Subscribe to Gizbot

ಸ್ಟೀವ್ ಜಾಬ್ ಚಲನಚಿತ್ರ ಪ್ರಮುಖ ಹೈಲೈಟ್ಸ್

Written By:

ಆಪಲ್ ದಿಗ್ಗಜ ಸಂಸ್ಥಾಪಕ ಸ್ಟೀವ್ ಜಾಬ್ ಅನ್ನು ಆಧರಿಸಿ ಸಿನಿಮಾವನ್ನು ತಯಾರಿಸಲಾಗುತ್ತಿದ್ದು ಟೆಕ್ ದೈತ್ಯ ಪ್ರತಿಭೆಗೆ ವಿಶ್ವವು ನೀಡುತ್ತಿರುವ ಅತಿ ದೊಡ್ಡ ಮಾನ್ಯತೆ ಎಂಬುದಾಗಿ ಇದನ್ನು ಪರಿಗಣಿಸಲಾಗಿದೆ. ಇನ್ನು ಸಿನಿಮಾದ ನಿರ್ದೇಶಕರು, ಪಾತ್ರಧಾರಿಗಳು, ಕಥೆ, ರಚನೆಯ ಕುರಿತಾದ ಸ್ವಾರಸ್ಯಕರ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಸಿನಿಮಾ ಟೆಕ್ ಕ್ಷೇತ್ರದಲ್ಲಿ ಹೇಗೆ ಅಲೆಯನ್ನೆಬ್ಬಿಸಬಹುದು ಎಂಬುದನ್ನು ನಿಮಗೆ ತಿಳಿದುಕೊಳ್ಳಬಹುದು.

ಓದಿರಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ

ಹಾಗಿದ್ದರೆ ತಡಮಾಡದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಮಾಹಿತಿಯತ್ತ ಮುಂದುವರಿಯಿರಿ ಮತ್ತು ಈ ಅಸಾಮಾನ್ಯ ಚಿತ್ರದ ಕುರಿತಾದ ಅತ್ಯದ್ಭುತ ಗುಟ್ಟುಗಳನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡ್ಯಾನಿ ಬೋಯ್ಲಿ

ಚಿತ್ರ ನಿರ್ದೇಶಕರು

ಡ್ಯಾನಿ ಬೋಯ್ಲಿ ಹೊಸ ಸ್ಟೀವ್ ಬಾಜ್ ಚಿತ್ರದ ನಿರ್ದೇಶಕರಾಗಿದ್ದಾರೆ.

ಆರನ್ ಸಾರ್ಕಿನ್

ಚಿತ್ರದ ಕಥೆ ರಚನೆಕಾರ

ಆರನ್ ಸಾರ್ಕಿನ್ ಸ್ಟೀವ್ ಜಾಬ್ ಚಿತ್ರದ ಕಥೆ ರಚನಾಕಾರರಾಗಿದ್ದಾರೆ.

ವಾಲ್ಟರ್ ಐಸಾಕ್‌ಸನ್

ಸ್ಟೀವ್ ಜಾಬ್ ಚಿತ್ರ ಯಾವುದನ್ನು ಆಧಿರಿಸಿದೆ

ಸ್ಟೀವ್ ಜಾಬ್ ಆತ್ಮಕಥೆಯನ್ನು ಬರೆದಿರುವ ವಾಲ್ಟರ್ ಐಸಾಕ್‌ಸನ್ ಜಾಬ್ ಕುರಿತ ಸಂಪೂರ್ಣ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇನ್ನು ಹೊಸ ಜಾಬ್ ಚಿತ್ರದ ಸಹ ಬರಹಗಾರರು ಎಂಬ ಹೊಗಳಿಕೆ ಇವರಿಗೆ ಸಲ್ಲುತ್ತದೆ.

ಲಿಸಾ ಬ್ರೆನ್ನನ್

ಜಾಬ್ ಮಗಳು

ಸ್ಟೀವ್ ಜಾಬ್ ಚಿತ್ರದಲ್ಲಿ ಅವರ ಮಗಳು ಲಿಸಾ ಬ್ರೆನ್ನನ್ ಅತಿಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಮೈಕೆಲ್ ಫಾಸ್‌ಬೆಂಡರ್

ಸ್ಟೀವ್ ಜಾಬ್ ಪಾತ್ರದಲ್ಲಿ ಮೈಕೆಲ್ ಫಾಸ್‌ಬೆಂಡರ್

ಎಕ್ಸ್ ಮೆನ್ ಚಿತ್ರದಲ್ಲಿ ಮೆಗ್ನೆಟೊ ಪಾತ್ರವನ್ನು ನಿರ್ವಹಿಸಿದ್ದ ಮೈಕೆಲ್ ಸ್ಟೀವ್ ಜಾಬ್ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಿರಸ್ಕಾರ

ಆರನ್ ಸಾರ್ಕಿನ್ ತಿರಸ್ಕಾರ

ಮೈಕೆಲ್ ಸ್ಟೀವ್ ಜಾಬ್ ಪಾತ್ರವನ್ನು ನಿರ್ವಹಿಸುವುದಕ್ಕೆ ಚಿತ್ರದ ಕಥೆ ಬರಹಗಾರ ಆರನ್ ಸಾರ್ಕಿನ್ ನಿಷೇಧಿಸಿದ್ದರು. ಮೈಕೆಲ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಲಾರರು ಎಂಬ ಭಯ ಇವರಿಗಿತ್ತು. ಆದರೆ ನಟನೆಯ ನಂತರ ಮೈಕೆಲ್ ಅವರನ್ನು ಆರನ್ ಸಾರ್ಕಿನ್ ಕೊಂಡಾಡಿದ್ದಾರೆ.

ಕ್ರಿಸ್ಟಿಯನ್ ಬೇಲ್

ಸ್ಟೀವ್ ಪಾತ್ರಕ್ಕೆ ಸೂಚಿಸಿದ ಹೆಸರು

ಬ್ರೂಸ್ ವೇನ್/ಬ್ಯಾಟ್‌ಮೆನ್ ಪಾತ್ರವನ್ನು ನಿರ್ವಹಿಸಿದ್ದ ಕ್ರಿಸ್ಟಿಯನ್ ಬೇಲ್ ಅನ್ನು ಸ್ಟೀವ್ ಜಾಬ್ ಪಾತ್ರಕ್ಕೆ ನಮೂದಿಸಲಾಗಿತ್ತು. ಆದರೆ ಬೇಲ್ ಬೇರೆ ಚಿತ್ರದಲ್ಲಿ ಕೊಂಚ ಬ್ಯುಸಿ ಇದ್ದುದರಿಂದ ಮೈಕೆಲ್ ಪಾಲಿಗೆ ಸ್ಟೀವ್ ಜಾಬ್ ಪಾತ್ರ ದೊರೆಯಿತು.

ಲಿಯಾನಾರ್ಡೊ

ಲಿಯಾನಾರ್ಡೊ ಡಿಕಾಪ್ರಿಯೊ

ಇನ್ನು ವಾಲ್ಫ್ ವಾಲ್ ಸ್ಟ್ರೀಟ್‌ನ ಇನ್ನೊಂದು ದೊಡ್ಡ ಹೆಸರು ಲಿಯಾನಾರ್ಡೊವನ್ನು ಟೈಟಲ್ ರೋಲ್‌ಗೆ ಸೂಚಿಸಲಾಗಿತ್ತು. ಇನ್ನು ಸಮಯದ ಅಭಾವದಿಂದಾಗಿ ಸಿನಿಮಾದಿಂದ ಇವರು ನಿರ್ಗಮಿಸಿದರು.

ಸೇತ್ ರೋಗಿನ್

ವಜ್ನಿಯಾಕ್ ಪಾತ್ರ

ಸೇತ್ ರೋಗಿನ್ ವಜ್ನಿಯಾಕ್ ಪಾತ್ರವನ್ನು ನಿರ್ವಹಿಸಲಿದ್ದು ಸೇತ್ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ಮಿಂಚಿದ್ದಾರೆ.

ಕೇಟ್ ವಿನ್‌ಸ್ಲೆಟ್

ಜಾನ್ನಾ ಹ್ಯಾಫ್‌ಮೆನ್ ಪಾತ್ರದಲ್ಲಿ ಕೇಟ್ ವಿನ್‌ಸ್ಲೆಟ್

ಮ್ಯಾಸಿಂತೋಷ್ ಮತ್ತು ಮುಂದಿನ ತಂಡಗಳ ಮೂಲ ಸದಸ್ಯರುಗಳಲ್ಲಿ ಒಬ್ಬರಾದ ಜಾನ್ನಾ ಹ್ಯಾಫ್‌ಮೆನ್ ಪಾತ್ರವನ್ನು ಕೇಟ್ ನಿರ್ವಹಿಸಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple fans can’t wait for the new Steve Jobs movie to come out. Following 2013's lacklustre (and inaccurate) Jobs film, this movie looks to have a much better script, director and cast - once they persuaded some actors to be in it. Here are 10 things you need to know about the new Steve Jobs movie.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot