Subscribe to Gizbot

ಥೋಡಿಯೊ ಐ ಬಾಕ್ಸ್ ಮರದ ಸ್ಪೀಕರ್

Posted By:
ಥೋಡಿಯೊ ಐ ಬಾಕ್ಸ್ ಮರದ ಸ್ಪೀಕರ್

ಬೇರೆ ಸಂಗೀತ ಸಾಧನಗಳಿಗೆ ಹೋಲಿಸಿದರೆ ವ್ಯಾಪಾರದಲ್ಲಿ ಇತರ ಸಾಧನಗಳಿಗಿಂತ ಸ್ಪೀಕರ್ ವ್ಯಾಪಾರ ಹೆಚ್ಚಾಗಿದೆ. ಆಧುನಿಕ ತಂತ್ರಜ್ಞಾನವನ್ನು ಹೊಂದಿರುವಂತಹ ನವೀನ ಮಾದರಿಯ ಸ್ಪೀಕರ್ ಗಳು ಮಾರುಕಟ್ಟೆಗೆ ಬರುತ್ತಿದೆ. ಸ್ಪೀಕರ್ ಗಳಲ್ಲಿ ಬ್ರಾಂಡ್ ಅಥವಾ ವಿನ್ಯಾಸಕ್ಕಿಂತ ಎಷ್ಟರ ಮಟ್ಟಿಗಿನ ಶಬ್ದದ ಗುಣಮಟ್ಟವನ್ನು ಬಂದಿದೆ ಎಂಬ ಅಂಶವೆ ಮುಖ್ಯವಾಗಿರುತ್ತದೆ.

ಇಂತಹ ಗುಣಮಟ್ಟದ ಸ್ಪೀಕರ್ ಗಳಲ್ಲಿ ಥೋಡಿಯೊ ಐ ಬಾಕ್ಸ್ ಸ್ಪೀಕರ್ ಒಂದಾಗಿದ್ದು, ವಿನ್ಯಾಸದಲ್ಲಿ ಅಷ್ಟೇನು ಆಕರ್ಷಕವಲ್ಲದಿದ್ದರೂ ಕಿವಿಗೆ ಆಕರ್ಷಕವಾಗಿರುವ ಶಬ್ದವನ್ನು ನೀಡುವ ಸಾಮರ್ಥ್ಯವನ್ನು ಈ ಸ್ಪೀಕರ್ ಹೊಂದಿದೆ. ಅನೇಕ ಸ್ಪೀಕರ್ ಗಳು ಅಲ್ಯೂಮಿನಿಯಂ ನಿಂದ ಮಾಡಿದ್ದರೆ ಇದನ್ನು ಮರದಿಂದ ಮಾಡಲಾಗಿದೆ. ಇದು ನೋಡಲು ಜಮಾನಾ ಕಾಲದ ಸ್ಪೀಕರ್ ಗೆ ಹಾಗೆ ಕಾಣುತ್ತಿದ್ದರೂ ಅದರ ವಿನ್ಯಾಸ ನೋಡಿ ತೆಗೆಯದಿದ್ದರೆ ಮೋಸ ಹೋಗುವುದು ನೀವೆ.

ಈ ಮರದ ವಿನ್ಯಾಸದಲ್ಲೂ ಸಹ ತೇಗ, ಜೀಬ್ರಾ ಮರ, ಓಕ್ ಮರಗಳಿಂದ ತಯಾರಿಸಿದ್ದು ಗ್ರಾಹಕರು ತಮಗೆ ಬೇಕಾದ ಮರದ ಸ್ಪೀಕರ್ ಅನ್ನು ಕೊಳ್ಳಬಹುದು.ಈ ಮರದ ಸ್ಪೀಕರ್ 34cm x 22cm x 23 cm ಡೈಮೆಂಶನ್, 6.5 ಕೆಜಿ ತೂಕವನ್ನು ಹೊಂದಿದೆ. ಇದರ ಪವರ್ ಔಟ್ ಪುಟ್ 2 x 70 watts RMS ಆಗಿದೆ. ಇದು 12 ಗಂಟೆಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಸ್ಪೀಕರ್ ಬ್ಲೂಟೂಥ್ ರಿಸೀವರ್ ಹೊಂದಿದ್ದು ಇದನ್ನು ಫೋನ್ ಅಥವಾ ಯಾವುದೆ ಬ್ಲೂಟೂಥ್ ಸಾಧನಕ್ಕೆ ಜೋಡಿಸಿ ಸಂಗೀತದ ಸವಿಯನ್ನು ಕೇಳಬಹುದಾಗಿದೆ.

ಥೋಡಿಯೊ ಐ ಬಾಕ್ಸ್ ಮರದ ಸ್ಪೀಕರ್ ಬೆಲೆ ರು. 30, 000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot