ಹೈಫೈ ಹೋಂ ಥಿಯೇಟರ್ ಸಿಸ್ಟಮ್ ಮಾರುಕಟ್ಟೆಗೆ

|

ಹೈಫೈ ಹೋಂ ಥಿಯೇಟರ್ ಸಿಸ್ಟಮ್  ಮಾರುಕಟ್ಟೆಗೆ
ಹೋಂ ಸ್ಪೀಕರ್ ಗಳು ಅನೇಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೋಂ ಸ್ಪೀಕರ್ ಕೊಳ್ಳಬಯಸುವರು ಮಾರುಕಟ್ಟೆಗೆ ಹೋದರೆ ಒಂದಕ್ಕಿಂತ ಒಂದು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಈ ಗುಣಮಟ್ಟದ ಸ್ಪೀಕರ್ ಗಳ ಸಾಲಿನಲ್ಲಿ ಹೊಸ ಸೇರ್ಪಡೆ ಈ ವಾರ್ ಫೆಡೆಲೆ ಅಬ್ಸಿಡಿಯನ್ 600 ಸೇರಿಸಬಹುದಾಗಿದೆ.

ವಾರ್ ಫೆಡೆಲೆ ಕಂಪನಿಯ ಈ ಸ್ಪೀಕರ್ ಹೈಫೈ ಹೋಂ ಥಿಯೇಟರ್ ಸಿಸ್ಟಮ್ ಆಗಿದ್ದು ಇದು ಮನೆಯಲ್ಲಿ ಉತ್ತಮ ಮನರಂಜನೆಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಹೋಂ ಸ್ಪೀಕರ್ ಈ ಕೆಳಗಿನ ಲಕ್ಷಣವನ್ನು ಹೊಂದಿದೆ.

* 5 ಸ್ಪೀಕರ್ ಸೆಟ್ ಗಳನ್ನು ಹೊಂದಿದೆ.

* ಫ್ಲೋರ್ ಸ್ಟ್ಯಾಂಡ್ 2

* ಸ್ಯಾಟಲೈಟ್ ಸ್ಪೀಕರ್ 2

* ಒಂದು ಸೆಂಟರ್ ಚಾನಲ್ ಸ್ಪೀಕರ್

* ಚಿನ್ನದ ಲೇಪನವಿರುವ ಕನೆಕ್ಟರ್

ಈ ಸಿಸ್ಟಮ್ ನಲ್ಲಿ ಕಂಡು ಬರುವ ಚಿಕ್ಕ ದೋಷವೆಂದರೆ ಬೇರೆಯದೆ ಆದ ಸಬ್ ವೂಫರ್ಸ್ ಹೊಂದಿಲ್ಲ. ಈ ನೂನ್ಯತೆಯನ್ನು ವಾರ್ ಫೆಡೆಲೆ ಡೈಮಂಡ್ SW150 ಸಬ್ ವೂಫರ್ಸ್ ಬಳಸಿ ಹೋಗಲಾಡಿಸಬಹುದಾಗಿದೆ.

ಈ ಸಬ್ ವೂಫರ್ಸ್ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಕಂಪ್ಯಾಕ್ಟ್

* 150W RMS ಸೌಂಡ್ ಔಟ್ ಪುಟ್

* ಕಸ್ಟಮೈಸ್ ನಿಯಂತ್ರಣ

ಈ ಸ್ಪೀಕರ್ ಅತ್ಯುತ್ತಮ ಶಬ್ದದ ಗುಣಮಟ್ಟವನ್ನು ಹೊಂದಿದ್ದು 4 ಡ್ರೈವರ್ಸ್ ಹೊಂದಿದೆ. ಆ ಡ್ರೈವರ್ಸ್ ಗಳಲ್ಲಿ 2 o30 mm ಮಧ್ಯಮ ಗಾತ್ರದ ಡ್ರೈವರ್ಸ್ , ಒಂದು 25 mmನ ಟ್ವೀಟರ್ ಮತ್ತು 200 mm ವೂಫರ್ಸ್ ಹೊಂದಿದೆ. ಸಾಮಾನ್ಯವಾಗಿ ವೂಫರ್ಸ್ ಅನ್ನು ಸ್ಪೀಕರ್ ಮುಂದುಗಡೆ ಇಡಲಾಗುತ್ತದೆ, ಆದರೆ ಇಲ್ಲಿ ಪಕ್ಕದಲ್ಲಿ ಇಡಲಾಗುತ್ತದೆ. ಇದರಿಂದಾಗಿ ಸ್ಪೀಕರ್ ನ ಜೋಡಿಸಿರುವ ರೀತಿ ಸಹ ನೋಡಲು ಚೆನ್ನಾಗಿ ಕಾಣುತ್ತದೆ.

ಇದರಲ್ಲಿರುವ ಸ್ಯಾಟಲೈಟ್ ಸ್ಪೀಕರ್ 25 mm ಟ್ವೀಟರ್ ಮತ್ತು 100 mm ಡ್ರೈವರ್ ಹೊಂದಿದೆ. ಈ ಸ್ಪೀಕರ್ ನಿಂದ ಹೊರಡುವ ಶಬ್ದ ಕೇಳುಗರಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತದೆ. ಈ ಸ್ಪೀಕ್ ಮತ್ತು ಸಬ್ ವೂಫರ್ಸ್ ಮಾರಕಟ್ಟೆಯಲ್ಲಿ ಲಭ್ಯವಿದ್ದು ಈ ಎರಡು ವಸ್ತುಗಳು ರು. 70,000 ಬೆಲೆಗೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X