Subscribe to Gizbot

ಅತ್ಯುತ್ತಮವಾದ ಯು ಎಸ್ ಬಿ ಸಾಮರ್ಥ್ಯದ ಸ್ಪೀಕರ್

Posted By:
ಅತ್ಯುತ್ತಮವಾದ ಯು ಎಸ್ ಬಿ ಸಾಮರ್ಥ್ಯದ ಸ್ಪೀಕರ್

ಇತ್ತೀಚಿಗೆ ಎಕ್ಸ್ ಟ್ರೇಮೆಮ್ಯಾಕ್ ಕಂಪನಿಯು ಟ್ಯಾಂಗೊ ಬಾರ್ ಸ್ಪೀಕರ್ ಅನ್ನು ಐ ಮ್ಯಾಕ್ ಗಾಗಿ ತಯಾರಿಸಿದೆ. ಈ ಸ್ಪೀಕರ್ ಅನ್ನು ಹಳೆಯ ಮಾದರಿಯ ಸ್ಪೀಕರ್ ಗೆ ಹೋಲಿಸಿದರೆ ಅದರ ಎರಡರಷ್ಟು ಒಳ್ಳೆಯ ಗುಣಮಟ್ಟವನ್ನು ಹೊಂದಿದೆ.ಈ ಟ್ಯಾಂಗೊ ಬಾರ್ ನಲ್ಲಿ 6 ಸ್ಪೀಕರ್ ಅನ್ನು ಸೇರಿಸಿ ಮಾಡಲಾಗಿದ್ದು ಇದು ಡ್ಯೂಯಲ್ ಡೋಮ್ ಟ್ವೀಟರ್ ಅನ್ನು ವಿಸ್ತರಿಸಿ ಉತ್ತಮ ರೀತಿಯಲ್ಲಿ ಕಾರ್ಯ ದಕ್ಷತೆಯನ್ನು ಹೊಂದಲು ಸಾಧ್ಯವಾಗಿದೆ.

ಈ ಸಾಧನದ ವಿಶೇಷತೆ ಅಂದರೆ ಇದರಲ್ಲಿರುವ ಒಂದೆ ಒಂದು USB ಬಳಸಿ ಯಾವುದೆ ಗ್ಯಾಡ್ಜೆಟ್ ಗೆ ಜೋಡಿಸಬಹುದಾಗಿದೆ. ಈ USB ಯನ್ನು ಪವರ್ ಮತ್ತು ಆಡಿಯೊ ಔಟ್ ಪುಟ್ ಗಾಗಿ ವಿನ್ಯಾಸಗೊಳಿಸಲಾಗಿದೆ. ಇಷ್ಟಲ್ಲದೆ ಇದರಲ್ಲಿ ಹೆಡ್ ಫೋನ್ ಮತ್ತು ಲೈನ್ ಇನ್ ಜಾಕ್ ಎಂಬ ಎರಡು ಹೆಚ್ಚಿನ ಸಂಪರ್ಕವನ್ನು ಸಹ ಪಡೆಯಬಹುದಾಗಿದೆ. ಇದರಲ್ಲಿರುವ ಪೋರ್ಟ್ ಇದನ್ನು ಟಿವಿ ಅಥವಾ MP3 ಪ್ಲೇಯರ್ ಗೆ ಜೋಡಿಸಲು ಸಹಾಯ ಮಾಡುತ್ತದೆ.

ಇದನ್ನು ಬಳಸಿ ಸಂಗೀತವನ್ನು ಕೇಳುವಾಗ ಬಳಕೆದಾರರಿಗೆ ಅಧಿಕ ಕಿಕ್ ನೀಡಲು ಡ್ಯೂಯಲ್ ಪ್ಯಾಸಿವ್ ರೇಡಿಯೇಟರ್ ಅನ್ನು ಬಳಸಲಾಗಿದೆ. ಇದರಲ್ಲಿರುವ ವಾಲ್ಯೂಮ್ ಕಂಟ್ರೋಲ್ ಬಳಸಿ ಶಬ್ದವನ್ನು ನಿಮಗೆ ಬೇಕಾದ ಹಾಗೆ ನಿಯಂತ್ರಿಸಬಹುದಾಗಿದೆ.ಇದನ್ನು ಐ ಮ್ಯಾಕ್ ನ ಕೆಳಗಡೆ ಸುಲಭವಾಗಿ ಇಡಬಹುದಾಗಿದ್ದು ಇದನ್ನು ಬಳಸಿ ಸಂಗೀತವನ್ನು ಕೇಳಿದರೆ ಅಥವಾ ಸಿನಿಮಾವನ್ನು ನೋಡಿದಾಗ ಇದು ಬಳಕೆದಾರರಿಗೆ ಚಿತ್ರಮಂದಿರದ ಅನುಭವನ್ನು ನೀಡುತ್ತದೆ.

ಇಷ್ಟೆಲ್ಲಾ ಗುಣಮಟ್ಟವನ್ನು ಹೊಂದಿರುವ ಈ ಸಾಧನದ ಬೆಲೆ ರು.5,000 ಆಗಿದೆ. ಇದನ್ನು ಕೊಳ್ಳ ಬಯಸುವರು ಆನ್ ಲೈನ್ ಮುಖಾಂತರ ಸಹ ಕೊಳ್ಳಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot