Subscribe to Gizbot

ಸ್ಪೀಕರ್ ಗಳಲ್ಲಿಯೆ ವಿಶೇಷವೆನಿಸುವ ವೀಝಿ ಸ್ಪೀಕರ್

Posted By:
ಸ್ಪೀಕರ್ ಗಳಲ್ಲಿಯೆ ವಿಶೇಷವೆನಿಸುವ ವೀಝಿ ಸ್ಪೀಕರ್

ಎಷ್ಟೋ ಕಂಪನಿಗಳ ಸ್ಪೀಕರ್ ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ಆದರೆ ಆಎಲ್ಲಾ ಸ್ಪೀಕರ್ ಗಳಲ್ಲಿ ಸ್ವಲ್ಪ ವಿಭಿನ್ನವೆನಿಸುವ ಮತ್ತು ನೋಡಲು ಆಕರ್ಷಕವಾಗಿರುವ ಸ್ಪೀಕರ್ ಅಂದರೆ ವೀಝಿ. ಇದನ್ನು ಐಕಾನ್ ಕಂಪನಿಯ ಕೂಸಾಗಿದೆ. ಅಂಗೈನಲ್ಲಿ ಹಿಡಿಯಬಹುದಾದ ಈ ಸ್ಪೀಕರ್ ತನ್ನ ಕಾರ್ಯವೈಖರಿಗಳಿಂದ ಬಳಕೆದಾರರಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತದೆ. ಈ ವೀಝಿ ಬ್ಲೂಟೂಥ್ ಕನೆಕ್ಟರ್ LED ಲೈಟ್ ಹೊಂದಿದ್ದು ಅತ್ಯುತ್ತಮವಾದ ಬ್ಲೂಟೂಥ್ ರಿಸೀವರ್ ಕೂಡ ಆಗಿದೆ.

ಬ್ಲೂಟೂಥ್ ಸೌಲಭ್ಯ ಹೊಂದಿರುವ ಸಾಧನಗಳಲಲ್ಇ ಬಳಸಬಹುದಾದ ವೀಝಿ ಸ್ಪೀಕರ್ ಈ ಕೆಳಗಿನ ಗುಣ ಲಕ್ಷಣವನ್ನು ಹೊಂದಿದೆ.

* ಚಿಕ್ಕ ಗಾತ್ರವನ್ನು ಹೊಂದಿದ್ದು ಜೊತೆಯಲ್ಲಿ ಕೊಂಡೊಯ್ಯಲು ಸುಲಭವಾಗಿದೆ.

* ಹೈಫೈ ಮ್ಯೂಸಿಕ್ ಸಿಸ್ಟಮ್ ನಲ್ಲಿರುವ ಆಂಪ್ಲಿಫೈಯರ್ ಗೆ ಸುಲಭವಾಗಿ ಜೋಡಿಸಬಹುದಾಗಿದೆ.

* ಆಪರೇಟಿಂಗ್ ವಿಧಾನವು ಸುಲಭವಾಗಿದೆ.

ಈ ಸ್ಪೀಕರ್ ನಲ್ಲಿ ಕಂಡು ಬರುವ ದೋಷಗಳೆಂದರೆ ಇದರ ಶಬ್ದದ ವ್ಯಾಪ್ತಿ ಕ್ಷೇತ್ರ (ರೇಂಜ್) ಕಡಿಮೆ ಇದೆ. ಅಲ್ಲದೆ ಇದರ ಗುಣಮಟ್ಟ ಸಿ ಡಿ ಪ್ಲೇಯರ್ ನ ಗುಣಮಟ್ಟಕ್ಕಿಂತ ಕಡಿಮೆ ಇದೆ. ಈ ಸ್ಪೀಕರ್ ನ ಬಗ್ಗೆ ವಿಮರ್ಶಕರು ಹೇಳುವುದು ಏನೆಂದರೆ ಇದು ಬ್ಲೂಟೂಥ್ ಹೊಂದಿರುವ ಸಾಧನಗಳಲ್ಲಿ ಹೊರಡಿಸುವ ಶಬ್ದಕ್ಕಿಂತ ಮೈಕ್ರೊ ಸಾಧನಗಳಾದ ಸ್ಮಾರ್ಟ್ ಫೋನ್ ಗಳಲ್ಲಿ, ಟ್ಯಾಬ್ಲೆಟ್ ಗಳಲ್ಲಿ ಹೆಚ್ಚಿನ ಶಬ್ದವನ್ನು ನೀಡುತ್ತದೆ.

ವೀಝಿ ಸ್ಪೀಕರ್ ಅನ್ನು ಐಕಾನ್ ವೀಝಿ ವೆಬ್ ಸೈಟ್ ನಿಂದ ನೇರವಾಗಿ ಕೊಳ್ಳಬಹುದಾಗಿದ್ದು ಇದರ ಮಾರುಕಟ್ಟೆ ಬೆಲೆ ರು. 4,000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot