50 ಸೆಂಟ್ ಸೆಲೆಬ್ರಿಯ ಸಿಂಕ್ ಹೆಡ್ ಫೋನ್

Posted By:
50 ಸೆಂಟ್ ಸೆಲೆಬ್ರಿಯ ಸಿಂಕ್ ಹೆಡ್ ಫೋನ್

ಸಂಗೀತ, ಸಿನಿಮಾ ಲೋಕದಲ್ಲಿ ಪ್ರಸಿದ್ಧಿಯನ್ನು ಗಳಿಸಿದ ವ್ಯಕ್ತಿಗಳು ಇಂದು ತಮ್ಮದೆಯಾದ ಹೆಡ್ ಫೋನ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇವುಗಳಲ್ಲಿ ಕೆಲವೊಂದು ಹೆಡ್ ಫೋನ್ ಗಳು ಅತ್ಯುತ್ತಮವಾದ ಗುಣಮಟ್ಟವನ್ನು ಸಹ ಹೊಂದಿದೆ. ಅಂತಹ ಹೆಡ್ ಫೋನ್ ಗಳು ಪ್ರಚಾರವಿಲ್ಲದೆ ಬೆಳಕಿಗೆ ಬಂದಿರುವುದಿಲ್ಲ.

3ನೇ ಕ್ರೂಟಿಸ್ ಜೇಮ್ಸ್ ಜಾಕ್ ಸನ್ 50 ಸೆಂಟ್ ಎಂದು ಹೆಸರು ವಾಸಿಯಾಗಿರುವ ಅಮೆರಿಕದ ಪ್ರಸಿದ್ಧ ಹಾಡುಗಾರ. ಅವರ ಹಾಡುಗಳ ಕಾಪಿಗಳು ಅತಿ ಹೆಚ್ಚಾಗಿ ಮಾರಾಟವನ್ನು ಸಹ ಕಂಡಿದ್ದು , ಅವರ ತಯಾರಿಸಿದ ಆಲ್ಬಂ ಪ್ರಪಂಚದ ಮ್ಯೂಸಿಕ್ ಲಿಸ್ಟ್ ನಲ್ಲಿ ಉನ್ನತ ಸ್ಥಾನವನ್ನು ಹೊಂದಿದೆ. ಇವರು ಉತ್ತಮ ನಿರ್ದೇಶಕರು ಕೂಡ ಹೌದು.

ಈಗ 50 ಸೆಂಟ್ ರ ಸಿಂಕ್ ಹೆಸರಿನ ಹೆಡ್ ಫೋನ್ ಗಳು 3 ಮಾಡಲ್ ಗಳಲ್ಲಿ ದೊರೆಯುತ್ತಿದೆ. ಅದರಲ್ಲಿ ಎರಡು ಕಿವಿಯ ಮೇಲೆ ಹಾಕುವಂತದು ( ಓವರ್ ದಿ ಇಯರ್) ಮತ್ತೊಂದು ಕಿವಿ ಇಳಗೆ ಹಾಕುವಂತದು (ಇನ್ ಇಯರ್ ) ಆಗಿದ್ದು ಈ ಹೆಡ್ ಫೋನ್ ಗಳು ವೈರ್ ಲೆಸ್ ಆಗಿವೆ. ಈ ಹೆಡ್ ಫೋನ್ ಮೆಮೊರಿ ಫಾಮ್ ಕ್ಯೂಶನ್ ಹೊಂದಿರುವುದರಿಂದ ಕಿವಿಯಲ್ಲಿ ಬಿಗಿಯಾಗಿ ಕುಳಿತು ಕೊಳ್ಳುತ್ತದೆ.

ಈ ಹೆಡ್ ಫೋನ್ ಗಳು 40 mm ಹೊಂದಿದ್ದು ಉತ್ತಮಗುಣಮಟ್ಟದ ಶಬ್ದವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 16 bit ಲಾಸ್ ಲೆಸ್ ಡಿಜಿಟಲ್ ಸೌಂಡ್ ಹೊಂದಿದೆ. ಅಲ್ಲದೆ ಡಿಜಿಟಲ್ ಈಕ್ಯೂಲೈಸರ್ 16 bit ಟ್ಯೂನ್ ಹೊಂದಿದೆ. ಈ ವೈರ್ ಲೆಸ್ ಸಂಪರ್ಕವಿರುವ ಹೆಡ್ ಫೋನ್ 50 ಅಡಿ ವ್ಯಾಪ್ತಿ ಕ್ಷೇತ್ರವನ್ನು ಹೊಂದಿದೆ. ಚಿಕ್ಕ ಟ್ರಾನ್ಸ್ ಮೀಟರ್ ಅನ್ನು ಪ್ಲಗ್ ಗೆ ಜೋಡಿಸಲಾಗಿದೆ. ಈ ಟ್ರಾನ್ಸ್ ಮೀಟರ್ ಆಡಿಯೊ ಸಿಗ್ನಲ್ ಗಳನ್ನು ಹೆಡ್ ಫೋನ್ ಗೆ ರವಾನಿಸುತ್ತದೆ. ಹೀಗೆ ಉತ್ತಮ ರೀತಿಯಲ್ಲಿ ಶಬ್ದವನ್ನು ಕೇಳಬಹುದಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಈ ಹೆಡ್ ಫೋನ್ ಗಳ ಬೆಲೆ ಎಷ್ಟು ಎಂಬುದನ್ನು ಈ ಹೆಡ್ ಫೋನ್ ತಯಾರಕರು ಇನ್ನೂ ಘೋಷಿಸಲಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot