ಸಂಗೀತ ಪ್ರಿಯರ ಅಚ್ಚುಮೆಚ್ಚು ಈ ಎನ್ ಎಚ್ ಟಿ ಸ್ಪೀಕರ್

|

ಸಂಗೀತ ಪ್ರಿಯರ ಅಚ್ಚುಮೆಚ್ಚು ಈ ಎನ್ ಎಚ್ ಟಿ  ಸ್ಪೀಕರ್
NHT ಕಂಪನಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸಾಧನವನ್ನು ನೀಡುವುದಾಗಿ ಘೋಷಿಸಿ ಸಾಕಷ್ಟು ಸುದ್ಧಿಯನ್ನು ಉಂಟುಮಾಡಿತ್ತು. ಹಾಗೆಯೆ ಉತ್ತಮ ಗುಣಮಟ್ಟದ ಸಾಧನಗಳನ್ನು ತಯಾರಿಸಿ ಯಾವುದೆ ಮಧ್ಯೆ ವ್ಯಕ್ತಿಯ ಸಹಾಯವಿಲ್ಲದೆ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಈಗ ಈ ಎನ್ ಎಚ್ ಟಿ ಅಧಿಕ ಗುಣಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸ್ಪೀಕರ್ ಬಿಡುಗಡೆ ಮಾಡಿದ್ದು ಇದನ್ನು ಟ್ಯಾಬ್ಲೆಟ್, ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳಲ್ಲಿ ಬಳಸಬಹುದಾಗಿದೆ. ಈ ಸೂಪರ್ ಪವರ್ ಸ್ಪೀಕರ್ ನೋಡಲು ಸೂಪರ್ ಜೀರೊ 2.0 ಸ್ಪೀಕರ್ ನ ಹೋಲಿಕೆ ಇದೆ.

ಅಲ್ಲದೆ ಈ ಸ್ಪೀಕರ್9 x 5.5 x 6.75 ಇಂಚಿನ ಡೈಮೆಂಶನ್ ಹೊಂದಿದ್ದು ಇದರ ತೂಕ 3.3 ಕಿಲೋ ಗ್ರಾಂ ತೂಕವನ್ನು ಹೊಂದಿದೆ.ಈ ಸ್ಪೀಕರ್ ನಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆ ಅಂದರೆ ಇದರಲ್ಲಿ 90 ವ್ಯಾಟ್ ಸಾಮರ್ಥ್ಯದ ಆಂಪ್ಲಿಫೈಯರ್, 4.5 ಇಂಚಿನ ಪೇಪರ್ ಕೋನ್ ವೂಫರ್ , ಒಂದು ಇಂಚಿನ ಸಿಲ್ಕ್ ಡೋಮ್ ಟ್ವೀಟರ್ ಹೊಂದಿದೆ. ಈ ಸ್ಪೀಕರ್ ನಲ್ಲಿ ಶಬ್ದದ ಕಂಪನಾಂಕ 72 Hz -20 KHz ಹೊಂದಿದೆ. ಅಲ್ಲದೆ ಇದರ ಇಂಪೆಡೆನ್ಸ್ 12.5 k. ohmsಹೊಂದಿದೆ.

ಈ ಸ್ಪೀಕರ್ ಶಬ್ದದಲ್ಲಿ ಉತ್ತಮ ಗುಣಮಟ್ಟವನ್ನು ಹೊಂದಿದ್ದು ರು.10, 000 ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X