2016 ಕ್ಕಾಗಿ ಫೇಸ್‌ಬುಕ್‌ನಿಂದ ಭರ್ಜರಿ ಕೊಡುಗೆಗಳು

By Shwetha
|

ಫೇಸ್‌ಬುಕ್ ಇಂದು ವಿಶ್ವದ ಹೆಚ್ಚು ಬಳಕೆದಾರರು ಇರುವ ಪ್ರಸಿದ್ಧ ತಾಣವಾಗಿದೆ. ಹಿರಿಯರು ಕಿರಿಯರು ಎಂಬ ಭೇದವಿಲ್ಲದೆ ಪ್ರತಿಯೊಬ್ಬ ವಯಸ್ಸಿನವರೂ ಈ ತಾಣದಲ್ಲಿಂದು ತಮ್ಮ ಖಾತೆಯನ್ನು ತೆರೆಯುತ್ತಿದ್ದಾರೆ. ಇದಕ್ಕೆ ತಕ್ಕಂತೆ ಈ ಖ್ಯಾತ ಜಾಲತಾಣ ಹೆಚ್ಚು ಹೆಚ್ಚು ಆಧುನಿಕ ನವೀಕರಣಗಳನ್ನು ಮಾಡಿಕೊಳ್ಳುತ್ತಿದೆ. ಹೊಸ ವರ್ಷಕ್ಕೆ ಹೊಸತಾಗಿ ಬರಬೇಕೆಂಬ ಉದ್ದೇಶವನ್ನಿಟ್ಟುಕೊಂಡೇ ಫೇಸ್‌ಬುಕ್ 2016 ಕ್ಕಾಗಿ ಕೆಲವೊಂದು ನಾವೀನ್ಯತೆಗಳನ್ನು ತಂದುಕೊಂಡಿದೆ.

ಓದಿರಿ: ಫೇಸ್‌ಬುಕ್ ಹಿಸ್ಟ್ರಿ ಹೆಚ್ಚು ರೋಚಕ ಏಕೆ?

ಬಳಕೆದಾರರಿಗೆ ಇನ್ನಷ್ಟು ಸ್ನೇಹಪರವಾಗಿ, ಹೊಸಹೊಸ ಮಾದರಿಯಲ್ಲಿ ನವೀನ ಯೋಜನೆ ಯೋಚನೆಗಳನ್ನಿಟ್ಟುಕೊಂಡು ಇಂದು ಫೇಸ್‌ಬುಕ್ ಕೆಲವೊಂದು ಹೊಸ ಮಾದರಿಗಳನ್ನು ತನ್ನಲ್ಲಿ ತಂದುಕೊಳ್ಳುತ್ತಿದೆ ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡೋಣ.

ಫೇಸ್‌ಬುಕ್ ಲೈವ್ ವೀಡಿಯೊ

ಫೇಸ್‌ಬುಕ್ ಲೈವ್ ವೀಡಿಯೊ

ಮೊಬೈಲ್ ಅಪ್ಲಿಕೇಶನ್‌ಗಳಾದ ಪೆರಿಸ್ಕೋಪ್ ಮತ್ತು ಮೀರ್ಕಟ್ ಲೈವ್ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಾಗಿ ಬರಲಿದೆ. ಇವುಗಳ ಮೂಲಕ ಲೈವ್ ವೀಡಿಯೊವನ್ನು ಸುಲಭವಾಗಿ ಮಾಡಬಹುದಾಗಿದೆ. ಆಗಸ್ಟ್‌ನಲ್ಲಿ ಈ ಫೀಚರ್ ಅನ್ನು ಫೇಸ್‌ಬುಕ್ ಲಾಂಚ್ ಮಾಡಿದ್ದು 2016 ರ ಫೇಸ್‌ಬುಕ್ ಬಳಕೆದಾರರಿಗೆ ಇದು ಶುಭವಸರವಾಗಲಿದೆ.

ಫೇಸ್‌ಬುಕ್ ವೃತ್ತಿಪರ ಸೇವೆಗಳು

ಫೇಸ್‌ಬುಕ್ ವೃತ್ತಿಪರ ಸೇವೆಗಳು

ನೀವು ಭೇಟಿ ನೀಡಿರುವ ಸ್ಥಳಗಳ ರಿವ್ಯೂವನ್ನು ನೀಡಲು ಫೇಸ್‌ಬುಕ್ ನಿಮ್ಮಲ್ಲಿ ಕೇಳಿಕೊಂಡಿರುವುದನ್ನು ನೀವು ಗಮನಿಸಿರಬಹುದು. ನೀವು ಚೆಕ್ ಇನ್ ಆದಾಗ, ಲೊಕೇಶನ್ ಟ್ಯಾಗ್ ಮಾಡಿದಾಗ, ನಿಮ್ಮ ಅನುಭವವನ್ನು ಆಚರಿಸಿಕೊಳ್ಳಲು ಫೇಸ್‌ಬುಕ್ ನಿಮ್ಮಲ್ಲಿ ಕೇಳಿಕೊಳ್ಳುತ್ತದೆ. ಮತ್ತು ಇದು ಉದ್ದೇಶಪೂರ್ವಕವಾಗಿದೆ.

ಫೇಸ್‌ಬುಕ್ ಎಟ್ ವರ್ಕ್

ಫೇಸ್‌ಬುಕ್ ಎಟ್ ವರ್ಕ್

ಫೇಸ್‌ಬುಕ್ ಎಟ್ ವರ್ಕ್ ಫೇಸ್‌ಬುಕ್‌ನ ಎಂಟರ್ಪ್ರೈಸ್ ಸಲ್ಯೂಶನ್ ಆಗಿದೆ. ಸಾಮಾಜಿಕ ಪರಿಹಾರವನ್ನು ನೀಡುವ ಕೆಲಸವನ್ನು ಈ ಹೊಸ ಫೀಚರ್ ಮಾಡುತ್ತಿದೆ. ವೃತ್ತಿಪರ ಸಂವಹನವನ್ನು ನೀವು ಇದರ ಮೂಲಕ ನಡೆಸಬಹುದಾಗಿದೆ.

ಸುಧಾರಿತ ಹುಡುಕಾಟ

ಸುಧಾರಿತ ಹುಡುಕಾಟ

ಅಕ್ಟೋಬರ್‌ನಲ್ಲಿ ಫೇಸ್‌ಬುಕ್ ಸುಧಾರಿತ ಹುಡುಕಾಟ ಫಂಕ್ಶನ್ ಅನ್ನು ಬಿಡುಗಡೆ ಮಾಡಿದೆ. ವೈಯಕ್ತೀಕರಿಸಿದ ಫಲಿತಾಂಶಗಳಿಗೆ ಮಾಹಿತಿ ನೀಡುವ ಸುಧಾರಿತ ಇಂಟಲಿಜೆನ್ಸಿ ಇದಾಗಿದೆ.

ಫೇಸ್‌ಬುಕ್ ಮೆಸೆಂಜರ್ ಮೂಲಕ ಉಬರ್ ಇಂಟಿಗ್ರೇಶನ್

ಫೇಸ್‌ಬುಕ್ ಮೆಸೆಂಜರ್ ಮೂಲಕ ಉಬರ್ ಇಂಟಿಗ್ರೇಶನ್

ಮೆಸೆಂಜರ್ ಅಪ್ಲಿಕೇಶನ್ ಬಳಸಿ ಉಬರ್ ಸೇವೆಗೆ ನಿಮ್ಮ ವಿನಂತಿಯನ್ನು ಇದೀಗ ನೀವು ಕಳುಹಿಸಬಹುದಾಗಿದೆ.

ಫೇಸ್‌ಬುಕ್ ಶಾಪಿಂಗ್ ಟ್ಯಾಬ್

ಫೇಸ್‌ಬುಕ್ ಶಾಪಿಂಗ್ ಟ್ಯಾಬ್

ಜುಲೈನಲ್ಲಿ ಫೇಸ್‌ಬುಕ್ ಬೈ ಬಟನ್ ಅನ್ನು ಸೇರಿಸಿ ಫೇಸ್‌ಬುಕ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಇ ಕಾಮರ್ಸ್ ಪಾಲುದಾರರಿಗೆ ಫೇಸ್‌ಬುಕ್ ಒದಗಿಸಿತ್ತು.

ಇನ್‌ಸ್ಟಂಟ್ ಆರ್ಟಿಕಲ್ಸ್

ಇನ್‌ಸ್ಟಂಟ್ ಆರ್ಟಿಕಲ್ಸ್

ಐಓಎಸ್‌ಗಾಗಿ ಫೇಸ್‌ಬುಕ್ ಇನ್‌ಸ್ಟಂಟ್ ಆರ್ಟಿಕಲ್ಸ್ ಅನ್ನು ಮೇನಲ್ಲಿ ತಾಣ ಪ್ರಸ್ತುಪಡಿಸಿದೆ. ಫೇಸ್‌ಬುಕ್ ಅಪ್ಲಿಕೇಶನ್‌ನೊಳಗೆಯೇ ವಿತರಿಸಿದ ವಿಷಯವನ್ನು ಪ್ರಕಟಣೆದಾರರಿಗೆ ತೋರಿಸುತ್ತದೆ.

ಈವೆಂಟ್ಸ್

ಈವೆಂಟ್ಸ್

ಫೇಸ್‌ಬುಕ್ ಈವೆಂಟ್ಸ್ ಈಗಾಗಲೇ ತಾಣದಲ್ಲಿದ್ದರೂ, ಅಷ್ಟೊಂದು ಖ್ಯಾತಿಯನ್ನು ಗಳಿಸಿಕೊಂಡಿಲ್ಲ. ಆದರೆ ತನ್ನ ಈ ಫೀಚರ್‌ನಲ್ಲಿ ಇನ್ನಷ್ಟು ಹೊಸ ಅಂಶಗಳನ್ನು ಸೇರಿಸುವ ಮೂಲಕ ಫೇಸ್‌ಬುಕ್ ಈವೆಂಟ್ಸ್ ಅನ್ನು ತಾಣ ಪ್ರಸಿದ್ಧಿಗೊಳಿಸುವ ನಿಟ್ಟಿನಲ್ಲಿದೆ.

ನಾನ್ ಪ್ರಾಫಿಟ್ ಕ್ರೌಡ್ ಫಂಡಿಂಗ್

ನಾನ್ ಪ್ರಾಫಿಟ್ ಕ್ರೌಡ್ ಫಂಡಿಂಗ್

ಕ್ರೌಡ್ ಫಂಡಿಂಗ್ ಕ್ಯಾಂಪೈನ್‌ಗಳಿಗೆ ಫೇಸ್‌ಬುಕ್ ಉತ್ತಮ ಆಯ್ಕೆಯಾಗಿದೆ. ಫೇಸ್‌ಬುಕ್ 'ಡೊನೇಟ್ ಬಟನ್' ಅನ್ನು ಬಳಸುವ ಮೂಲಕ ಇತರ ಸೈಟ್‌ಗಳಿಂದಲೂ ಉತ್ತಮವಾಗಿ ಫಂಡಿಂಗ್ ಅನ್ನು ನಡೆಸಬಹುದಾಗಿದೆ.

ಮ್ಯೂಸಿಕ್ ಸ್ಟೋರೀಸ್

ಮ್ಯೂಸಿಕ್ ಸ್ಟೋರೀಸ್

ಫೇಸ್‌ಬುಕ್‌ನಲ್ಲಿ ಉತ್ತಮ ಮ್ಯೂಸಿಕ್ ಅನ್ವೇಷಣೆ ಮತ್ತು ಹಂಚಿಕೆಯನ್ನು ನಡೆಸುವುದಕ್ಕಾಗಿ ಮ್ಯೂಸಿಕ್ ಸ್ಟೋರೀಸ್ ಅನ್ನು ನಾವು ತಾಣದಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

Best Mobiles in India

English summary
The changes to Facebook in 2016 are new to Facebook, but aren’t new to the social landscape. Facebook appears to be borrowing the best aspects of other popular services and integrating them into Facebook as a central hub.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X