Subscribe to Gizbot

ಸ್ಪೀಕರ್ ಲೋಕದಲ್ಲಿ ಕ್ರಾಂತಿ ತರಲಿದೆ ಈ ವೈರ್ ಲೆಸ್ ಸ್ಪೀಕರ್

Posted By:
ಸ್ಪೀಕರ್ ಲೋಕದಲ್ಲಿ ಕ್ರಾಂತಿ ತರಲಿದೆ ಈ ವೈರ್ ಲೆಸ್ ಸ್ಪೀಕರ್

ಇದೀಗ ಸ್ಪೀಕರ್ ಲೋಕದಲ್ಲಿ ಕ್ರಾಂತಿಯನ್ನು ತರಲಿರುವ ಸ್ಪೀಕರ್ ಒಂದು ಬಂದಿದೆ. ಈ ಕ್ರಾಂತಿಕಾರಿ ಸ್ಪೀಕರ್ ಅನ್ನು ವೈಲೆಟ್ ಎಂದು ಹೆಸರಿಸಲಾಗಿದೆ. ಸ್ನ್ಯಾಪ್ ನೆಟ್ ವರ್ಕ್ ನ 25 ಮಂದಿ ಎಂಜಿನಿಯರ್ ಜೊತೆ ಸೇರಿ 3 ವರ್ಷಗಳ ಕಾಲ ನಿರಂತರವಾಗಿ ನಡೆಸಿದ ಸಂಶೋಧನೆ ಮತ್ತು ಅಭಿವೃದ್ಧಿಯ ಫಲ ಈ ವೈಲೆಟ್ ಸ್ಪೀಕರ್.

ಈ 5 * 1 ಸ್ಪೀಕರ್ ಸಿಸ್ಟಮ್ ಬಳಸಿ ಮಲ್ಟಿ ಪ್ಲೆಕ್ಸ್ ಸಿನಿಮಾ ಥಿಯೇಟರಿನಲ್ಲಿ ಸಿನಿಮಾ ನೋಡಿದ ಅನುಭವವನ್ನು ಪಡೆಯಬಹುದು. ವೈರ್ ಬೇಕಾಗಿಲ್ಲ, ಟವರ್ ಸ್ಪೀಕರ್ ಬೇಕಾಗಿಲ್ಲ, ಆದ್ದರಿಂದ ಇದನ್ನು ಮನೆಯ ಹಾಲ್ ನಲ್ಲಿ ಅಥವಾ ನಿಮಗೆ ಇಷ್ಟ ಬಂದ ಕಡೆ ಇಟ್ಟು ಗುಣಮಟ್ಟದ ಶಬ್ದದಲ್ಲಿ ಹಾಡುಗಳನ್ನು ಕೇಳುತ್ತಾ ಸಕತ್ ಮನರಂಜನೆ ಪಡೆಯಬಹುದಾಗಿದೆ.

ವೈಲೆಟ್ ವೈರ್ ಲೆಸ್ ಸ್ಪೀಕರ್ ಈ ಕೆಳಗಿನ ಪ್ರಮುಖ ಗುಣಲಕ್ಷಣಗಳನ್ನು ಹೊಂದಿದೆ.

ಸಬ್ ವೂಫರ್ಸ್:

* ಶಬ್ದದ ಕಂಪನಾಂಕ 40Hz-200Hz

* 18.8” x 11.58” x 14.3” ಸುತ್ತಳತೆ

* 8 ಕೆಜಿ ತೂಕ

ಆಕ್ಟೀವ್ ವೈರ್ ಲೆಸ್ ಸ್ಪೀಕರ್:

* 2 ಇಂಚಿನ ಡ್ರೈವರ್ಸ್

* 160Hz-22kHzಶಬ್ದದ ಕಂಪನಾಂಕ

* 600 ಗ್ರಾಂ ತೂಕ

ಪ್ರೊಸೆಸರ್( ಟ್ರಾನ್ಸ್ ಮೀಟರ್):

*7.41” x 3.31” x 1.75” ಸುತ್ತಳತೆ

* 300 ಗ್ರಾಂ ತೂಕ

ಈ ವೈಲೆಟ್ ಸ್ಪೀಕರ್ ನಲ್ಲಿ 5 ಸ್ಪೀಕರ್ ಗಳಿದ್ದು ನೋಡಲು ಬಲ್ಬ್ ರತಿ ಇರುತ್ತದೆ. ಅಲ್ಲದೆ ಇದನ್ನು ಪ್ಲಗ್ ಮಾಡಲ್ ಸ್ಟ್ಯಾಂಡರ್ಡ್ ಬಲ್ಬ್ ನಲ್ಲಿರುವಂತೆ ಬಳಕೆದಾರರಿಗೆ ಇಷ್ಟ ಬಂದ ಜಾಗದಲ್ಲಿ ಪ್ಲಗ್ ಮಾಡಬಹುದಾಗಿದೆ.

ಎಚ್ ಟಿ ಸಿಸ್ಟಮ್ ಗುಂಪಿಗೆ ಸೇರಿದ ಈ ಸ್ಪೀಕರ್ ನ ಮಾರುಕಟ್ಟೆ ಬೆಲೆ ರು. 65, 000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot