ಇಲ್ಲಿದೆ ನೂತನ ವಿನ್ಯಾಸದ ಇಯರ್ ಫೋನ್

Posted By: Staff
ಇಲ್ಲಿದೆ ನೂತನ ವಿನ್ಯಾಸದ ಇಯರ್ ಫೋನ್
 

ಆಂಡ್ರಾಯ್ಡ್ ಸಾಧನಗಳು ಹೆಚ್ಚುತ್ತಿದ್ದಂತೇ ಇವುಗಳಿಗೆ ಅಗತ್ಯವಾದ ಇನ್ನಿತರ ಸಾಧನಗಳ ತಯಾರಿಕೆಯೂ ಹೆಚ್ಚುತ್ತಿದೆ. ಅದೇ ರೀತಿ ಇದೀಗ ಮಾರುಕಟ್ಟೆಯಲ್ಲಿ ಎಟಿಮೋಟಿಕ್ hf2 ಇಯರ್ ಫೋನ್ ತೆರೆಕಂಡಿದೆ. ಅದರ ಗುಣ ಲಕ್ಷಣಗಳೇನೆಂದು ಇಲ್ಲಿ ತಿಳಿಯೋಣ ಬನ್ನಿ.

ಎಟಿಮೋಟಿಕ್ hf2 ಇಯರ್ ಫೋನ್ ವಿಶೇಷತೆ:

* ಉತ್ತಮ ಗುಣಮಟ್ಟದ ಶಬ್ಧ

* ನಾಯ್ಸ್ ಕ್ಯಾನ್ಸಲಿಂಗ್ ಇಯರ್ ಬಡ್

* ಇನ್ ಲೈನ್ ರಿಮೋಟ್

* ಇಯರ್ ಬಡ್ ಗೆ ಸೌಂಡ್ ಫಿಲ್ಟರ್ಸ್

ಈ ಇಯರ್ ಫೋನ್ ಗಳ ವಿನ್ಯಾಸವೂ ಆಕರ್ಷಕವಾಗಿದೆ. ಇದು ಕ್ಯಾನಲ್ ಇಯರ್ ಫೋನ್ ಆದ ಕಾರಣದಿಂದ ಇದರಲ್ಲಿ ನಾಯ್ಸ್ ಕ್ಯಾನ್ಸಲೇಶನ್ ಇದೆ. ನಿಮ್ಮ ಕಿವಿಗಳಿಗೆ ಈ ಇಯರ್ ಫೋನ್ ಅಳತೆ ಸರಿಹೊಂದಲಿಲ್ಲವೆಂದರೆ ಅದನ್ನು ಎಟಿಮೋಟಿಕ್ ಕೇಂದ್ರಗಳಲ್ಲಿ ಸರಿ ಮಾಡಿಸಿಕೊಳ್ಳಬಹುದು.

ಇದರಲ್ಲಿ ಅಳವಡಿಸಿರುವ ಮೈಕ್ರೊಫೋನ್ ಗಳು ಉತ್ಕ್ರಷ್ಟ ಮಟ್ಟದ್ದಾಗಿದೆ. ಈ ಇಯರ್ ಫೋನ್ ನ ನಾಯ್ಸ್ ಕ್ಯಾನ್ಸಲೇಶನ್ ನಿಂದ ನಿಮ್ಮ ಇಚ್ಛೆಯ ಹಾಡುಗಳನ್ನು ಮನಸೋಪೂರ್ವಕವಾಗಿ ಕೇಳಬಹುದು. ಈ ಎಟಿಮೋಟಿಕ್ hf2 ಇಯರ್ ಫೋನ್ ಬೆಲೆ 6,000 ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot