ಆಮ್ ಕೆಟ್ ನಿಂದ ಹೊಸ ಬ್ಲೂಟೂಥ್ ಹೆಡ್ ಸೆಟ್

Posted By: Staff
ಆಮ್ ಕೆಟ್ ನಿಂದ ಹೊಸ ಬ್ಲೂಟೂಥ್ ಹೆಡ್ ಸೆಟ್

ಆಮ್ ಕೆಟ್ ಕಂಪನಿ ಇದೀಗ ಭಾರತದಲ್ಲಿ ಬ್ಲೂಟೂಥ್ ಹೆಡ್ ಸೆಟ್ಟನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಟ್ರೂಬೀಟ್ಸ್ ಏರ್ BT ಎಂಬ ಹೆಡ್ ಫೋನ್ ಬ್ಲೂಟೂಥ್ ಹೊಂದಿರುವ ಲ್ಯಾಪ್ ಟಾಪ್, ಕಂಪ್ಯೂಟರ್ ಮತ್ತು ಮೊಬೈಲ್ ಗಳೊಂದಿಗೆ ಕಾರ್ಯನಿರ್ವಹಿಸಲಿದೆ.

ಆಮ್ ಕೆಟ್ ಪ್ರತಿಷ್ಟೆಯ ವಿಷಯವಾಗಿ ತಯಾರಿಸಿರುವ ಈ ಹೆಡ್ ಫೋನ್ ನಲ್ಲಿ ವಿಶೇಷತೆ ಇರುವುದರಲ್ಲಿ ಸಂಶಯವಿಲ್ಲ. ಬಳಕೆಗೂ ಸುಲಭ ಮತ್ತು ಸರಳವಾಗಿರುವ ಈ ಹೆಡ್ ಫೋನನ್ನು ಬಳಕೆದಾರರು ಸಂಗೀತಕ್ಕಷ್ಟೇ ಅಲ್ಲ, ಕರೆ ಮಾಡಲು ಉಪಯೋಗಿಸಿಕೊಳ್ಳಬಹುದು.

ಹೆಡ್ ಫೋನ್ ನಲ್ಲಿನ ಇಯರ್ ಬಡ್ ಗಳ ಸಾಮರ್ಥ್ಯ ಮತ್ತು ಗುಣಮಟ್ಟ ಅತ್ಯುನ್ನತವಾಗಿದೆ. ಟ್ರೂಬೀಟ್ಸ್ ಏರ್ BT ನಲ್ಲಿ ಆಪ್ಟಿ ಫಿಟ್ ಇಯರ್ ಬಡ್ಸ್ ಇದ್ದು, ಅತಿ ಸ್ಪಷ್ಟ ಶಬ್ದವನ್ನು ನೀಡುತ್ತದೆ. ಅತ್ಯುನ್ನತ ಕಾರ್ಯಕ್ಷಮತೆಯನ್ನು ಇದು ಪ್ರದರ್ಶಿಸಲಿದೆ.

ಈ ಸಾಧನದಲ್ಲಿರುವ ವಾಲ್ಯೂಮ್ ಕಂಟ್ರೋಲ್ ನಿಂದ ನಿಯಂತ್ರಣ ಸುಲಭವೆನಿಸಲಿದೆ. ಇದರಲ್ಲಿರುವ ಓಮ್ನಿ ಡೈರೆಕ್ಷನಲ್ ಮಿಕ್ ಕೂಡ ಅತ್ಯಾಕರ್ಷಕ ಅಂಶವಾಗಿದೆ.

ವೈರ್ ಲೆಸ್ ಬ್ಲೂಟೂಥ್ ಟ್ಯಾಬ್ಲೆಟ್, ಐಫೋನ್, ಬ್ಲಾಕ್ ಬೆರಿ ಸೆಲ್ ಫೋನ್ ಮತ್ತು ಆಂಡ್ರಾಯ್ಡ್ ಫೋನ್ ಗಳಲ್ಲಿಯೂ ಈ ಹೆಡ್ ಫೋನ್ ಕಾರ್ಯನಿರ್ವಹಿಸುತ್ತದೆ. ಈ ಟ್ರೂಬೀಟ್ಸ್ ಏರ್ BT A2DP ಜೊತೆ ಬ್ಲೂಟೂಥ್ ಬೆಂಬಲಿಸಲಿದೆ. ಶಬ್ದ ಮಾಲಿನ್ಯ ಹೆಚ್ಚಿರುವುದರಿಂದ ಈ ಸಾಧನ ತುಂಬಾ ಉಪಯೋಗಕ್ಕೆ ಬರುತ್ತದೆ. ಇದರಲ್ಲಿರುವ ಶಬ್ದ ನಿಯಂತ್ರಣದ ಆಯ್ಕೆ ಒಳ್ಳೆ ಗುಣಮಟ್ಟದ ಸಂಗೀತವನ್ನು ಒದಗಿಸುತ್ತದೆ.

ಈ ಸಾಧನದಿಂದ ನೀವು ನಿರೀಕ್ಷಿಸಿದ ಮನರಂಜನೆ ದೊರೆಯುವುದರಲ್ಲಿ ಸಂಶಯವಿಲ್ಲ ಎಂಬುದು ಕಂಪನಿ ಮಾತು. ಈ ಸಾಧನದಲ್ಲಿ ಅತ್ಯುನ್ನತ ಗುಣಮಟ್ಟದ ಮ್ಯಾಗ್ನೆಟಿಕ್ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಎಂದು ಕಂಪನಿ ನಿರ್ದೇಶಕರು ತಿಳಿಸಿದ್ದಾರೆ. ಈ ಆಮ್ ಕೆಟ್ ಏರ್ BT ಬೆಲೆ 2,400 ರೂ ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot