8 ಸಾವಿರ ಬೆಲೆಯ ಸ್ಪೀಕರ್ ಗಳಲ್ಲಿ ಬೆಸ್ಟ್ ಈ ಲಾಗಿಟೆಕ್

Posted By:
8 ಸಾವಿರ ಬೆಲೆಯ ಸ್ಪೀಕರ್ ಗಳಲ್ಲಿ ಬೆಸ್ಟ್ ಈ ಲಾಗಿಟೆಕ್

 

 

 

ಲಾಗಿಟೆಕ್ S715i ಸ್ಪೀಕರ್ ಐಪೋಡ್ ಮತ್ತು ಐಫೋನ್ ಗಳಲ್ಲಿ ಬಳಸ ಬಹುದಾದ ಅತ್ಯುತ್ತಮವಾದ ಸ್ಪೀಕರ್ ಆಗಿದೆ ಎಂದು ವಿಮರ್ಶಕರು ಹೇಳಿದ್ದಾರೆ. ಈ ಲಾಗಿಟೆಕ್ ಸ್ಪೀಕರ್ ಅನ್ನು ಇದರಷ್ಟೆ ಬೆಲೆಯ ಇತರ ಸ್ಪೀಕರ್ ಗೆ ಹೋಲಿಸಿದಾಗ ಲಾಗಿಟೆಕ್ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.ಬೂಮ್ ಬಾಕ್ಸ್ ಆಕಾರದ ಈ ಸ್ಪೀಕರ್ ಬ್ಯಾಕ್ ಪ್ಯಾಕ್ ಗೆ ಸರಿಯಾಗಿ ಹೊಂದುವಂತೆ ಇದೆ.

ಇದರ ಗುಣಲಕ್ಷಣವೆಂದರೆ ಇದು ಏಪೋಡ್ ಡಾಕ್ ನಿಂದ ಕವರ್ ಆಗಿದ್ದು ಕಿಕ್ ಸ್ಟ್ಯಾಂಡ್ ನಲ್ಲಿ ಮಡಚಿ ಇಡಬಹುದಾಗಿದೆ. ಕಿಕ್ ಸ್ಟ್ಯಾಂಡ್ ಮತ್ತೊಂದು ಭಾಗದಲ್ಲಿ 2 ಇಂಚಿನ ಪ್ಯಾಸಿವ್ ರೇಡಿಯೇಟರ್ ವೂಫರ್ಸ್ ಇದ್ದು ಅದು ಸ್ಪೀಕರ್ ನಿಂದ ಅಧಿಕ ಗುಣಮಟ್ಟದ ಶಬ್ದವನ್ನು ಹೊರಡಿಸಲು ಸಹಾಯ ಮಾಡುತ್ತದೆ. ಈ ಕಿಕ್ ಸ್ಟ್ಯಾಂಡ್ ತಳದಲ್ಲಿಯಲ್ಲಿ ರಬ್ಬರ್ ಇರುವುದರಿಂದ ಈ ಸ್ಪೀಕರ್ ದೃಢವಾಗಿ ನಿಲ್ಲಲು ಸಹಾಯಮಾಡುತ್ತದೆ.

ಇದರಲ್ಲಿ 6 ಡ್ರೈವರ್ಸ್ ಇದ್ದು ಲೋಹವನ್ನು ಬಳಸಿ ತಯಾರಿಸಲಾಗಿದೆ.ಈ 6 ಡ್ರೈವರ್ಸ್ ಗಳಲ್ಲಿ ಬರಿ ನಾಲ್ಕು ಡ್ರೈವರ್ಸ್ ಗಳಿಗೆ ಮಾತ್ರ ನೇರವಾಗಿ ಶಬ್ದವನ್ನು ಹೊರಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಜೊತೆ 3 ಇಂಚಿನ ಡ್ರೈವರ್ಸ್ ಗಳ ನಡುವೆ 1/2 ಇಂಚಿನ ಟ್ವೀಟರ್ ಇಡಲಾಗಿದೆ. ಉಳಿದ 2 ಇಂಚಿನ ಡ್ರೈವರ್ಸ್ ಏರ್ ಡಿಸ್ ಪ್ಲೇ ನೆರವಿನೊಂದಿಗೆ ಶಬ್ದವನ್ನು ಉತ್ಪತ್ತಿ ಮಾಡುತ್ತದೆ. ಈ ಸ್ಪೀಕರ್ ನಲ್ಲಿ ಒಂದು 30-ಪಿನ್ ಕನೆಕ್ಟರ್ ಅನ್ನು ಬಳಸಲಾಗಿದೆ.

CNET ಹೇಳುವ ಪ್ರಕಾರ ಐಪೋಡ್ ಮತ್ತು ಐಫೋನ್ ಗಳಲ್ಲಿ ಬಳಸಲು ರು. 8000ಕ್ಕೆ ಸಿಗುವ ಸ್ಪೀಕರ್ ಗಳಲ್ಲಿ ಈ ಸ್ಪೀಕರ್ ಉತ್ತಮ ಗುಣಮಟ್ಟದ ಸ್ಪೀಕರ್ ಆಗಿದೆ.

ಈ ಸ್ಪೀಕರ್ ನ ಮುಖ್ಯ ಪ್ರಯೋಜನಗಳು:

* ಬೆಲೆ ಮತ್ತು ಕಾರ್ಯವೈಖರಿ ಗ್ರಾಹಕರ ಮೆಚ್ಚುಗೆಯನ್ನು ಗಳಿಸುವಂತೆ ಇದೆ.

* ನೋಡಲು ಆಕರ್ಷಕವಾಗಿದೆ

* ಅಲ್ಲದೆ ಈ ಸ್ಪೀಕರ್ ಅನ್ನು ಜೊತೆಯಲ್ಲಿ ಕೊಂಡೊಯ್ಯಬಹುದಾದಷ್ಟು ಹಗುರವಾಗಿದೆ.

ಅನಾನುಕೂಲ: ಈ ಸ್ಪೀಕರ್ ನಲ್ಲಿ ಗಡಿಯಾರ, EQ ಮತ್ತು FM ರೇಡಿಯೊದ ಸೌಲಭ್ಯವಿಲ್ಲ.ಆದರೆ ಸ್ಪೀಕರ್ ವಿಷಯಕ್ಕೆ ಬಂದಾಗ ಇವುಗಳ ಅಗತ್ಯ ಕೂಡ ಅಷ್ಟೇನು ಇಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot