Subscribe to Gizbot

ಐಪೋಡ್ ನಲ್ಲಿ ಹಾಡುಗಳ ಅಬ್ಬರಕ್ಕೆ ಅರ್ಕಾಮ್ ಸ್ಪೀಕರ್

Posted By:
ಐಪೋಡ್ ನಲ್ಲಿ ಹಾಡುಗಳ ಅಬ್ಬರಕ್ಕೆ ಅರ್ಕಾಮ್ ಸ್ಪೀಕರ್
ಅರ್ಕಾಮ್ ಕಂಪನಿ ಅಡಿಯೊ ಅಂದರೆ ಗುಣಮಟ್ಟದ ಜೊತೆ ಅದರಲ್ಲಿ ಒಂದು ಹೊಸತನವಿರುತ್ತದೆ. ಇದರ ಆಡಿಯೊಗಳಲ್ಲಿ ವೃತ್ತಿ ಕೌಶಲ್ಯ ಎದ್ದು ಕಾಣುತ್ತಿರುತ್ತದೆ. ಇದೀಗ ಅರ್ಕಾಮ್ ಐಪೋಡ್ ಗಾಗಿ ಹೊಸ ಸ್ಪೀಕರ್ ಮಾರುಕಟ್ಟೆಗೆ ತಂದಿದೆ. ಆ ಸ್ಪೀಕರ್ ಅನ್ನು ಅರ್ಕಾಮ್ ಆರ್ ಕ್ಯೂಬ್ ಎಂದು ಹೆಸರಿಸಲಾಗಿದೆ.

ಈ ಸ್ಪೀಕರ್ ಜೊತೆಗೆ ಕೊಂಡೊಯ್ಯಲು ಸುಲಭವಾಗಿದ್ದು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ತಯಾರಿಯಲ್ಲಿ ಪ್ರೀಮಿಯಂ ಬಳಕೆ

* ಟಚ್ ಸೆನ್ಸಟಿವ್ ಬಟನ್

* 7.9 ಇಂಚಿನ ಘನಾಕಾರದಲ್ಲಿದೆ

* 5 ಕೆಜಿ ತೂಕ

* 3.5 ಮಿಮಿ ಆಡಿಯೊ ಜಾಕ್

ಪ್ರೀಮಿಯಂ ಬಳಸಿ ತಯಾರಿಸಲಾದ ಈ ಸ್ಪೀಕರ್ ಘನಾಕಾರದಲ್ಲಿದ್ದು , ಈ ಸ್ಪೀಕರ್ ಮೇಲ್ಗಡೆ ಐದು ಬಟನ್ ಇರುತ್ತದೆ. ಈ ಬಟನ್ ಬಳಸಿ ಶಬ್ದವನ್ನು ನಿಯಂತ್ರಿಸಬಹುದು. ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಈ ಸ್ಪೀಕರ್ ಲಭ್ಯವಿದೆ. ಇದರಲ್ಲಿ ಪವರ್ ಔಟ್ ಪುಟ್ 90 ವ್ಯಾಟ್ ಇದ್ದು, ಈ ಸ್ಪೀಕರ್ ಗೆ ಅಗತ್ಯವಿರುವ ವಿದ್ಯುತ್ ಅನ್ನು AC ಸರಬರಾಜು ಅಥವಾ ಇಂಟರ್ನಲ್ ಬ್ಯಾಟರಿ ಮುಖಾಂತರ ಪಡೆಯಬಹುದು.

ಈ ಸ್ಪೀಕರ್ ಅನ್ನು ಐ ಪೋಡ್ ಗೆ ಜೋಡಿಸಿ ಗುಣಮಟ್ಟದ ಶಬ್ದದಲ್ಲಿ ಹಾಡುಗಳನ್ನು ಕೇಳಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot