ಸ್ಪಷ್ಟ ಶಬ್ದಕ್ಕೆ ಸೋನಿಕ್ ಹೆಡ್ ಫೋನ್

|
ಸ್ಪಷ್ಟ ಶಬ್ದಕ್ಕೆ ಸೋನಿಕ್ ಹೆಡ್ ಫೋನ್

ಆಪಲ್ ಐಪ್ಯಾಡ್ ಮತ್ತು ಐಫೋನ್ ಗಳ ಬಿಡಿ ಸಾಧನಗಳನ್ನು ತಯಾರಿಸುವ ಇನ್ ಕೇಸ್ ಕಂಪನಿ ಸೋನಿಕ್ ಹೆಡ್ ಫೋನ್ ಗಳನ್ನು ತಯಾರಿಸಿದೆ. ಈ ಹೆಡ್ ಫೋನ್ ನೋಡಲು ಆಕರ್ಷಕವಾಗಿದ್ದು, ಇದು ಸ್ಪಷ್ಟವಾದ ಶಬ್ದವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಕಾರ್ಡ್ ಸಾಫ್ಟ್ ಆಗಿದ್ದು , ಗೆರೆಗಳು ಬೀಳದಂತೆ ತಡೆಯುವ ಲಕ್ಷಣವನ್ನು ಹೊಂದಿದೆ. ಇದಲ್ಲದೆ ಈ ಹೆಡ್ ಪೋನ್ ಮುಖ್ಯವಾಗಿ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಇಯರ್ ಕಪ್ ಕಿವಿಯಲ್ಲಿ ಸರಿಯಾಗಿ ಹೊಂದಿಕೊಂಡು ನಿಲ್ಲುತ್ತದೆ

* ಇದರಲ್ಲಿರುವ ಟೈಟಾನಿಯಂ ಆಡಿಯೊ ಡ್ರೈವರ್ಸ್ ಗದ್ದಲವನ್ನು ಕಡಿಮೆ ಮಾಡುತ್ತದೆ.

* ಇದರಲ್ಲಿ ಆಡಿಯೊ ಜಾಕ್ ಬಲ ಭಾಗದಲ್ಲದೆ.

* ¼ ಕೇಬಲ್ ಅಡಾಪ್ಟರ್ ಹೊಂದಿದೆ.

* ಇದರಲ್ಲಿ ಶಬ್ದದ ಸಾಮರ್ಥ್ಯ 20-hz ಯಿಂದ 20 kHzರವರೆಗೆ ಹೊಂದಿದೆ.

* 32 ohm ಇಂಪೆಡೆನ್ಸ್

ವಿಮರ್ಶಕರ ಪ್ರಕಾರ ಸೋನಿಕ್ ಹೆಡ್ ಫೋನ್ ಶಬ್ದದಲ್ಲಿ ಒಳ್ಳೆಯ ಗುಣಮಟ್ಟವನ್ನು ಹೊಂದಿದ್ದು ಇದರಲ್ಲಿರುವ ಅಧಿಕ ಕಂಪನಾಂಕದಿಂದಾಗಿ ಕೆಲವೊಮ್ಮೆ ಇದರಿಂದ ಕಿರಿಕಿರಿ ಉಂಟಾಗುತ್ತದೆ ಎಂದಿದ್ದಾರೆ. ಈ ಹೆಡ್ ಫೋನ್ ನಲ್ಲಿ 3.5 ಅಡಿಯ ಕೇಬಲ್, ಇನ್ ಲೈನ್ ಮೈಕ್ರೊಫೋನ್ ಮತ್ತು ಇದರ ಕಾರ್ಯಗಳನ್ನು ಕಂಟ್ರೋಲ್ ಮಾಡಲು 3 ಬಟನ್ ಗಳಿವೆ.

ಸ್ಪಷ್ಟವಾದ ಶಬ್ದವನ್ನು ನೀಡುವ ಈ ಹೆಡ್ ಫೋನ್ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದ್ದು ಇದರ ಬೆಲೆ ರು. 10,000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X