ಬೆಡ್ ಶೇಕ್ ಮಾಡಿ ನಿಮ್ಮನ್ನು ಎಚ್ಚರಿಸುತ್ತೆ ಈ ಅಲಾರಾಂ

|
ಬೆಡ್ ಶೇಕ್ ಮಾಡಿ ನಿಮ್ಮನ್ನು ಎಚ್ಚರಿಸುತ್ತೆ ಈ ಅಲಾರಾಂ

ಆಪಲ್ ವಸ್ತುಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ತಯಾರಿಸುವಲ್ಲಿ ILuv (ಐಲವ್) ಹೆಚ್ಚಿನ ಪರಿಣಿತಿಯನ್ನು ಹೊಂದಿರುವ ಕಂಪನಿಯಾಗಿದೆ. ಇದು ಐಫೋನ್, ಐಪೋಡ್ ಮತ್ತು ಐಪ್ಯಾಡ್ ಗಳಿಗೆ ಬೇಕಾದ ಸಾಧನಗಳನ್ನು ತಯಾರಿಸುತ್ತಿದ್ದು ಅದರಲ್ಲಿ ಐಫೋನ್ ಮತ್ತು ಐಪೋಡ್ ನಲ್ಲಿ ಉಪಯೋಗಿಸುವ imm178 ವೈಬ್ ಪ್ಲಸ್ ಡ್ಯುಯೆಲ್ ಅಲಾರಾಂ ಕ್ಲೋಕ್ ಹೆಚ್ಚಿನ ಜನಪ್ರಿಯತೆಯನ್ನು ಪಡೆದಂತಹ ವಸ್ತುಗಳಾಗಿವೆ.

ಈ ಅಲಾರಾಂ ಗಡಿಯಾರದ ಮುಖ್ಯ ಲಕ್ಷಣವೆಂದರೆ ಹಾಸಿಗೆಯನ್ನು ಅಲುಗಾಡಿಸಿ ಎಬ್ಬಿಸುವಂತೆ ಮಾಡುತ್ತದೆ. ಈ ಸಾಧನವು ಸಾಮಾನ್ಯ ಸ್ಪೀಕರ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಐಪೋಡ್ ಅಥವಾ ಐಫೋನ್ ಜೋಡಿಸಿ ಸಂಗೀತವನ್ನು ಕೇಳಬಹುದಾಗಿದೆ. ಹೀಗೆ ಅನೇಕ ಕಾರ್ಯಗಳನ್ನು ನಿರ್ವಹಿಸುವ ಈ ಸಾಧನದ ಬೆಲೆ ರು. 5, 300 ಆಗಿದೆ. ಐಲವ್ ನ ಮತ್ತೊಂದು ಆಕರ್ಷಕ ಸಾಧನವೆಂದರೆ iSP210 ಮ್ಯೂಸಿಕ್ ಪ್ಯಾಕ್.

ಇದನ್ನು ಐಪ್ಯಾಡ್ ರಕ್ಷಣೆಗಾಗಿ ಮಾಡಲಾಗಿದೆ. ಇದು ಜೊತೆಯಲ್ಲಿ ಕೊಂಡೊಯ್ಯಬಹುದಾದ ಸ್ಪೀಕರ್ ಆಗಿದ್ದು ಗುಣಮಟ್ಟದ ಶಬ್ದವ್ನು ಉಂಟುಮಾಡುತ್ತದೆ. ಇದು ಐಪ್ಯಾಡ್ ಬಳಕೆದಾರರಿಗೆ ತುಂಬಾ ಪ್ರಿಯವಾಗಿದ್ದು ಇದರ ಬೆಲೆ ರು.3, 200 ಆಗಿದೆ.IMM514 ಆರ್ಟ್ ಸ್ಟೇಷನ್ ಪ್ರೊ ಐಲವ್ ತಯಾರಿಸಿದ ವಸ್ತುಗಳಲ್ಲಿ ಅತ್ಯುತ್ತಮವಾದದು ಎಂದು ಪರಿಗಣಿಸಲಾಗಿದೆ. ಇದನ್ನು ಮುಖ್ಯವಾಗಿ ಐಪ್ಯಾಡ್ ಮತ್ತು ಐಪ್ಯಾಡ್ 2ಗಾಗಿ ತಯಾರಿಸಲಾಗಿದೆ. ಇದರಲ್ಲಿ ಅದ್ಭುತವಾದ ಡಕ್ ಸಿಸ್ಟಮ್ ಇದೆ. ಇದನ್ನು ಬಳಸಿ ಗಡಿಯಾರ ಮತ್ತು ರೇಡಿಯೊದ ಸೌಲಭ್ಯವನ್ನು ಪಡೆಯಬಹುದಾಗಿದ್ದು ಇದರ ಬೆಲೆ ರು. 9000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X