ಆಪಲ್ ಐಪೋಡ್ ಗಾಗಿ ಬರಲಿದೆ ಕ್ಲಿಪ್

|

ಆಪಲ್ ಐಪೋಡ್ ಗಾಗಿ ಬರಲಿದೆ ಕ್ಲಿಪ್
ಆಪಲ್ ಐಪೋಡ್ ಮಾರುಕಟ್ಟೆಗೆ ಬಂದಲ್ಲಿಂದ ಆಪಲ್ ಆಡಿಯೊ ಸಾಧನಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅದರಲ್ಲೂ ಇದರ ಆಪಲ್ ಐಪೋಡ್ ನ್ಯಾನೊ ಮತ್ತು ಆಪಲ್ ಐಪೋಡ್ ಶಫಲ್ ಗೆ ಸಿಕ್ಕಪಟ್ಟೆ ಬೇಡಿಕೆ ಇದೆ.

ಈ ಎರಡು ಸಾಧನಗಳಿಗಾಗಿ ಆಪಲ್ ಕಂಪನಿ ಕ್ಲಿಪ್ ಅನ್ನು ತರುವ ಯೋಜನೆ ಅನ್ನು ಹಾಕಿ ಕೊಂಡಿದೆ. ಒಂದು ವೇಳೆ ಈ ತಂತ್ರಜ್ಞಾನ ಬಳಕೆಗೆ ಬಂದರೆ ಒಂದು ಜೊತೆ ಹೆಡ್ ಫೋನ್ ಬಳಸಿ ಸಂಗೀತವನ್ನು ಕೇಳುವ ಕಾಲ ಮಾಯವಾಗಬಹುದು.

ನೀವು ಮತ್ತು ನಿಮ್ಮ ಫ್ರೆಂಡ್ಸ್ ಇಂಟಿಗ್ರೇಟ್ ಡ್ ಸ್ಪೀಕರ್ ಬಳಸಿ ಸಂಗೀತವನ್ನು ಸವಿಯಬಹುದಾಗಿದೆ. ಈ ಕ್ಲಿಪ್ ಬಳಸಿ ಸ್ಪೀಕರ್ ಗೆ ಜೋಡಿಸಿ ದೊಡ್ಡದಾದ ಶಬ್ದದಲ್ಲಿ ಸಂಗೀತವನ್ನು ಸವಿಯಬಹುದಾಗಿದೆ.

ಈ ಕ್ಲಿಪ್ ಐಪೋಡ್ ನ್ಯಾನೊ ಮತ್ತು ಶಫಲ್ ಗೆ ಇದ್ದಂತಹ ಕ್ಲಿಪ್ ಆಗಿದೆ, ಆದರೆ ಇದರಲ್ಲಿರುವ ವ್ಯತ್ಯಾಸವೆಂದರೆ ಇದರಲ್ಲಿ ಚಿಕ್ಕ ಗ್ರಿಲ್ ಇದ್ದು ಅದನ್ನು ಸ್ಪೀಕರ್ ನ ಒಳಗೆ ಅಳವಡಿಸಲಾಗಿದೆ.ಈ ಕ್ಲಿಪ್ ನಲ್ಲಿರುವ ರೆಸಸ್ ನ ಗಾತ್ರವು ಈ ಸಾಧನದಿಂದ ಬರುವ ಶಬ್ದದ ಕಂಪನಾಂಕವನ್ನು ನಿರ್ಧರಿಸುತ್ತದೆ.

ಈ ಸಾಧನದಲ್ಲಿ ಕಣ್ಣಿಗೆ ಕಾಣುವ ಹಾಗೆ ಯಾವುದೆ ವೈರ್ ಅಥವಾ ಕೇಬಲ್ ಅನ್ನು ಬಳಸಲಾಗಿಲ್ಲ. ಈ ಕ್ಲಿಪ್ ಒಂದು ವೇಳೆ ಬಂದರೆ ಸಂಗೀತ ಪ್ರಿಯರ ಮೆಚ್ಚುಗೆಯನ್ನು ಗಳಿಸುವುದೆ ಎಂದು ಕಾದು ನೋಡ ಬೇಕಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X