ಹೊಸ ವರ್ಷಕ್ಕೆ ಸೆನ್ನ್ ಹೈಸರ್ ನಿಂದ ಅವಳಿ ಇಯರ್ ಫೋನ್

Posted By:
 ಹೊಸ ವರ್ಷಕ್ಕೆ ಸೆನ್ನ್ ಹೈಸರ್ ನಿಂದ ಅವಳಿ ಇಯರ್ ಫೋನ್

ಸೆನ್ನ್ ಹೈಸರ್ ಕಂಪನಿ ಹೆಸರು ಆಡಿಯೊ ಪ್ರಿಯರಿಗೆ ಚಿರಪರಿಚಿತ. ಅದರಲ್ಲೂ ಆಡಿಯೊ ಸಾಧನಗಳ ಬಿಡಿ ಭಾಗಗಳ ತಯಾರಿಯಲ್ಲಿ ಹೆಸರುವಾಸಿಯಾದ ಕಂಪನಿ. ಈ ಕಂಪನಿ ಇಯರ್ ಫೋನ್ ಗಳನ್ನು ಕೂಡ ತಯಾರಿಸಿದ್ದು ಜನವರಿ 2012ರಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿ ನಿಂತಿದೆ. ಇದರ ಇಯರ್ ಫೋನ್ ಗುಣಮಟ್ಟದಾಗಿದೆ ಎಂದು ಹೇಳಲಾಗುತ್ತಿದ್ದು ಅವುಗಳನ್ನು IE60 ಮತ್ತು IE80 ಇಯರ್ ಫೋನ್ ಎಂದು ಹೆಸರಿಸಲಾಗಿದೆ.

ನೋಡಲು ಆಕರ್ಷಕವಾಗಿರುವ ಈ ಎರಡು ಇಯರ್ ಫೋನ್ ಗಳಲ್ಲಿ IE60 ಇಯರ್ ಫೋನ್ ಕೊಳ್ಳುವಾಗ 3 ವಿಭಿನ್ನ ಗಾತ್ರದ ಇಯರ್ ಟಿಪ್ಸ್, 2 ಉಚಿತವಾದ ಇಯರ್ ಅಡಾಪ್ಟರ್ ಕೂಡ ದೊರೆಯುತ್ತದೆ. IE80 ಇಯರ್ ಫೋನ್ ನಲ್ಲಿ 4 ರೀತಿಯ ಅಡಾಪ್ಟರ್ ಇದ್ದು ಅವುಗಳಲ್ಲಿ ಗ್ರಾಹಕರು ತಮಗೆ ಹೊಂದುವ ಅಡಾಪ್ಟರ್ ಬಳಸಬಹುದಾಗಿದೆ. ಈ ಎರಡೂ ಇಯರ್ ಫೋನ್ ಗಳಿಗೆ 2 ವರ್ಷದ ವಾರಂಟಿಯನ್ನು ಕೂಡ ನೀಡಲಾಗುವುದು.

ಈ ಇಯರ್ ಫೋನ್ 26dB ವರೆಗೆ ಗದ್ದಲವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಇಯರ್ ಫೋನ್ ಅನ್ನು MP3 ಪ್ಲೇಯರಿಗೆ ಮತ್ತು ಸ್ಮಾರ್ಟ್ ಫೋನ್ ಗಳಿಗೆ ಸರಿಯಾಗಿ ಹೊಂದುವಂತೆ ಇಡಲಾಗಿದೆ. IE60 ಇಯರ್ ಫೋನ್ ಕಂಪನಾಂಕ 10 ರಿಂದ 18, 000 Hz ಮತ್ತು IE80 ಇಯರ್ ಫೋನ್ ನಲ್ಲಿ ಕಂಪನಾಂಕ 10 ರಿಂದ 20, 000 Hz ಆಗಿದೆ.

ಈ ಇಯರ್ ಫೋನ್ ಗಳು ಆಕರ್ಷಕ ಮತ್ತು ಗುಣಮಟ್ಟದಾಗಿದ್ದು ಸಧ್ಯದಲ್ಲಿಯೆ ಮಾರುಕಟ್ಟೆಗೆ ಬರಲಿದೆ. ಆದರೆ ಇಯರ್ ಫೋನ್ ಗಳ ಮಾರುಕಟ್ಟೆ ಬೆಲೆ ಬಗ್ಗೆ ಕಂಪನಿ ಇನ್ನೂ ಏನು ಘೋಷಿಸಲಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot