Subscribe to Gizbot

ಆಪಲ್ ಗ್ಯಾಡ್ಜೆಟ್ ಗೆ ಬಂದಿದೆ ಇನ್ ಕೇಸ್ ರಿಫ್ಲೆಕ್ಸ್ ಹೆಡ್ ಪೋನ್

Posted By:
ಆಪಲ್ ಗ್ಯಾಡ್ಜೆಟ್ ಗೆ ಬಂದಿದೆ ಇನ್ ಕೇಸ್ ರಿಫ್ಲೆಕ್ಸ್ ಹೆಡ್ ಪೋನ್

ಉತ್ತಮ ಗುಣಮಟ್ಟದ ಆಡಿಯೊ ವಸ್ತುಗಳ ತಯಾರಿಯಿಂದ ಇನ್ ಕೇಸ್ ಹೆಸರು ಒಂದು ಬ್ರಾಂಡ್ ಆಗಿ ಗ್ರಾಹಕರ ಮೆಚ್ಚುಗೆಯನ್ನು ಗಳಿಸಿದೆ. ಇದೀಗ ಈ ಕಂಪನಿಯು ಆಪಲ್ ವಸ್ತುಗಳಲ್ಲಿ ಬಳಸ ಬಹುದಾದ ಇನ್ ಕೇಸ್ ರಿಫ್ಲೆಕ್ಸ್ ಹೆಡ್ ಪೋನ್ ಬಿಡುಗಡೆ ಮಾಡಿದೆ.

ಈ ಹೆಡ್ ಪೋನ್ ಆರ್ಟಿಕ್ಯುಲೇಟ್ ಇಯರ್ ಕಪ್ ಹೊಂದಿದ್ದು ಇದನ್ನು ಬಳಸಿ ಕಿವಿಗೆ ಹೊಂದುವಂತೆ ಇಟ್ಟು ಬಳಸಲು ಸುಲಭವಾಗಿದೆ. ಈ ಇಯರ್ ಪೋನ್ ಸೂಡೆ ಕವರ್ಡ್ ಫೋಮ್ ಬಳಸಿರುವುದರಿಂದ ಹೊರಗಿನ ಗದ್ದಲವನ್ನು ಇದು ನಿಯಂತ್ರಿಸುತ್ತದೆ.ಈ ವಸ್ತುವಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುವಂತಹ ಆಡಿಯೊ ಡ್ರೈವರ್ ಅನ್ನು ಬಳಸಲಾಗಿದೆ.

ಇದರಲ್ಲಿ ಶುದ್ಧತೆಯ ಅನ್ನು ಕಾಪಾಡಲು ಕಾಣದ ಜೋಡನೆ ಮತ್ತು ಸ್ವಲ್ಪ ಬಾಗಿರುವಾಗೆ ಮಾಡಲಾಗಿದೆ. ಈ ಹೆಡ್ ಪೋನ್ ನಲ್ಲಿ ಇಂಟಿಗ್ರೇಟ್ ಡ್ ಮೈಕ್ರೊಫೋನ್ ಮತ್ತು ರಿಮೋಟ್ ಕಂಟ್ರೋಲ್ ಇದ್ದು, ಮ್ಯಾಕ್ ಬುಕ್, ಐಪೋಡ್, ಐಫೋನ್ ಗಳಲ್ಲಿ ಬಳಸಬಹುದಾಗಿದೆ.ಈ ಹೆಡ್ ಫೋನ್ ನಲ್ಲಿ ಶಬ್ದದ ಕಂಪನಾಂಕ 20 HZ ಯಿಂದ 20 kHz ಆಗಿದೆ. ಅಲ್ಲದೆ ಇದರ ಇಂಪೆಡೆನ್ಸ್ 32+- 3dB@1KHz ನೀಡಲಾಗಿದ್ದು , ಇದರ ಶಬ್ದದ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ 97+-3dB@1KHz ಆಗಿದೆ.

ಈ ಹೆಡ್ ಫೋನ್ ಉತ್ತಮ ಗುಣ ಮಟ್ಟದಿಂದಾಗಿ ಬಳಕೆದಾರರ ಮೆಚ್ಚುಗೆಯನ್ನು ಗಳಿಸುವುದರಲ್ಲಿ ಯಾವುದೆ ಸಂಶಯವಿಲ್ಲ, ಈ ಹೆಡ್ ಪೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದನ್ನು ಕೊಳ್ಳಬಯಸುವವರಿಗೆ ಸುಮಾರು. ರು. 4, 000ಕ್ಕೆ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot