Subscribe to Gizbot

ಭಾರತೀಯ ಮಾರುಕಟ್ಟೆಯಲ್ಲಿ ಅಮೆರಿಕದ ಇಯರ್ ಫೋನ್

Posted By:
 ಭಾರತೀಯ ಮಾರುಕಟ್ಟೆಯಲ್ಲಿ ಅಮೆರಿಕದ ಇಯರ್ ಫೋನ್

ಅಮೆರಿಕಾದ ಹೆಡ್ ಫೋನ್ ತಯಾರಿಸುವ ಕಂಪನಿ ಕೋಸ್ KEB40 ಹೆಸರಿನ ಇಯರ್ ಫೋನ್ ಬಿಡುಗಡೆ ಮಾಡಿದೆ. ಈ ಇಯರ್ ಫೋನ್ ಭಾರತದಲ್ಲಿ ಸಹ ಕೂಡ ಲಭ್ಯವಿದೆ.

ಸುದ್ದಿ ಮೂಲದ ಪ್ರಕಾರ ಕೋಸ್ KEB40 ಇದರಲ್ಲಿ ಶಬ್ದದ ಗುಣಮಟ್ಟ ಹೇಳುಕೊಳ್ಳುವ ಮಟ್ಟಿನಷ್ಟು ಇಲ್ಲ ಎಂದು ಹೇಳಲಾಗುತ್ತದೆ. ಇದರಲ್ಲಿ ಕ್ಲಾಸಿಕಲ್ ಸಂಗೀತವನ್ನು ಕೇಳಲು ಚೆನ್ನಾಗಿದ್ದು ಹಿಪ್ ಹಾಪ್ ಸಂಗೀತಕ್ಕೆ ಸಂಗೀತಕ್ಕೆ ಸಷ್ಟೊಂದು ಸೂಕ್ತವಾಗಿಲ್ಲವಾಗಿದೆ. ಇದನ್ನು ಗೆಲಾಕ್ಸಿ S ಟ್ಯಾಬ್ಲೆಟ್ ಗೆ ಜೋಡಿಸಿ ಇದರ ಗುಣಮಟ್ಟವನ್ನು ಪರೀಕ್ಷೆ ಮಾಡಿದಾಗ ತೃಪ್ತಿಕರವಾಗಿದೆ ಅಷ್ಟೆ.

ಅಲ್ಲದೆ ಈ ಇಯರ್ ಫೋನ್ ನಲ್ಲಿ ಹೆಚ್ಚಿನ ಗುಣ ಮಟ್ಟದ ಶಬ್ದವನ್ನು ಕೊಡುವುದರಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಈ ಇಯರ್ ಫೋನ್ ಬೆಲೆ 2000 ಇದ್ದು ಅದಕ್ಕೆ ತಕ್ಕದಾದ ಗುಣಮಟ್ಟವನ್ನು ಹೊಂದಿದ್ದರೂ ಇದರ ಅರ್ಧದಷ್ಟು ಬೆಲೆಗೆ ಇದಕ್ಕಿಂತ ಉತ್ತಮ ಗುಣಮಟ್ಟದ ಇಯರ್ ಫೋನ್ ಲಭ್ಯವಿರುವಾಗ ಇದು ಗ್ರಾಹಕನ ಮೆಚ್ಚುಗೆಯನ್ನು ಗಳಿಸುವುದು ಕಷ್ಟಕರವಾಗಿದೆ.

ಈ ಇಯರ್ ಫೋನ್ ಕಿವಿಗೆ ಸರಿಯಾಗಿ ಹೊಂದಿಕೊಂಡು ನಿಲ್ಲವಂತದದು ಆಗಿದ್ದು , ಇದರ ಉದ್ದ 4 ಅಡಿ ಇದೆ. ಇದು 3.5mm ಗೋಲ್ಡ್ ಪ್ಲೇಟ್ಡ್ ಕನೆಕ್ಟರ್ ಹೊಂದಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಇಯರ್ ಫೋನ್ ಅನ್ನು ಮತ್ತಷ್ಟು ಗುಣಮಟ್ಟದಲ್ಲಿ ತಯಾರಿಸಬಹುದಿತ್ತು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot