ಸೋನಿ ಆಡಿಯೊ ಸಾಲಿಗೆ ಮತ್ತೊಂದು ಗರಿ ಸೋನಿ NWZ-A866

Posted By:
ಸೋನಿ ಆಡಿಯೊ ಸಾಲಿಗೆ ಮತ್ತೊಂದು ಗರಿ ಸೋನಿ NWZ-A866

ಎಲೆಕ್ಟ್ರಾನಿಕ್ ವಸ್ತುಗಳ ಕ್ಷೇತ್ರದಲ್ಲಿ ಸೋನಿ ಹೆಸರು ಚಿರಪರಿಚಿತ. ಆಡಿಯೊ ಕ್ಷೇತ್ರದಲ್ಲೂ ಸೋನಿ ಅನೇಕ ಗುಣಮಟ್ಟದ ಸಾಧನಗಳನ್ನು ಬಿಡುಗಡೆ ಮಾಡಿದೆ. ಅವುಗಳು ಬಳಕೆದಾರರ ಮೆಚ್ಚುಗೆಗೆ ಕೂಡ ಪಾತ್ರವಾಗಿವೆ. ಈಗ ಈ ಆಡಿಯೊ ಸಾಧನಗಳ ಸಾಲಿಗೆ ಮತ್ತೊಂದು ಸೇರ್ಪಡೆ ಸೋನಿ NWZ-A866.

ಈ ಆಡಿಯೊ ಸಾಧನ ಉತ್ತಮ ಗುಣಮಟ್ಟದ ಸಾಧನ ಎನ್ನಲು ಈ ಕೆಳಗಿನ ಗುಣಲಕ್ಷಣಗಳು ಮುಖ್ಯ ಕಾರಣಗಳಾಗಿವೆ.

* 32 GB ಆಂತರಿಕ ಸಾಮರ್ಥ್ಯ

* WAV,AAC ಮತ್ತು WMV ಆಡಿಯೊ ಫೈಲ್ಸ್ ಗಳಿಗೆ ಹೊಂದಿಕೆಯಾಗುತ್ತದೆ

* MPEG4 ಮತ್ತು WMV ವೀಡಿಯೊ ಫೈಲ್ಸ್ ಗೆ ಬೆಂಬಲ

* 2.8 ಇಂಚಿನ ಡಿಸ್ ಪ್ಲೇ

* ಟಚ್ ಸ್ಕ್ರೀನ್ ಡಿಸ್ ಪ್ಲೇ

* ಸೋನಿ ಮೀಡಿಯಾ ಗೋ ಸಾಫ್ಟ್ ವೇರ್ ( ಮೀಡಿಯಾ ಫೈಲ್ಸ್ ಗಳನ್ನು ಸುಲಭವಾಗಿ ರವಾನಿಸಿತ್ತದೆ)

* ಸೆನ್ಸ್ ಮಿ (ಸಮೂಹ ಗೀತೆಗಳನ್ನು ಕೇಳಲು)

* 97 ಮಿಮಿ ಎತ್ತರ ಮತ್ತು 9 ಮಿಮಿ ದಪ್ಪ

ಈ ಆಡಿಯೊ ಸಾಧನವು ತುಂಬಾ ಹಗುರವಾಗಿದೆ. ಆಪಲ್ ಐಪೋಡ್ ಕ್ಲಾಸಿಕ್ ಗೆ ಹೋಲಿಸಿದಾಗ ಬೆಲೆಯಲ್ಲಿ ಸರಿಸಮವಾಗಿದ್ದರೂ ಇದರ ಮೆಮೊರಿ ಸ್ವಲ್ಪ ಕಡಿಮೆ ಇದೆ. ಇದರಲ್ಲಿರುವ 2.8 ಇಂಚಿನ ಸ್ಕ್ರೀನ್ ವೀಡಿಯೊ ನೋಡಲು ಸಾಕಾಗುವಷ್ಟು ರೆಸ್ಯೂಲೇಶನ್ ಹೊಂದಿದೆ. ಟಚ್ ಸ್ಕ್ರೀನ್ ಬಳಕೆದಾರರಿಗೆ ಸುಲಭವಾಗುವಂತೆ ಇದೆ. ಇದರಲ್ಲಿ ಶಬ್ದವನ್ನು ಹೆಚ್ಚು ಅಥವಾ ಕಡಿಮೆ ಮಾಡಿದರೂ ಕೂಡ ಗುಣಮಟ್ಟದ ಸಂಗೀತ ಹೊಂದಿರುತ್ತದೆ.

ಸೋನಿ NWZ-A866 ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 15, 000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot