ಐಪ್ಯಾಡ್ ಗೆ ಫಿಟ್ ಈ ಐ ಮೇನ್ ಗೊ ಸ್ಪೀಕರ್

|

ಐಪ್ಯಾಡ್ ಗೆ ಫಿಟ್ ಈ ಐ ಮೇನ್ ಗೊ ಸ್ಪೀಕರ್
ಪ್ರಯಾಣ ಮಾಡುವಾಗ ಟ್ಯಾಬ್ಲೆಟ್ ಜೊತೆಯಲ್ಲಿದ್ದರೆ ಅದರಿಂದ ಹಾಡುಗಳನ್ನು ಎರಡು ರೀತಿಯಲ್ಲಿ ಕೇಳಬಹುದು. ಹೆಡ್ ಫೋನ್ ಗಳನ್ನು ಟ್ಯಾಬ್ಲೆಟ್ ಗೆ ಪ್ಲಗ್ ಮಾಡಿ ಅಥವಾ ಇಂಟಿಗ್ರೇಟಡ್ ಸ್ಪೀಕರ್ ಮುಖಾಂತರ ಕೇಳಬಹುದು. ಆದರೆ ಈ ಟ್ಯಾಬ್ಲೆಟ್ ನಲ್ಲಿರುವ ಸ್ಪೀಕರ್ ನಲ್ಲಿ ಸೌಂಡು ಅಷ್ಟು ಜೋರಾಗಿ ಕೇಳಿ ಬರುವುದಿಲ್ಲ.

ಟ್ಯಾಬ್ಲೆಟ್ ನಲ್ಲಿರುವ ಈ ದೋಷವನ್ನು ಮಾರುಕಟ್ಟೆಯಲ್ಲಿ ದೊರೆಯುವ ಸ್ಪೀಕರ್ ಬಳಸಿ ಪರಿಹರಿಸಬಹುದು. ಆದರೆ ಪ್ರಯಾಣ ಮಾಡುವಾಗ ಇಂತಹ ಸ್ಪೀಕರ್ ಬಳಸುವುದರಿಂದ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಈ ಸಮಸ್ಯೆಯನ್ನು ಅರ್ಥೈಸಿಕೊಂಡ ಐಮೇನ್ ಗೊ ಕಂಪನಿ ಇದೀಗ ಐ ಮೇನ್ ಗೊ XP ಸ್ಪೀಕರ್ ತಯಾರಿಸಿದ್ದು ಇದು ಬಳಕೆದಾರರ ಬೇಡಿಕೆಯನ್ನು ಪೂರೈಸುವಂತೆ ಇದೆ.

ಐ ಮೇನ್ ಗೊ XP ಸ್ಪೀಕರ್ ಜೊತೆಗೆ ಕೊಂಡೊಯ್ಯಲು ಸುಲಭವಾಗಿರುವಂತೆ ಇದೆ. ಈ ಸ್ಪೀಕರ್ ಐಪ್ಯಾಡ್ ಮತ್ತು ಐಪ್ಯಾಡ್2ರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಸಾಧನವು ನೋಡಲು ಪ್ರೊಟೆಕ್ಟವ್ ಕೇಸ್ ನಂತೆ ಇದ್ದು, ಇದರಲ್ಲಿ ಐಪ್ಯಾಡ್ ಫಿಟ್ ಆಗಿ ಕೂರುತ್ತದೆ. ಇದರಿಂದಾಗಿ ಸ್ಪೀಕರ್ ಇಡಲು ಅಧಿಕ ಸ್ಥಳದ ಅವಶ್ಯಕತೆಯಲ್ಲ.

ಈ ಸ್ಪೀಕರ್ ಕೇಸ್ ಜೊತೆ ಸ್ಟ್ಯಾಂಡ್ ಕೂಡ ದೊರೆಯುತ್ತಿದ್ದು ಇದರಲ್ಲಿ ಎರಡು 3.5 mm ಅಡಿಯೊ ಜಾಕ್ ಕೂಡ ನೀಡಲಾಗುವುದು. ಈ ಗ್ಯಾಡ್ಜೆಟ್ ಪೂರ್ಣ ಚಾರ್ಜ್ ಆಗಲು 8-10 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಚಾರ್ಜ್ ಬಳಸಿ ನಿರಂತವಾಗಿ 6 ಗಂಟೆಗಳ ಕಾಲ ಹಾಡುಗಳನ್ನು ಕೇಳಬಹುದು.

ಐ ಮೇನ್ ಗೊ XP ಸ್ಪೀಕರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು. 6,000 ಅಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X