ಪ್ಯಾಂಟೆಕ್ ತಂದಿದೆ LTE ತಂತ್ರಜ್ಞಾನದ ಮೊಬೈಲ್

Posted By: Staff
ಪ್ಯಾಂಟೆಕ್ ತಂದಿದೆ LTE ತಂತ್ರಜ್ಞಾನದ ಮೊಬೈಲ್

3ಜಿ ಸಂಪರ್ಕ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಸಂವಹನ ಪ್ರಪಂಚದಲ್ಲಿ ಹೊಸ ಆವಿಷ್ಕಾರಕ್ಕೆ ಕಾರಣವಾಗಿದೆ. ಇದೀಗ ಹೊಸ ಹ್ಯಾಂಡ್ ಸೆಟ್ ಗಳು LTE ತಂತ್ರಜ್ಞಾನವನ್ನು ಪಡೆದುಕೊಳ್ಳುತ್ತಿರುವುದು ಆಧುನಿಕವೆನಿಸಿದೆ.

ಅಂತಹದೇ ಒಂದು ಹ್ಯಾಂಡ್ ಸೆಟ್ ಎಂದರೆ ಪ್ಯಾಂಟೆಕ್ ವೆಗಾ LTE M IM-A810S ಸ್ಕೈ. ಪ್ಯಾಂಟೆಕ್ ಕ್ಯೂರಿಟೆಲ್ ಕಂಪನಿ ಈ ಮೊಬೈಲನ್ನು ಹೊರತಂದಿದೆ.

ಈ ಪ್ಯಾಂಟೆಕ್ ವೆಗಾ LTE M ಇತ್ತೀಚೆಗಷ್ಟೆ ಬಿಡುಗಡೆಗೊಳಿಸಲಾಯಿತು. ಈ ಹ್ಯಾಂಡ್ ಸೆಟ್ ಆಂಡ್ರಾಯ್ಡ್ v2.3.5 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದ್ದು, ಸ್ನಾಪ್ ಡ್ರಾಗನ್ APQ8060 ಚಿಪ್ ಸೆಟ್ ನೊಂದಿಗೆ ಡ್ಯೂಯಲ್ ಕೋರ್ 1.5 GHz ಸ್ಕಾರ್ಪಿಯನ್ ಪ್ರೊಸೆಸರ್ ಹೊಂದಿದೆ. ಅಡೆರ್ನೊ 220 ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ ಮತ್ತು 512 KB L2 cache ಕೂಡ ಇದರಲ್ಲಿದೆ.

ಪ್ಯಾಂಟೆಕ್ ವೆಗಾ LTE M ಮೊಬೈಲ್ ವಿಶೇಷತೆ:

* 70.7 x 134.5 x 9.7 ಎಂಎಂ ಸುತ್ತಳತೆ

* 141 ಗ್ರಾಂ ತೂಕ

* 1 ಜಿಬಿ SD RAM ಮತ್ತು 16 ಜಿಬಿ ಫ್ಲಾಶ್ EEPROM

* 4.5 ಇಂಚಿನ IPS TFT ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ, 800 x 1280 ಪಿಕ್ಸಲ್ ರೆಸೊಲ್ಯೂಷನ್

* SKY FLUX ಯೂಸರ್ ಇಂಟರ್ ಫೇಸ್

* 3.5 ಎಂಎಂ ಆಡಿಯೋ ಜ್ಯಾಕ್

* GPRS ಮತ್ತು EDGE ಸಂಪರ್ಕ

* 3G ಸಂಪರ್ಕ, DLNA ಮತ್ತು ವೈ-ಫೈ ಡೈರೆಕ್ಟ್ ಜೊತೆ ವೈ-ಫೈ ಸಂಪರ್ಕ

* LTE ನೆಟ್ ವರ್ಕ್ ಮತ್ತು Data ಲಿಂಕ್ಸ್ ಬೆಂಬಲಿತ

* A-GPS ಜೊತೆ GPS ಸಂಪರ್ಕ

* 8 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್ , ಆಟೊ ಫೋಕಸ್, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 2 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ, 1600 x 1200 ಪಿಕ್ಸಲ್ ರೆಸೊಲ್ಯೂಷನ್

* ಮೈಕ್ರೊSD, ಮೈಕ್ರೊSDHC ಮತ್ತು ಟ್ರಾನ್ಸ್ ಫ್ಲಾಶ್ ಮೆಮೊರಿ ಕಾರ್ಡ್

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ಮೈಕ್ರೊUSB ಮತ್ತು ಬ್ಲೂಟೂಥ್ 3.0

* HDMI ಔಟ್

* ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* 1830 mAh ಲೀಥಿಯಂ ಐಯಾನ್ ಬ್ಯಾಟರಿ

ಈ ಪ್ಯಾಂಟೆಕ್ ವೆಗಾ LTE ನಲ್ಲಿ ಅಳವಡಿಸಲಾಗಿರುವ LTE ತಂತ್ರಜ್ಞಾನ ಅತಿ ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ. ಆದರೆ ಈ ಪ್ಯಾಂಟೆಕ್ ವೆಗಾ LTE ಬೆಲೆಯನ್ನು ಕಂಪನಿ ಇನ್ನೂ ನಿಗದಿ ಪಡಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot