ನೆಟ್ ಆಡಿಯೊಗಳನ್ನು ಸುಲಭವಾಗಿ ಕಾಪಿ ಮಾಡುವ ಸ್ಲಗ್

|
ನೆಟ್ ಆಡಿಯೊಗಳನ್ನು ಸುಲಭವಾಗಿ ಕಾಪಿ ಮಾಡುವ ಸ್ಲಗ್

ನಿಮಗೆ ಯಾವುದಾದರೂ ಆಡಿಯೊ ಬೇಕೆಂದಾಗ ಇಂಟರ್ ನೆಟ್ ನಲ್ಲಿ ಹುಡುಕಿ, ಆ ಆಡಿಯೊ ಸಿಕ್ಕಿದ ಮೇಲೆ ಗೊತ್ತಾಗುತ್ತದೆ ಅದನ್ನು ಕಾಪಿ ಮಾಡುವುದಕ್ಕೆ ಆಗಲ್ಲ ಎಂದು, ಆಗ ನಿಮ್ಮ ಮುಂದೆ ಇರುವ ಮಾರ್ಗವೆಂದರೆ ಅದನ್ನು ಇಂಟರ್ ನೆಟ್ ನಲ್ಲಿ ಪ್ಲೇ ಮಾಡಿ ಮೈಕ್ರೊ ಫೋನ್ ಬಳಸಿ ರೆಕಾರ್ಡ್ ಮಾಡಿಕೊಳ್ಳುವುದು. ಆದರೆ ಸಾಕಷ್ಟು ರೆಕಾರ್ಡ್ ಮಾಡಿದ್ದನ್ನು ಪ್ಲೇ ಮಾಡಿದರೆ ಶಬ್ದವು ಅಷ್ಟೊಂದು ಗುಣಮಟ್ಟದಲ್ಲಿರುವುದಿಲ್ಲ. ಆದರೆ ಈ ಎಲ್ಲಾ ಸಮಸ್ಯೆಗೆ ಪರಿಹಾರವಾಗಿ 'ಸ್ಲಗ್' ನಿಮ್ಮ ಮುಂದಿದೆ.

ಈ ಚಿಕ್ಕ ಸಾಧನವನ್ನು ಬಳಸಿ ಕಂಪ್ಯೂಟರ್ ನಿಂದ ಹಾಡುಗಳನ್ನು ರೆಕಾರ್ಡ್ ಮಾಡಬಹುದಾಗಿದ್ದು ಇದನ್ನು ನಮ್ಮ ಅಂಗೈಯಲ್ಲಿ ಹಿಡಿಯಬಹುದಾದಷ್ಟು ಚಿಕ್ಕದಾಗಿದೆ. ಇದರಲ್ಲಿ 3.5 mm ಜಾಕ್ ಒಂದು ಹೆಡ್ ಫೋನ್ ಪೋರ್ಟ್ ಗೆ ಮತ್ತೊಂದು ಜಾಕ್ ಮೈಕ್ರೊಫೋನ್ ಪೋರ್ಟ್ ನಲ್ಲಿ ಬಳಸಲಾಗುತ್ತದೆ. ಕೇಳಿ ಬರುತ್ತಿರುವ ಶಬ್ದವನ್ನು ಹೆಡ್ ಫೋನ್ ಪೋರ್ಟ್ ತೆಗೆದುಕೊಂಡು ಅದನ್ನು ಮೈಕ್ರೊಫೋನ್ ಪೋರ್ಟ್ ಗೆ ರವಾನಿಸುತ್ತದೆ. ಅದು ಸಿಸ್ಟಮ್ ನಲ್ಲಿರುವ Mp3 ಫೈಲ್ಸ್ ನಲ್ಲಿ ಸಂಗ್ರಹವಾಗುತ್ತದೆ.

ಇದರಲ್ಲಿ ರೆಕಾರ್ಡಿಂಗ್ ಮಾಡಿದ ನಂತರ ಎಲ್ಲಿ ಬ್ರೇಕ್ ಆಗಿದೆ, ಎಲ್ಲಿ ಕಟ್ ಆಗಿದೆ ಎಂಬುದನ್ನು ತಿಳಿದುಕೊಳ್ಳುವ ಆಯ್ಕೆ ಸಹ ಇದೆ. ಇದನ್ನು ತುಂಬಾ ಹಾಡುಗಳನ್ನು ರೆಕಾರ್ಡ್ ಮಾಡಲು ಬಳಸಬಹುದಾಗಿದ್ದು ಒಂದು ಹಾಡಿನ ನಂತರ ಮತ್ತೊಂಡು ಹಾಡಿಗೆ ಸ್ವಲ್ಪ ಬಿಡುವು ಸಹ ಇರುತ್ತದೆ. ಪ್ಲೇ ಲಿಸ್ಟ್ ನಲ್ಲಿರುವ ಎಲ್ಲಾ ಹಾಡುಗಳನ್ನು ಒಂದೇ ಫೈಲ್ಸ್ ನಲ್ಲಿ ಸಂಗ್ರಹಿಸಬಹುದಾಗಿದೆ. ಈ ಸಾಧನವು ಹಾಡುಗಳು ಪ್ಲೇ ಲಿಸ್ಟ್ ನಲ್ಲಿ 10 ಫೈಲ್ಸ್ ನಲ್ಲಿದ್ದರೆ ಬೇರೆ-ಬೇರೆಯಾಗಿ 10 Mp3 ಟ್ರ್ಯಾಕ್ ಬಳಸಿ ರೆಕಾರ್ಡ್ ಮಾಡಿಕೊಳ್ಳುತ್ತವೆ.

ಈ ಸ್ಲಗ್ ಅದ್ಭುತವಾಗಿದ್ದು ಇದರಲ್ಲಿರುವ 3.5mm ಜಾಕ್ ಚಿಕ್ಕ ಕೇಬಲ್ ಅನ್ನು ಹೆಡ್ ಫೋನ್ ಪೋರ್ಟ್ ಇರುವ ಯಾವುದೇ ಸಾಧನಕ್ಕೆ ಜೋಡಿಸಬಹುದಾಗಿದೆ. ಈ ರೀತಿ ರೆಕಾರ್ಡ್ ಮಾಡಿ ಇಷ್ಟದ ಸಂಗೀತವನ್ನು ಕೇಳಬಹುದಾಗಿದೆ. ಈ ಸೂಪರ್ ಸಾಧನದ ಬೆಲೆ ಕೂಡ ಸಂಗೀತ ಪ್ರಿಯರನ್ನು ಪ್ರಿಯವಾದ ಬೆಲೆಯಲ್ಲಿ ಅಂದರೆ ರು.1, 500ಕ್ಕೆ ಲಭ್ಯವಾಗುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X