EP ಸಿರಿಸ್ ಕ್ರಿಯೇಟಿವ್ ಇಯರ್ ಫೋನ್

|
EP ಸಿರಿಸ್ ಕ್ರಿಯೇಟಿವ್  ಇಯರ್ ಫೋನ್

ಹೆಡ್ ಫೋನ್ ಮತ್ತು ಇಯರ್ ಫೋನ್ ಸಂಗೀತ ಪ್ರೇಮಿಗಳಿಗೆ ಪ್ರಿಯವಾದ ಗ್ಯಾಡ್ಜೆಟ್. ಹೆಚ್ಚಿನವರು ಅದರಲ್ಲೂ ಹೆಡ್ ಫೋನ್ ಒಳ್ಳೆಯ ಗುಣಮಟ್ಟದ ಶಬ್ದವನ್ನು ಹೊಂದಿರುವುದರಿಂದ ಅದನ್ನೆ ಆಯ್ಕೆ ಮಾಡುತ್ತಾರೆ. ಈ ಹೆಡ್ ಫೋನ್ ತಯಾರಿಕೆಯಲ್ಲಿ ಹೆಸರುವಾಸಿ ಆಗಿರುವ ಕಂಪನಿಗಳಲ್ಲಿ ಕ್ರಿಯೇಟಿವ್ ಟೆಕ್ನಾಲಜಿ ಕೂಡ ಒಂದು.

ಇದೀಗ ಕಂಪನಿ 2 ಹೊಸ ಹೆಡ್ ಫೋನ್ EP ಇಯರ್ ಫೋನ್ ಮಾಡಲ್ ತಂದಿದ್ದು ಅವುಗಳನ್ನು EP ಸಿರಿಸ್ ಇಯರ್ ಫೋನ್ ಮತ್ತು EP ನಾಯ್ಸ್ ಐಸೋಲೇಶನ್ ಇಯರ್ ಫೋನ್ ಎಂದು ಹೆಸರಿಡಲಾಗಿದೆ. ಈ ಇಯರ್ ಫೋನ್ ಹಗುರವಾಗಿದ್ದು ಇವುಗಳು ಹೊರಗಿನ ಗದ್ದಲವನ್ನು ನಿಯಂತ್ರಿಸಿ ಉತ್ತಮ ಗುಣಮಟ್ಟದ ಶಬ್ದವನ್ನು ನೀಡುತ್ತದೆ.

ಅದರಲ್ಲೂ ನಾಯ್ಸ್ ಐಸೋಲೇಶನ್ ನಲ್ಲಿ ನಿಯೊಡೈನಾಮಿಕ್ ಮ್ಯಾಗ್ನೆಟ್ ಡ್ರೈವರ್ ತಂತ್ರಜ್ಞಾನವನ್ನು ಹೊಂದಿರುವುದರಿಂದ ಇದರ ಗುಣಮಟ್ಟ ಉತ್ತಮವಾಗಿದೆ. ಈ ಹೆಡ್ ಫೋನ್ ಅನ್ನು ವಿಮಾನದಲ್ಲಿ ಹೋಗುವಾಗಲೂ ಬಳಸಬಹುದಾಗಿದ್ದು ಯಾವುದೆ ಶಬ್ದದ ಗುಣಮಟ್ಟದಲ್ಲಿ ಯಾವುದೆ ತೊಂದರೆ ಉಂಟಾಗುವುದಿಲ್ಲ. ಪ್ರಯಾಣದಲ್ಲಿದ್ದಾಗ ಸುತ್ತಲಿನ ಗದ್ದಲದಿಂದ ಬಳಕೆದಾರರಿಗೆ ಕಿರಿಕಿರಿಯಾಗುವುದು ಸಹಜ, ಆದರೆ ಈ ಹೆಡ್ ಪೋನ್ ಬಳಸಿದರೆ ಇಂತಹ ಕಿರಿಕಿರಿ ಉಂಟಾಗುವುದಿಲ್ಲ.

ಇನ್ನಷ್ಟೆ ಭಾರತಕ್ಕೆ ಪಾದಾರ್ಪಣೆ ಮಾಡಲಿರುವ ಈ ಹೆಡ್ ಫೋನ್ ಗಳ ಭಾರತೀಯ ಮಾರುಕಟ್ಟೆ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X