ಸ್ಪಷ್ಟವಾದ ಶಬ್ದಕ್ಕೆ ವಿ-ಮೋಡಾ ಹೆಡ್ ಫೋನ್

|
ಸ್ಪಷ್ಟವಾದ ಶಬ್ದಕ್ಕೆ ವಿ-ಮೋಡಾ ಹೆಡ್ ಫೋನ್

ಹೆಡ್ ಫೋನ್ ಮಾರುಕಟ್ಟೆಗೆ ಹೋದರೆ ಅಲ್ಲಿರುವ ಅನೇಕ ಕಂಪನಿಗಳ, ಅನೇಕ ಮಾಡಲ್ ಗಳ ಹೆಡ್ ಫೋನ್ ಗಳು ತಮ್ಮ ಉತ್ತಮ ಗುಣಮಟ್ಟದಿಂದಗ್ರಾಹಕನನ್ನು ಯಾವುದನ್ನು ತೆಗೆಯಬೇಕು ಎಂಬ ಗೊಂದಲವನ್ನು ಮೂಡಿಸುತ್ತದೆ. ಅಂತಹ ಹೆಡ್ ಫೋನ್ ಗಳ ಸಾಲಿಗೆ ವಿ-ಮೋಡಾ ಹೆಡ್ ಫೋನ್ ಸೇರಿದೆ.

ವಿ-ಮೋಡಾ ಕ್ರಾಸ್ ಫೇಡ್ LP2 ಹಳೆಯ ಮಾಡಲ್ ನ ನವೀಕರಿಸಲಾದ ಆಯಾಮವಾಗಿದೆ. ನೋಡಲು ಸುಂದರವಾಗಿರುವ ಈ ಹೆಡ್ ಫೋನ್ ಕಪ್ಪು ಬಣ್ಣವನ್ನು ಹೊಂದಿದ್ದು ನೋಡಲು ಫ್ರೊಫೆಷನಲ್ ಲುಕ್ ಕೊಡುತ್ತದೆ.ಇದರ ಪ್ಯಾಡಿಂಗ್ ಡೊಡ್ಡದಾಗಿ ಮತ್ತು ಮೃದುವಾಗಿದ್ದು ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಂತೆ ಇದೆ.

ಇದರ ಕನೆಕ್ಟಿಂಗ್ ಪ್ಯಾಡ್ ಅನ್ನು ಎಡ ಬದಿಯ ಕಿವಿಯಲ್ಲಿ ಜೋಡಿಸಬಹುದಾಗಿದ್ದು , ಇದರಲ್ಲಿ ಕೆವ್ಲರ್ ಕೇಬಲ್ ಬಳಸಲಾಗಿದೆ. ಇದು ತುಂಬಾ ಶಕ್ತಿ ಶಾಲಿಯಾದ ಕೇಬಲ್ ಆಗಿದ್ದು ಇದನ್ನು ಬುಲೆಟ್ ಫ್ರೂಫ್ ನಲ್ಲಿ ಸಹ ಬಳಸಲಾಗುವುದು. ಆದ್ದರಿಂದ ಇದರ ವೈರ್ ನ ಬಾಳಿಕೆ ಬಗ್ಗೆ ಗ್ಯಾರಂಟಿಯನ್ನು ಕೊಡಬಹುದಾಗಿದೆ. ಈ ವೈರ್ ಕೊನೆಯಲ್ಲಿ 24K ಗೋಲ್ಡ್ ಲೇಪಿತ ಪ್ಲಗ್ ಅನ್ನು ಹೊಂದಿದೆ.

ಈ ಸಾಧನದಲ್ಲಿ 50 mm ನ ಡ್ಯುಯೆಲ್ ಡಯಾಫ್ರಾಗಮ್ ಡ್ರೈವರ್ ಮತ್ತು ವಿ-ಪೋರ್ಟ್ 3D ಸ್ಟೇಜಿಂಗ್ ಫೀಚರ್ ಅನ್ನು ಹೊಂದಿದೆ. ಈ ಹೆಡ್ ಫೋನ್ ನಿಂದ ಹೊರಡುವ ಶಬ್ದವು ತುಂಬಾ ಸ್ಷ್ಟವಾಗಿ ಕೇಳಿಸುವುದರ ಜೊತೆಗೆ ಜೋರಾಗಿ ಸಹ ಕೇಳಿಸುವುದು.

ಈ ಹೆಡ್ ಫೋನ್ 31 ಬಾಂಡ್ ಈಕ್ಯುಲೈಸರ್ ಹೊಂದಿದ್ದು ಕಿವಿಯ ಮೇಲೆ ಯಾವುದೆ ಕೆಟ್ಟ ಪರಿಣಾಮ ಬೀರದಂತೆ ಇದು ರಕ್ಷಣೆಯನ್ನು ಕೊಡುತ್ತದೆ. ಇದರಲ್ಲಿ ಬಟನ್ ಹೊಂದಿದ್ದು ಇದನ್ನು ಐಫೋನ್, ಐಪೋಡ್ ಗಳಲ್ಲಿ ಬಳಸಬಹುದಾಗಿದೆ.

ಈ ಹೆಡ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು 10,000 ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X