2012ಕ್ಕೆ ™ತಂತ್ರಜ್ಞಾನದ ಮೊಟೊರೊಲಾ ಹೆಡ್ ಸೆಟ್

Posted By:
2012ಕ್ಕೆ ™ತಂತ್ರಜ್ಞಾನದ ಮೊಟೊರೊಲಾ ಹೆಡ್ ಸೆಟ್

2011 ಮುಗಿಯುತ್ತಾ ಬರುತ್ತಿದೆ, ಹೊಸ ವರ್ಷಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸಲು ಅನೇಕ ಅಡಿಯೊ ಕಂಪನಿಗಳು ಕಾಯುತ್ತಿವೆ. ಹೊಸ ವರ್ಷ ಪ್ರಾರಂಭವಾಗುವ ಮೊದಲೆ ಹೊಸ ಹೆಡ್ ಸೆಟ್ ಗಳು ಬಿಡುಗಡೆಯಾಗಿ 2012 ರ ಹೆಡ್ ಸೆಟ್ ಮಾರುಕಟ್ಟೆಯಲ್ಲಿ ರಾರಾಜಿಸಬೇಕೆಂಬ ತೀವ್ರ ಆಕಾಂಕ್ಷೆಯಿಂದ ಬಿಡುಗಡೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದೆ. ಅದರಲ್ಲಿ ಮೊಟೊರೊಲಾ ಕಂಪನಿ ಕೂಡ ಒಂದು.

ಬರಲಿರುವ ಹೊಸ ವರ್ಷದ ಹೆಡ್ ಸೆಟ್ ಮಾರುಕಟ್ಟೆಗೆ ಮೊಟೊರೊಲಾದ 'ಮೊಟೊರೊಲಾ HX550' ಹೆಸರಿನ ಬ್ಯೂಟೂಥ್ ಹೆಡ್ ಸೆಟ್ 2012ರ ಮಾರುಕಟ್ಟೆಗೆ ಬರಲಿದೆ.ಈ ಹೆಡ್ ಸೆಟ್ ಹಗುರವಾಗಿದ್ದು ರಿವರ್ಸಬಲ್ ಇಯರ್ ಹುಕ್ ಹೊಂದಿದೆ. ಇಯರ್ ಹುಕ್ ನೋಡಲು ಸುಂದರವಾಗಿದ್ದು ಕಿವಿಗೆ ಹೊಂದುವಂತೆ ತಯಾರಿಸಲಾಗಿದೆ. ಇದರಲ್ಲಿ ™ ತಂತ್ರಜ್ಞಾನ ಬಳಸಿದ್ದು ಉತ್ತಮವಾದ ಗುಣಮಟ್ಟವನ್ನು ಹೊಂದಿದೆ. ಇದರಲ್ಲಿ ನಿಸ್ತಂತು (ವೈರ್ ಲೆಸ್ ) ಬ್ಲೂಟೂಥ್ ಅಳವಡಿಸಲಾಗಿದ್ದು ಮಾತಾನಾಡುವಾಗ ಶಬ್ದವು ಸ್ಪಷ್ಟವಾಗಿ ಕೇಳಿಸುತ್ತದೆ. ಇದರಲ್ಲಿ ಶಬ್ದ ಕೇಳುವ ಪರಿಮಿತಿ 300 ಅಡಿಯಾಗಿದೆ.

ಇದರಲ್ಲಿ USB ಪೋರ್ಟ್ ಸೌಲಭ್ಯವಿದ್ದು ಉತ್ತಮವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಒಂದು ಸಲ ಇದನ್ನು ಚಾರ್ಜ್ ಮಾಡಿದರೆ ಸಾಕು 16 ದಿನಗಳ ಸ್ಟ್ಯಾಂಡ್ ಬೈ ಟೈಮ್ ಮತ್ತು 9 ಗಂಟೆಗಳ ಟಾಕ್ ಟೈಮ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಬೇಗನೆ ಚಾರ್ಜ್ ಮಾಡುವಂತಹ ಗುಣಲಕ್ಷಣವನ್ನು ಹೊಂದಿದ್ದು , ಆದರೆ ಹಾಗೆ ಮಾಡಿದರೆ ಅದರ ಟಾಕ್ ಟೈಮ್ 41/2 ಗಂಟೆ ಮಾತ್ರ ಆಗಿರುತ್ತದೆ.

2 ಮೈಕ್ರೊಪೋನ್, ™ತಂತ್ರಜ್ಞಾನ ಮತ್ತು ಬ್ಲೂಟೂಥ್ ಸೌಲಭ್ಯ ಹೊಂದಿರುವ ಈ ಹೆಡ್ ಸೆಟ್ ಬೆಲೆ ರು. 3,500 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot