡ್ರಾಯ್ಡ್ ಚಮತ್ಕಾರ
ಮೊತ್ತ ಮೊದಲ ಬಾರಿಗೆ ಟ್ಯಾಬ್ಲೆಟ್ ನಲ್ಲಿ ಆಂಡ್ರಾಯ್ಡ್ ಸಿಸ್ಟಮ್ ಬಳಸಿದ್ದ ಅರ್ಖೋಸ್ ಕಂಪನಿ ಮನೆಯಲ್ಲಿ ಬಳಸುವ ಆಡಿಯೊ ಸಾಧನದಲ್ಲಿ ಕೂಡ ಆಂಡ್ರಾಯ್ಡ್ ತರಲಿದೆ ಎಂದು ಘೋಷಿಸಿತು. ಅದರಂತೆ ಈಗ ಅರ್ಖೋಸ್ 35 ಹೋಮ್ ಕನೆಕ್ಟ್ ಹೆಸರಿನ ವೆಬ್ ರೇಡಿಯೊವನ್ನು ಹೊರತಂದಿದೆ. ಈ ರೇಡಿಯೊದಲ್ಲಿ ಅಲರಾಂ ಇರುವುದರಿಂದ ಪ್ರತಿ ದಿನ ಬಳಕೆದಾರರನ್ನು ಎಬ್ಬಿಸುವಂತೆ ಮಾಡುತ್ತದೆ.

ಈ ಹೋಮ್ ಆಂಡ್ರಾಯ್ಡ್ ರೇಡಿಯೊ ಈ ಕೆಳಗಿನ ಪ್ರಮುಖ ಲಕ್ಷಣವನ್ನು ಹೊಂದಿದೆ.

* ನೋಡಲು ಚಿಕ್ಕದಾಗಿದ್ದು ಆಕರ್ಷವಾಗಿದೆ

* ಜೊತೆಗೆ ಕೊಂಡೊಯ್ಯಬಹುದು

* ಉತ್ತಮ ಗುಣಮಟ್ಟದ ಶಬ್ದ

* ಟಚ್ ಸ್ಕ್ರೀನ್ ಡಿಸ್ ಪ್ಲೇ

* ಅಲರಾಂ

* ರೇಡಿಯೊ

* ಅಧಿಕ ವೇಗದ ವೈಫೈ ಇಂಟರ್ ನೆಟ್

* 50,000 ವೆಬ್ ರೇಡಿಯೊ ಸ್ಟೇಷನ್ ಅನ್ನು ಬ್ರೌಸ್ ಮಾಡಬಹುದು

* ಸಾಮಾಜಿಕ ತಾಣಗಳ ಅಪ್ಲಿಕೇಶನ್ ಸಪೋರ್ಟ್

* ಸ್ಟ್ರೀಮ್ ವೀಡಿಯೊ

ಈ ರೇಡಿಯೊದ ಬೆಲೆ ರು. 8, 000 ಇದ್ದು ಇದನ್ನು ಅರ್ಖೋಸ್ ಸ್ಟೋರ್ ಅಥವಾ ಅಮೇಜೋನ್ ಸೈಟ್ ಗಳ ಮುಖಾಂತರ ಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot