ಆಪ್ರಿಯನ್ ಆಡಿಯೊದ ಇಂಟಿಮಸ್ ಸ್ಪೀಕರ್ ಸರಣಿ

Posted By:
ಆಪ್ರಿಯನ್ ಆಡಿಯೊದ ಇಂಟಿಮಸ್ ಸ್ಪೀಕರ್ ಸರಣಿ
ಆಪ್ರಿಯನ್ ಆಡಿಯೊ ಕಂಪನಿಯು ಈಗ ಇಂಟಿಮಸ್ 4B ಸ್ಯಾಟಲೈಟ್, ಇಂಟಿಮಸ್ 4T ಟವರ್ ಮತ್ತು ಇಂಟಿಮಸ್ 4C ಸೆಂಟರ್ ಹೋಮ್ ಥಿಯೇಟರ್ ಸ್ಪೀಕರ್ ಗಳನ್ನು ತಯಾರಿಸಿದೆ. ಈ ಸ್ಪೀಕರ್ ಗಳು ಈಗ ಬಳಕೆಯಲ್ಲಿರುವ ಹೋಮ್ ಥಿಯೇಟರಿಗಿಂತ ಹೆಚ್ಚಿನದನ್ನು ಬಳಕೆದಾರರಿಗೆ ನೀಡಲಿದೆ.

ಈ ಸ್ಪೀಕರ್ ನಲ್ಲಿ ಮಾಡಿದಂತಹ ಅತಿ ದೊಡ್ಡ ಮಾರ್ಪಾಡು ಅಂದರೆ ಇದರಲ್ಲಿ ಮ್ಯಾಗ್ನಟಿಕ್ ಶೀಲ್ಡ್ ಅನ್ನು ಬಳಸಲಿಲ್ಲ. ಅಲ್ಲದೆ ಇದರ ಅಗತ್ಯವು ಹೋಮ್ ಥಿಯೇಟರಿಗೆ ಇಲ್ಲ ಎಂದು ಹೇಳಿರುವ ಕಂಪನಿಯು ಈ ಸ್ಪೀಕರ್ ಗಳು ಪ್ಲಾಸ್ಮಾ ಟಿವಿ ಮತ್ತು LCD ಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ.

ಈ ಸ್ಪೀಕರ್ ಗಳು ಕಡಿಮೆ ವಿದ್ಯುತ್ ಅನ್ನು ಉಪಯೋಗಿಸಿಕೊಂಡು ಅಧಿಕ ಶಬ್ದವನ್ನು ನೀಡುತ್ತದೆ. ಇವುಗಳಲ್ಲಿರುವ ಲಕ್ಷಣವೆಂದರೆ ಒಂದು ಸಿಲ್ಕ್ ಡೋಮ್ ವಿನ್ಯಾಸದ ಟ್ವೀಟರ್, ವೂವನ್ ಫೈಬರ್ ಗ್ಲಾಸ್ ಡ್ಯುಯಲ್ 4, ಮಿಡ್ ವೂಫರ್ಸ್. ಇದರ ಮರದ ಫಿನಿಶಿಂಗ್ ಇದನ್ನು ನೋಡಲು ಮತ್ತಷ್ಟು ಸುಂದರವಾಗಿಸಿದೆ.

ಈ ಸ್ಪೀಕರ್ ಗಳಲ್ಲಿ ಇಂಟಿಮಸ್ 4T ಟವರ್ 25-150 ವ್ಯಾಟ್ ಪವರ್ ಬಳಸುತ್ತಿದ್ದು ಇದರ ಕಂಪನಾಂಕವು (±6 dB) 50-22,000 Hz ಮತ್ತು (±3 dB) 60-20,000 Hz ಆಗಿದೆ. ಈ ಸ್ಪೀಕರ್ 19 ಪೌಂಡ್ ತೂಕವನ್ನು ಮತ್ತು 34 ಇಂಚು ಎತ್ತರ, 5 ಇಂಚು ಅಗಲ ಮತ್ತು 7.5 ಇಂಚು ಆಳವ್ನು ಹೊಂದಿದೆ. ಈ ಸ್ಪೀಕರ್ ಬೂದಿ ಮತ್ತು ಚೆರಿ ಬಣ್ಣದಲ್ಲಿ ದೊರೆಯುತ್ತದೆ.

ಈ ಸ್ಪೀಕರ್ ಗಳು ಇದೆ ವರ್ಷದ ನವಂನರ್ 30 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು ಇದರಲ್ಲಿ ಇಂಟಿಮಸ್ 4B ಸ್ಯಾಟಲೈಟ್ ರು. 10,000, ಇಂಟಿಮಸ್ 4T ಟವರ್ ಒಂದು ಜೊತೆಗೆ ರು.25,000 ಮತ್ತು ಇಂಟಿಮಸ್ 4C ಸೆಂಟರ್ ಒಂದಕ್ಕೆ ರು. 6,500 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot