ಗದ್ದಲ ನಿಯಂತ್ರಿಸುವ ಪ್ರಥಮ ಕ್ಲಿಪ್ಚ್ ಹೆಡ್ ಫೋನ್

Posted By:
ಗದ್ದಲ ನಿಯಂತ್ರಿಸುವ ಪ್ರಥಮ ಕ್ಲಿಪ್ಚ್ ಹೆಡ್ ಫೋನ್
ಹೆಡ್ ಫೋನ್ ಗಳ ಮಾರುಕಟ್ಟೆಯಲ್ಲಿ ಕ್ಲಿಪ್ಚ್ ಹೆಡ್ ಫೋನ್ ಗಳಿಗೆ ಉತ್ತಮ ಮಾರುಕಟ್ಟೆ ಇದೆ. ಆದರೆ ಇದುವರೆಗಿನ ಕ್ಲಿಪ್ಚ್ ಹೆಡ್ ಫೋನ್ ಗಳಲ್ಲಿ ಗದ್ದಲವನ್ನು ನಿಯಂತ್ರಿಸುವ ತಂತ್ರಜ್ಞಾನವಿರಲಿಲ್ಲ. ಆದರೆ ಇದೀಗ ಕ್ಲಿಪ್ಚ್ ಗದ್ದಲ ನಿಯಂತ್ರಣ ಮಾಡುವಂತಹ ಹೊಸ ಹೆಡ್ ಫೋನ್ ಕ್ಲಿಪ್ಚ್ ಮೋಡ್ M40 ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಕ್ಲಿಪ್ಚ್ ಮೋಡ್ ಹೆಡ್ ಫೋನಿನಲ್ಲಿ ಈ ಕೆಳಗಿನ ಲಕ್ಷಣಗಳನ್ನು ಕಾಣಬಹುದು.

1. ಒಳ್ಳೆಯ ಸ್ಷೈಲಿಷ್ ವಿನ್ಯಾಸ

2. 40 mm ವೂಫರ್ಸ್

3. 20 Hz – 20 KHz ಕಂಪನಾಂಕ

4. ಇನ್ ಪುಟ್ ಇಂಪೆಡೆನ್ಸ್ 1 KHz ಅಂದರೆ 320 ohms

5. ಸೆನ್ಸಟಿವಿಟಿ 97.5 dB

6. 356 ಗ್ರಾಂ ತೂಕ

ಈ ಹೆಡ್ ಫೋನ್ ಒಳಗಡೆ ಇನ್ ಲೈನ್ ಮೈಕ್ರೊಫೋನ್ ಇದ್ದು ಇದನ್ನು ಐಫೋನ್ ನೊಂದಿಗೆ ಕೂಡ ಬಳಸಬಹುದು. ಇದರ ಕಂಟ್ರೋಲ್ ಬಟನ್ ಗಳು ನೋಡಿದರೆ ತಕ್ಷಣವೆ ಕಾಣಿಸುವುದಿಲ್ಲ, ಏಕೆಂದರೆ ಇಯರ್ ಕಪ್ ಮೇಲೆ ಬಟನ್ ಇರಿಸಲಾಗಿದೆ. ಆದರೆ ಬಟನ್ ಸುಲಭವಾಗಿ ಕೈಗೆ ಸಿಗುವುದರಿಂದ ಬಳಕೆದಾರರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot