Subscribe to Gizbot

ಕ್ಲಿಪ್ಚ್ ಇಮೇಜ್ ಒನ್ ಹೆಡ್ ಸೆಟ್ ನಂಬರ್ ಒನ್ ಆಗಬಹುದೆ?

Posted By:
 ಕ್ಲಿಪ್ಚ್ ಇಮೇಜ್ ಒನ್ ಹೆಡ್ ಸೆಟ್ ನಂಬರ್ ಒನ್ ಆಗಬಹುದೆ?

ಕ್ಲಿಪ್ಚ್ ಹೆಸರು ಮಾರುಕಟ್ಟೆಯಲ್ಲಿ ಚಿರಪರಿಚಿತ. ಈ ಕ್ಲಿಪ್ಚ್ ಅನೇಕ ರೀತಿಯ ಮಾಡಲ್ ಗಳು ಮಾರುಕಟ್ಟೆಯಲ್ಲಿದ್ದು , ಇದರ ಸಾಧನಗಳಿಗೆ ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಅದಕ್ಕೆ ಕಾರಣ ಅದರ ಉತ್ತಮ ಗುಣಮಟ್ಟ ಮತ್ತು ಆಕರ್ಷಕ ವಿನ್ಯಾಸ. ಇದೀಗ ಈ ಕ್ಲಿಪ್ಚ್ ಮತ್ತೊಂದು ಹೆಡ್ ಸೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ಕ್ಲಿಪ್ಚ್ ಇಮೇಜ್ ಒನ್ ಹೆಡ್ ಸೆಟ್ ಎಂದು ಹೆಸರಿಸಲಾಗಿದೆ.

ಈ ಹೆಡ್ ಫೋನ್ ಕಪ್ಪು ಬಣ್ಣವನ್ನು ಹೊಂದಿದ್ದು, ಅದರ ಪ್ಯಾಡಿಂಗ್ ಅನ್ನು ಲೆದರ್ ಬಳಸಿ ತಯಾರಿಸಲಾಗಿದೆ. ಅದರ ಹೊರ ಭಾಗದಲ್ಲಿ ಕ್ಲಿಪ್ಚ್ ಲೋಗೊ ಸಹ ನೀಡಲಾಗಿದೆ. ಇದನ್ನು ಬಳಕೆದಾರರು ತುಂಬಾ ಹೊತ್ತು ಬಳಸಿದರೂ ಸಹಾ ಯಾವುದೆ ಕಿರಿಕಿರಿ ಉಂಟಾಗುವುದಿಲ್ಲ. ಇದರ ಆಡಿಯೊ ಕೇಬಲ್ ನಲ್ಲಿ ಇಂಟಿಗ್ರೇಟಡ್ ಮೈಕ್ರೊಫೋನ್ ಮತ್ತು ಐಫೋನ್ ಕಂಟ್ರೋಲ್ ಅಳವಡಿಸಲಾಗಿದೆ. ಇದನ್ನು ಬಳಸಿ ಹಾಡಿನ ಟ್ರ್ಯಾಕ್ ಬದಲಾಯಿಸುವುದು, ಶಬ್ದದ ನಿಯಂತ್ರಣ ಮಾಡಬಹುದಾಗಿದೆ.

ಈ ಹೆಡ್ ಫೋನ್ ತೆಗೆಯುವಾಗ ಜೊತೆಗೆ ಇದಕ್ಕೆ ಹಾನಿಯಾಗದಂತೆ ತಡೆಯಲು ಜಿಪ್ ಅಪ್ ಪ್ರೊಟೆಕ್ಟಿವ್ ಕೇಸ್ ಸಹ ನೀಡಲಾಗುವುದು. ಇದರಲ್ಲಿ ¼ ಇಂಚಿನ ಅಡಾಪ್ಟರ್ ಇದ್ದು, ಚಿಕ್ಕ ಹೆಡ್ ಫೋನ್ ಜಾಕ್ ಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಬಳಸಬಹುದು.ಇದರಲ್ಲಿರುವ ಒಳ್ಳೆಯ ಅಂಶವೆಂದರೆ ಇದನ್ನು ಬಳಸಿದರೆ ಶಬ್ದವು ತುಂಬಾ ಸ್ಪಷ್ಟವಾಗಿ ಜೋರಾಗಿ ಕೇಳಿಸುತ್ತದೆ. ಹಾಗಂತ ಇದರ ಶಬ್ದವನ್ನು ಮತ್ತಷ್ಟು ಜೋರು ಮಾಡಿದರೆ ನೀವು ಯಾವ ಹಾಡು ಕೇಳಿದ್ದೀರಾ ಅದು ನಿಮ್ಮ ಪಕ್ಕ ನಿಂತವರೆಗೂ ಕೇಳಿಸುತ್ತದೆ. ಏಕೆಂದರೆ ಇದು ಗದ್ದಲವನ್ನು ತಡೆಯಿಡುವಲ್ಲಿ ಅಷ್ಟು ಸಮರ್ಥವಾಗಿಲ್ಲ.

ಕ್ಲಿಪ್ಚ್ ಇಮೇಜ್ ಒನ್ ಹೆಡ್ ಫೋನ್ ಮಾರುಕಟ್ಟೆಯಲ್ಲಿ ರು.6, 500ಕ್ಕೆ ಲಭ್ಯವಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot