ಸೋನೋಸ್ ಹೈಫೈ ಸಿಸ್ಟಮ್ ಗೆ ಉಚಿತ ಸಾಫ್ಟ್ ವೇರ್

Posted By:
ಸೋನೋಸ್ ಹೈಫೈ ಸಿಸ್ಟಮ್ ಗೆ ಉಚಿತ ಸಾಫ್ಟ್ ವೇರ್

ವೈರ್ ಲೆಸ್ ಆಡಿಯೊ ಸಾಧನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆಯನ್ನು ಹೊಂದಿರುವ ಸೋನೋಸ್ ಕಂಪನಿ ಇದೀಗ ಹೊಸ ಸಾಫ್ಟವೇರ್ ಕಂಡು ಹಿಡಿದಿದೆ. ಈ ಸಾಫ್ಟ್ ವೇರ್ ಅನ್ನು ಸೋನಿಕ್ ವೈರ್ ಲೆಸ್ ಹೈ ಫೈ ಬಳಕೆದಾರರು ಬಳಸಿ ಹಾಡಗಳ ಕೇಳುವಾಗ ಶಬ್ದವನ್ನು ತಮಗೆ ಬೇಕಾಗುವ ರೀತಿಯಲ್ಲಿ ನಿಯಂತ್ರಿಸಬಹುದಾಗಿದೆ.

ಈ ಸಾಫ್ಟ್ ವೇರ್ ಅನ್ನು ಸೋನೊ ಸಿಸ್ಟಮ್ ಸಾಫ್ಟ್ ವೇರ್ 3.6 ಎಂದು ಕರೆಯಲಾಗಿದ್ದು ಹೈಫೈ ಬಳಕೆದಾರರು ಈ ಸೌಲಭ್ಯವನ್ನು ಹೈಫೈ ಸಿಸ್ಟಮ್ ನಲ್ಲಿರುವ ಅಪ್ ಡೇಟ್ ಬಟನ್ ಪ್ರೆಸ್ ಮಾಡಿದರೆ ಸಾಕು, ಈ ಸಾಫ್ಟ್ ವೇರ್ ಬಳಕೆದಾರರ ಸಿಸ್ಟಮ್ ನಲ್ಲಿ ಅಪ್ ಡೇಟ್ ಆಗುವುದು.

ಸೋನೋಸ್ ಈ ಉಚಿತ ಸಾಫ್ಟ್ ವೇರ್ ನಿಂದಾಗಿ, ಹೈಫೈ ಸಿಸ್ಟಮ್ ನ ಆಂಡ್ರಾಯ್ಡ್ ಕಂಟ್ರೋಲರ್ , ಆಂಡ್ರಾಯ್ಡ್ ಇರುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳ ಸಪೋರ್ಟ್ ಮಾಡುವಷ್ಟು ತನ್ನ ಮಿತಿಯನ್ನು ವಿಸ್ತರಿಸಿದೆ. ಅಲ್ಲದೆ ಈ ಸೋನೋಸ್ ಸಿಸ್ಟಮ್ ವೈರ್ ಲೆಸ್ ಬಳಸಿ ಆಂಡ್ರಾಯ್ಡ್ 2.2 ಅಥವಾ ಅಧಿಕ ಆಯಾಮ ಹೊಂದಿರುವ ಟ್ಯಾಬ್ಲೆಟ್ ಮುಖಾಂತರ ದೊಡ್ಡ ಸ್ಕ್ರೀನ್ ಅನ್ನು ನಿಯಂತ್ರಿಸಬಹುದಾಗಿದೆ.

ಈ ಸಾಫ್ಟ್ ವೇರ್ ಅನ್ನು ಅಮೇಜಾನ್ ಕಿಂಡ್ಲೆ ಫೈರ್, ಸ್ಯಾಮ್ ಸಂಗ್ ಗೆಲಾಕ್ಸಿ ಟಾಬ್, ಮೊಟೊರೊಲಾ ಜೂಮ್, ಮತ್ತು HTC ಫ್ಲೈಯರ್ ನಲ್ಲಿ ಬಳಸಬಹುದಾಗಿದೆ.ಈ ಸಾಫ್ಟ್ ವೇರ್ ಅನ್ನು ಮ್ಯೂಸಿಕ್ ಲೈಬ್ರರಿಯಲ್ಲಿ ಸಹ ಬಳಸಬಹುದಾಗಿದ್ದು , ಇದು ಆಂಡ್ರಾಯ್ಡ್ ಟ್ವಿಟರ್ ಟ್ಯಾಬ್ಲೆಟ್ , ಸ್ಮಾರ್ಟ್ ಫೋನ್ ಮತ್ತು ಅಲಾರಾಂಗಳಿಗೆ ಬೆಂಬಲವನ್ನು ನೀಡುತ್ತದೆ.

ಸೋನೋಸ್ 3.6 'ಸೋನೊ ಲ್ಯಾಬ್ ' ಸಹ ಪರಿಚಯಿಸಿದೆ, ಅಂದರೆ ಬೇರೆ ಮ್ಯೂಸಿಕ್ ಸರ್ವೀಸ್ ಗಳನ್ನು ಬಳಕೆದಾರರು ಸೋನೋಸ್ ನಲ್ಲಿ ಬಳಸುವ ಮೊದಲು ಅದು ಹೇಗೆ ಕೇಳಿಸುತ್ತದೆ ಎಂದು ಇದರಲ್ಲಿ ಪರೀಕ್ಷಿಸಬಹುದಾಗಿದೆ. ಈ ಲ್ಯಾಬ್ ಹೊಸ-ಹೊಸ ಮ್ಯೂಸಿಕ್ ಸರ್ವೀಸ್ ಅನ್ನು ನೀಡುತ್ತಿರುತ್ತದೆ.

ಮತ್ತೊಂದು ಉಪಕಾರವೆಂದರೆ ಈ ಸೋನೋಸ್ ಸಾಫ್ಟ್ ವೇರ್ 3.6 ಸ್ಪೋಟಿಫೈ ಜೊತೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಸ್ಪೋಟಿಫೈನ ಪ್ರಸಿದ್ಧವಾದ ಟ್ರ್ಯಾಕ್ ಗಳಿಂದ ಹಾಡುಗಳನ್ನು ಸೋನೊ 3.6 ಬಳಸಿ ಕೇಳಬಹುದಾಗಿದೆ.ಸೋನೋಸ್ 3.6 AAC+ ಕೊಡೆಕ್ ಗೂ ಬೆಂಬಲವನ್ನು ನೀಡುತ್ತದೆ.

ಒಟ್ಟಿನಲ್ಲಿ ಸೋನೋಸ್ 3.6 ಸಾಫ್ಟ್ ವೇರ್ ಸೋನೋಸ್ ಹೈಫೈ ಸಿಸ್ಟಮ್ ಬಳಕೆದಾರರಿಗೆ ಉತ್ತಮ ಗುಣಮಟ್ಟದಲ್ಲಿ ಹಾಡಗಳನ್ನು ಕೇಳಲು ತುಂಬಾ ಉಪಯುಕ್ತವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot