ಭಾರತೀಯ ಮಾರುಕಟ್ಟೆಗೆ ಏಸೆಸ್ ವಲ್ಕೇನ್ ಹೆಡ್ ಫೋನ್

|
 ಭಾರತೀಯ ಮಾರುಕಟ್ಟೆಗೆ ಏಸೆಸ್ ವಲ್ಕೇನ್ ಹೆಡ್ ಫೋನ್

ಹೆಡ್ ಫೋನ್ ಮಾರುಕಟ್ಟೆಗೆ ಹೋದರೆ ಬೇರೆ-ಬೇರೆ ಕಂಪನಿಗಳ ವಿಭಿನ್ನ ಮಾಡಲ್ ಗಳ ಹೆಡ್ ಫೋನ್ ಗಳು ಮಾರುಕಟ್ಟೆಯನ್ನು ಅಲಂಕರಿಸಿರುತ್ತದೆ. ಅದರಲ್ಲಿ ಸ್ವಲ್ಪ ದೊಡ್ಡದಾದ ವಿನ್ಯಾಸ ಹೊಂದಿರುವ ಹೆಡ್ ಫೋನ್ ಗಳಲ್ಲಿ ಏಸೆಸ್ ವಲ್ಕೇನ್ ಹೆಡ್ ಫೋನ್ ಕೂಡ ಒಂದಾಗಿದೆ. ಇದರ ಇಯರ್ ಫೋನ್ ದೊಡ್ಡದಾಗಿದ್ದು ಅದನ್ನು ಪ್ಲಾಸ್ಟಿಕ್ ನಿಂದ ಮಾಡಲಾಗಿದೆ.

ಈ ಇಯರ್ ಫೋನ್ ನಲ್ಲಿ ಅತ್ಯುತ್ತಮ ಗುಣಮಟ್ಟದ ಫ್ಯಾಬ್ರಿಕ್ ಬಳಸಲಾಗಿದೆ. ಇದರ ಹೆಡ್ ಫೋನ್ ಕೂಡ ಪ್ಯಾಡಿಂಗ್ ಹೊಂದಿರುವುದರಿಂದ ಇದನ್ನು ಎಷ್ಟು ಹೊತ್ತು ಬಳಸಿದರೂ ಬಳಕೆದಾರರಿಗೆ ಕಿರಿಕಿರಿ ಅನಿಸುವುದಿಲ್ಲ. ಈ ಸೆಟ್ ಕೊಳ್ಳುವಾಗ ಇದನ್ನು ಹಾಕಿ ಕೊಂಡೊಯ್ಯಲು ಸುಂದರವಾದ ಚೀಲ(ಪೌಚ್) ಕೂಡ ದೊರಕುತ್ತದೆ. ಆದ್ದರಿಂದ ಇದನ್ನು ಎಲ್ಲಗಾದರೂ ಹೋಗುವಾಗ ಕೈಯಲ್ಲಿ ಹಿಡಿದುಕೊಂಡು ಕೊಂಡಯ್ಯಬಹುದಾಗಿದೆ.

ಈ ಹೆಡ್ ಫೋನ್ ನಲ್ಲಿ 40 mm ಡ್ರೈವರ್ಸ್ ಹೊಂದಿರುವುದರಿಮದ ಉತ್ತಮ ಗುಣಮಟ್ಟದ ಶಬ್ದವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧನದ ಇಂಪೆಡೆನ್ಸ್ 32 ohms ಹೊಂದಿದ್ದು ಇದರ ಶಬ್ದದ ಕಂಪನಾಂಕದ ಸಾಮರ್ಥ್ಯ 10 ಮತ್ತು 20,000 Hz ನಡುವೆ ಇದೆ. ಇದರಲ್ಲಿ ತೆಗೆದು ಇಡಬಹುದಾದ ಮೈಕ್ರೊ ಫೋನ್ ಹೊಂದಿದ್ದು ಇದನ್ನು ಸುಲಭವಾಗಿ ಪ್ಲಗ್ ಮಾಡಬಹುದಾಗಿದೆ. ಇದರಲ್ಲಿ ಒಂದು ಕೇಬಲ್ ಇದ್ದು ಅದನ್ನು ಪಿ ಸಿ ಪೋರ್ಟ್ ವರೆಗೂ ವಿಸ್ತರಿಸಬಹುದಾಗಿದ್ದು ಭಾಗ ಮಾಡಿ ಎರಡು ವಿಭಿನ್ನ 3.5mm ಕನೆಕ್ಟರ್ ನಲ್ಲಿ ಬಳಸಲಾಗುತ್ತದೆ.

ಇದರಲ್ಲಿ ಗದ್ದಲವನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಅಳವಡಿಸಿದ್ದು , AAA ಬ್ಯಾಟರಿಯನ್ನು ಬಳಸಲಾಗಿದೆ. ಈ ಹೆಡ್ ಫೋನ್ ಬಳಸಿ ಮೆಲ್ಲಗೆ, ಸಾದಾರಣ ಮತ್ತು ಹೆಚ್ಚಿನ ಶಬ್ದದಲ್ಲಿ ಸಹ ಹಾಡುಗಳನ್ನು ಕೇಳಬಹುದಾಗಿದೆ.ಇದರಲ್ಲಿ ANC ತಂತ್ರಜ್ಞಾನವನ್ನು ಬಳಸಿರುವುದರಿಂದ ಗದ್ದಲವನ್ನು ನಿಯಂತ್ರಿಸುತ್ತದೆ, ಆದ್ದರಿಂದ ಗೇಮ್, ಮ್ಯೂಸಿಕ್ ಅಂತ ನಿಮ್ಮ ಲೋಕದಲ್ಲಿ ಮುಳುಗಿರುವಾಗ ಹೊರಗಿನ ಗದ್ದಲವು ನಿಮ್ಮ ಮನರಂಜನೆಗೆ ರಸಭಂಗ ತರುವುದಿಲ್ಲ.

ಏಸೆಸ್ ವಲ್ಕೇನ್ ಹೆಡ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು.7, 000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X