ಉದ್ಯಮಿಗಳಿಗಾಗಿ ಬಂದಿದೆ ಲಾಗಿಟೆಕ್ ಹೆಡ್ ಸೆಟ್

Posted By:
ಉದ್ಯಮಿಗಳಿಗಾಗಿ ಬಂದಿದೆ ಲಾಗಿಟೆಕ್ ಹೆಡ್ ಸೆಟ್

ಲಾಗಿಟೆಕ್ ಕಂಪನಿಯು ಜನರಿಗೆ ಬಳಕೆಗೆ ಸುಲಭವಾಗುವಂತಹ ಆಡಿಯೊ ಸಾಧನಗಳನ್ನು ತಯಾರಿಸಿ ಸಂಗೀತ ಪ್ರಿಯರಿಗೆ ತುಂಬಾ ಹತ್ತಿರವಾಗಿದೆ. ಇದರ ಹೆಡ್ ಸೆಟ್ ಗಳು ನೋಡಲು ಆಕರ್ಷಕವಾಗಿದ್ದು ನೋಡುಗರ ಮನಸೆಳೆಯುವಂತಹ ವಿನ್ಯಾಸವನ್ನು ಹೊಂದಿದೆ. ಈಗ ಲಾಗಿಟೆಕ್ ಉದ್ಯಮಿಗಳಿಗಾಗಿ ಹೊಸ ಆಡಿಯೊ ಸಾಧನವನ್ನು ತಯಾರಿಸಿದೆ ಎಂಬ ಸುಧ್ಧಿ ತಿಳಿದು ಬಂದಿದೆ.

ಲಾಗಿಟೆಕ್3 ಹೊಸ ಹೆಡ್ ಸೆಟ್ ಗಳನ್ನು ತಯಾರಿಸಿದ್ದು , ಇದನ್ನು ಬಳಸಿ ಉದ್ಯೋಮಿಗಳು ಮಾಡುತ್ತಿರುವ ಕೆಲಸದಿಂದ ಗಮನವನ್ನು ಕಡಿಮೆಗೊಳಿಸದೆ ಕರೆಯನ್ನು ಸ್ವೀಕರಿಸುವಂತೆ ಇದನ್ನು ತಯಾರಿಸಲಾಗಿದೆ. ಈ ಹೆಡ್ ಸೆಟ್ ಗಳು ನೋಡಲು ಸುಂದರವಾಗಿದ್ದು ಅವುಗಳನ್ನು BH940, BH420 ಸ್ಟಿರಿಯೊ ಹೆಡ್ ಸೆಟ್ ಮತ್ತು BH410 ಮೊನೊ ಹೆಡ್ ಸೆಟ್ ಎಂದು ಹೆಸರಿಸಲಾಗಿದೆ.

ಇದರಲ್ಲಿ ದೂರ ಸಂವಹನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು BH410 ಮೊನೊ ಹೆಡ್ ಸೆಟ್ ದೊಡ್ಡ ಕಂಪನಿಯಲ್ಲಿರುವ ಉದ್ಯೋಗಿಗಳಿಗೆ ನೆರವಾಗುವಂತೆ ರೂಪಿಸಲಾಗಿದೆ. ತಾವು ಕೂತಲ್ಲಿಯೆ ಕುಳಿತು ಸ್ವಲ್ಪ ದೂರದಲ್ಲಿರು ಫೋನಿನಿಂದ ಕರೆಯನ್ನು ಈ ಹೆಡ್ ಸೆಟ್ ಅನ್ನು ಫೋನ್ ಗೆ ಜೋಡಿಸಿ ಕರೆಯನ್ನು ಸ್ವೀಕರಿಸಬಹುದು.

ಈ ಮೊನೊ ಹೆಡ್ ಸೆಟ್ ತುಂಬಾ ಹಗುರವಾಗಿದ್ದು ಕರೆ ಸ್ವೀಕರಿಸುವಾಗ ಸ್ಪಷ್ಟವಾದ ಸಂವಹನಕ್ಕೆ ಸಹಾಯ ಮಾಡುತ್ತದೆ. ಕರೆ ಸ್ಪಷ್ಟವಾಗಿ ಕೇಳಿಸದಿದ್ದರೆ ಸಂವಹನ ಸರಿಯಾಗಿ ಕೇಳಿಸದಿದ್ದರೆ ಅದು ಮುಖ್ಯವಾದ ವಿಷಯವಾಗಿದ್ದರೆ ಕಂಪನಿಯಗೆ ನಷ್ಟವಾಗುತ್ತದೆ. ಆದ್ದರಿಂದ ಸ್ಪಷ್ಟವಾದ ಕರೆಗಾಗಿ ಈ ಹೆಡ್ ಸೆಟ್ ಗಳನ್ನು ಬಳಸಬಹುದು. ಈ 3 ಹೆಡ್ ಸೆಟ್ ಗಳು ಪ್ರಯಾಣಿಸುವಾಗ ಕೊಂಡೊಯ್ಯುವ ಪರ್ಸ್ ನಷ್ಟೆ ಚಿಕ್ಕದಾಗಿದೆ.

ಈ ಹೆಡ್ ಸೆಟ್ ಗಳಲ್ಲಿ BH940 ವೈರ್ ಲೆಸ್ ಮೊನೊ ಹೆಡ್ ಸೆಟ್ ಬೆಲೆ 10, 000 ಆಗಿದ್ದು ಉಳಿದ ಹೆಡ್ ಸೆಟ್ ಗಳ ಬೆಲೆ ಇನ್ನಷ್ಟೆ ತಿಳಿದು ಬರಬೇಕಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot