ಬರಲಿದೆ ಸಿ 5 ಮಾಡಲ್ ಇಯರ್ ಫೋನ್

Posted By:
ಬರಲಿದೆ ಸಿ 5 ಮಾಡಲ್ ಇಯರ್ ಫೋನ್

ಆಡಿಯೊ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಬೌವರ್ಸ್ ಮತ್ತು ವಿಲ್ಕಿನ್ಸ್ ಇತ್ತೀಚಿಗೆ ಇಯರ್ ಫೋನ್ ನಲ್ಲಿ ಸಿ 5 ಮಾಡಲ್ ಅನ್ನು ಬಿಡುಗಡೆ ಮಾಡಿದೆ.ಈ ಸಿ 5 ಮಾಡಲ್ ಹೆಡ್ ಫೋನ್ ಕಡಿಮೆ ತೂಕವನ್ನು ಹೊಂದಿರುವುದರಿಂದ ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ.

ಈ ಹೆಡ್ ಫೋನ್ ಬಳಸಿದರೆ ಯಾವುದೆ ಹೊರಗಿನ ಗದ್ದಲದ ಕಿರಿಕಿರಿ ಇರುವುದಿಲ್ಲ. ಇದನ್ನು ಬಲಸಿ ಬಳಕೆದಾರರು ಸಂಗೀತವನ್ನು ಕಳುತ್ತಿದ್ದರೆ ಇದರ ಶಬ್ದದ ಗುಣಮಟ್ಟ ಅವರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುವಷ್ಟು ಉತ್ತಮ ಗುಣ ಮಟ್ಟದ ಶಬ್ದನ್ನು ನೀಡುತ್ತದೆ.

ಇದರಲ್ಲಿ MFI ಕೇಬಲ್ ಬಳಸಲಾಗಿದ್ದು ಇದು ಕಾಲ್ ಮತ್ತು ಸಂಗೀತವನ್ನು ಕೇಳುವಾಗ ಬಳಕೆದಾರನಿಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಅಲ್ಲದೆ ಈ ಕೇಬಲ್ ನಲ್ಲಿ ರಿಮೋಟ್ ಕಂಟ್ರೋಲ್ ಇದ್ದು ಶಬ್ದವನ್ನು ನಿಯಂತ್ರಿಸಲು ಬಳಸಲಾಗುತ್ತದೆ.ಈ ಹೆಡ್ ಫೋನ್ 0.7 ಔನ್ಸ್ ಕಡಿಮೆ ತೂಕವನ್ನು ಹೊಂದಿದ್ದು, ಇದರಲ್ಲಿ ಶಬ್ದದ ಕಂಪನಾಂಕ 10Hz ನಿಂದ 20 kHzಆಗಿದೆ. ಇದರಲ್ಲಿ ಇಂಪೆಡೆನ್ಸ್ 32 Ohms ಬಳಸಿದ್ದು ಇದರ ಸೆನ್ಸಟಿವಿಟಿ 118 dB SPL per 1 mW ಆಗಿದೆ.

ಇದರಲ್ಲಿ 2 ಏರ್ ಲೈನ್ ಅಡಾಪ್ಟರ್ ಸಹ ಇದ್ದು 3.5 mm ಕನೆಕ್ಟರ್ ಹೊಂದಿದೆ. ಈ ಹೆಡ್ ಪೋನ್ ಅನ್ನು ಜೊತೆಗೆ ಕೊಂಡೊಯ್ಯಲು ಕಪ್ಪು ಜಿಪ್ಪ್ ಇರುವ ಕೇರಿಂಗ್ ಕೇಸ್ ಹೊಂದಿದೆ. ಇನ್ನಷ್ಟೆ ಬರಲಿರುವ ಈ ಹೆಡ್ ಫೋನ್ ಬೆಲೆಯನ್ನು ಕಂಪನಿಯು ಇದುವರೆಗೆ ಪ್ರಕಟಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot