ಔಟ್ ಡೋರ್ ಏರ್ ಗೋ ಸ್ಪೀಕರ್- ರಸ್ ಸೌಂಡ್

Posted By:
ಔಟ್ ಡೋರ್ ಏರ್ ಗೋ ಸ್ಪೀಕರ್- ರಸ್ ಸೌಂಡ್

ಕೆಲಸ ಮಾಡಿ ಬೋರಾದಾಗ ವಿಶ್ರಾಂತಿಗಾಗಿ ಜೊತೆ ಸ್ವಲ್ಪ ಮನರಂಜನೆ ಬೇಕೆಂದರೆ ಮಾತ್ರ ಹಾಡುಗಳನ್ನು ಕೇಳುವುದಿಲ್ಲ, ಕೆಲವೊಮ್ಮೆ ಸುಂದರ ಸ್ಥಳಗಳಿಗೆ ಹೋದಾಗ ಪ್ರಕೃತಿಯ ಸೌಂದರ್ಯವನ್ನು ಸವಿಯುವಾಗ ಹಾಡುಗಳನ್ನು ಕೇಳಬೇಕೆಂದಿನಿಸುತ್ತದೆ. ಆಗ ಹಗುರವಾದ ಆಡಿಯೊ ಸಾಧನಗಳನ್ನು ಜೊತೆಯಲ್ಲಿ ಕೊಂಡೊಯ್ಯುತ್ತೇವೆ. ಹಾಗೆ ಜೊತೆಯಲ್ಲಿ ಕೊಂಡೊಯ್ಯಬಹುದಾದ ಸಾಧನಗಳಲ್ಲಿ ರಸ್ ಸೌಂಡ್ ಕೂಡ ಒಂದು.

ಈ ರಸ್ ಸೌಂಡ್ ಬ್ರಾಂಡ್ ಹೆಸರುವಾಸಿಯಾದ ಬ್ರಾಂಡ್ ಆಗಿದೆ. ಇದು ಈ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳಿಂದ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಾ ಬಳಕೆದಾರರ ವಿಶ್ವಾಸವನ್ನು ಗೆದ್ದಿದೆ. ಈಗ ಇದು ಏರ್ ಗೋ ಸಿಸ್ಟಮ್ ಪರಿಚಯಿಸಿದ್ದು ಇದು ಗ್ರಾಹಕರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡುತ್ತದೆ.

ಈ ಏರ್ ಗೋ ಆಂಪ್ಲಿಫೈಯಿಡ್ ಸ್ಪೀಕರ್ 12.6x12.9x10.2 ಇಂಚಿನ ಡೈಮೆಂಶನ್ , RMS 40-ವ್ಯಾಟ್ ಆಂಪ್ಲಿಫೈಯರ್, 6.5 ಇಂಚಿನ ವೂಫರ್ ಮತ್ತು ಎರಡು ಒಂದು ಇಂಚಿನ ಟ್ವೀಟರ್ಸ್ ಹೊಂದಿದೆ. ಈ ಏರ್ ಗೋ ಹಗುರವಾಗಿದ್ದು ಇದನ್ನು ಜೊತೆಯಲ್ಲಿ ಎಲ್ಲಿಗೂ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ಈ ಏರ್ ಗೋ ದ ಬೆಲೆ ರು.20, 000 ಎಂದು ನಿಗದಿ ಪಡಿಸಿದ್ದು ಇದನ್ನು ಕೊಳ್ಳಬಯಸುವವರು BestBuy.com, Amazon.com ಮುಖಾಂತರ ಕೊಳ್ಳಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot