ನೋವಾ ಮಿನಿ ಸ್ಪೀಕರ್ ನೀಡುತ್ತೆ ಅಬ್ಬರದ ಶಬ್ದ

|
ನೋವಾ ಮಿನಿ ಸ್ಪೀಕರ್ ನೀಡುತ್ತೆ ಅಬ್ಬರದ ಶಬ್ದ

ಟೇಗೋ ಆಡಿಯೊದ ನೋವಾ ಮಿನಿ ಸ್ಪೀಕರ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಸ್ಪೀಕರ್ ನೋಡಲು ತೆಳುವಾಗಿ ಮತ್ತು ಆಕರ್ಷಕವಾಗಿದೆ. ಈ ಸ್ಪೀಕರ್ ಯಾವುದೆ ಕಿರಿಕಿರಿಯನ್ನು ನೀಡದೆ ಉತ್ತಮ ಗುಣಮಟ್ಟದ ಶಬ್ದವನ್ನು ನೀಡುವುದರಿಂದ ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಾವುದೆ ಸಂಶಯವಿಲ್ಲ.

ಈ ನೋವಾ ಸ್ಪೀಕರ್ ವಿಶೇಷವೆಂದರೆ ಇದರ ಕಂಟ್ರೋಲ್ ಬಟನ್ ಸ್ಪೀಕರ್ ನ ತಳದಲ್ಲಿದ್ದು ಇದನ್ನು ಬಳಸಿ ಇದರಲ್ಲಿ ಶಬ್ದದ ನಿಯಂತ್ರಣ ಮಾಡಬಹುದಾಗಿದೆ. ಈ ಸ್ಪೀಕರ್ ಚಾರ್ಜ್ ಮಾಡಲು ಚಿಕ್ಕ USB ಪೋರ್ಟ್ ಬಳಸಲಾಗುತ್ತದೆ. ಈ ಸ್ಪೀಕರ್ ನಲ್ಲಿ ಲಿಥೀಯಂ ಬ್ಯಾಟರಿ ಬಳಸಲಾಗಿದೆ. ಈ ಗುಣಮಟ್ಟದ ಸ್ಪೀಕರ್ ಐಫೋನ್ , ಐಪ್ಯಾಡ್, ಐಪೋಡ್ ಗಳಲ್ಲಿ ಹೊಂದಿಕೆಯಾಗುತ್ತದೆ.ಈ ಸ್ಪೀಕರ್ ಆಕರ್ಷಕ ಕೆಂಪು ಮತ್ತು ಕಪ್ಪು, ಬಿಳಿ ಮತ್ತು ಕೆಂಪು ಹೀಗೆ ಆಕರ್ಷಕ ಬಣ್ಣದಲ್ಲಿ ಇದ್ದು ಗ್ರಾಹಕರು ತಮಗೆ ಬೇಕಾದ ಬಣ್ಣದ ಸ್ಪೀಕರ್ ಅನ್ನು ಕೊಳ್ಳಬಹುದಾಗಿದೆ.

ಈ ಆಕರ್ಷಕ ಮತ್ತು ಗುಣಮಟ್ಟದ ಸ್ಪೀಕರ್ ಕೊಳ್ಳಬಯಸುವವರು ಇದರ ಕಂಪನಿ ವೆಬ್ ಸೈಟ್ ನ ಮುಖಾಂತರ ಕೊಂಡು ಕೊಳ್ಳಬಹುದಾಗಿದ್ದು ಬೆಲೆ ರು.2,000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X