ಈ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಖರೀದಿ ಮಾಡದಿರಲು 10 ಕಾರಣಗಳು!

|

ಪ್ರಸಿದ್ಧ ಕೆಲವು ಚೀನಾ ಇ-ಕಾಮರ್ಸ್ ವೆಬ್ ಸೈಟ್ ಗಳು ಮತ್ತು ಆಪ್ ಗಳು ಭಾರತದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ, ಸರ್ಕಾರವು ಈ ವೆಬ್ ಸೈಟ್ ಗಳನ್ನು ಮುಚ್ಚಲು ತೀರ್ಮಾನಿಸಿದಂತೆ ಕಾಣುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಚೀನಾದ ಇ-ಕಾಮರ್ಸ್ ವೆಬ್ ಸೈಟ್ ಉದಾಹರಣಗೆ ಕ್ಲಬ್ ಫ್ಯಾಕ್ಟರಿ, ಅಲಿ ಎಕ್ಸ ಪ್ರೆಸ್ ಇತ್ಯಾದಿಗಳಲ್ಲಿ ವಸ್ತುಗಳು ಅತೀ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಈ ವೆಬ್ ಸೈಟ್ ಗಳಲ್ಲಿನ ಖರೀದಿಯು ನಿಮಗೆ ತೊಂದರೆ ತರುವ ಸಾಧ್ಯತೆ ಇದೆ. ಹೇಗೆ ಎಂಬ ಬಗ್ಗೆ ವಿವರಣೆ ಇಲ್ಲಿದೆ ನೋಡಿ.

ಈ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಖರೀದಿ ಮಾಡದಿರಲು 10 ಕಾರಣಗಳು!

ಚೀನಾ ವೆಬ್ ಸೈಟ್ ಗಳಿಗೆ ಭಾರತೀಯರಿಂದ ತಾತ್ಸಾರ:ಅಲಿ ಎಕ್ಸ್ ಪ್ರೆಸ್, ಶೈನ್, ಕ್ಲಬ್ ಫ್ಯಾಕ್ಟರಿ, ವಿಶ್ ಮತ್ತು ಇತರೆ ಹಲವು ವೆಬ್ ಸೈಟ್ ಗಳು

ಚೀನಾದ ಇ-ಟ್ರೈಲರ್ ಗಳು ತಮ್ಮ ವಸ್ತುಗಳನ್ನು ಭಾರತಕ್ಕೆ ಕಳುಹಿಸುವಾಗ “ ಗಿಫ್ಟ್ “ ಎಂದು ನಮೂದಿಸುತ್ತವೆ

ಚೀನಾದ ಇ-ಟ್ರೈಲರ್ ಗಳು ತಮ್ಮ ವಸ್ತುಗಳನ್ನು ಭಾರತಕ್ಕೆ ಕಳುಹಿಸುವಾಗ “ ಗಿಫ್ಟ್ “ ಎಂದು ನಮೂದಿಸುತ್ತವೆ

ಕಂಪೆನಿಗಳಾದ ಕ್ಲಬ್ ಫ್ಯಾಕ್ಟರಿ, ಅಲಿ ಎಕ್ಸ್ ಪ್ರೆಸ್ ಗಳು ತಮ್ಮ ಸೈಟ್ ನಲ್ಲಿ ಖರೀದಿಸಿದ ವಸ್ತುಗಳನ್ನು ಗ್ರಾಹಕರಿಗೆ ಕಳುಹಿಸುವಾಗ " ಗಿಫ್ಟ್ " ಎಂದು ಕಳುಹಿಸುತ್ತದೆ. ಇದು ಖರೀದಿದಾರರಿಗೆ ಸಮಸ್ಯೆಯಾಗಿದೆ.

ಸರ್ಕಾರವು 5,000 ರುಪಾಯಿ ವರೆಗಿನ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ನೀಡುತ್ತದೆ ಯಾವುದೇ ಉಡುಗೊರೆ 5,000 ರುಪಾಯಿ ಬೆಲೆಬಾಳುವುದಾಗಿದ್ದು ಅದು ವಿದೇಶದಿಂದ ಬಂದರೆ ಭಾರತೀಯ ಸರ್ಕಾರವು ಆ ಉಡುಗೊರೆಗೆ ಯಾವುದೇ ತೆರಿಗೆಯನ್ನು ವಿಧಿಸುವುದಿಲ್ಲ. ಆದರೆ ಚೀನಾ ಕಂಪೆನಿಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದು ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದೆ.

ಅಲಿ ಎಕ್ಸ್ ಪ್ರೆಸ್, ಕ್ಲಬ್ ಫ್ಯಾಕ್ಟರಿ ಆಮದು ಸುಂಕವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ

ಅಲಿ ಎಕ್ಸ್ ಪ್ರೆಸ್, ಕ್ಲಬ್ ಫ್ಯಾಕ್ಟರಿ ಆಮದು ಸುಂಕವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ

ಉಡುಗೊರೆ ಎಂಬುದಾಗಿ ವಸ್ತುಗಳನ್ನು ಕಳುಹಿಸುವ ಕಾರಣದಿಂದಾಗಿ ಚೀನಾದ ಈ ಕಂಪೆನಿಗಳು ಆಮದು ಸುಂಕವನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ವಿದೇಶದಿಂದ ಆಮದಾಗುವ ಪ್ರತಿಯೊಂದು ವಸ್ತುವಿಗೂ ಸುಂಕ ಕಟ್ಟಬೇಕು. ಆದರೆ ಇವರು ಇದರಲ್ಲಿ ವಂಚನೆ ಮಾಡುತ್ತಿದ್ದಾರೆ.

ಚೀನಾದ ಕಂಪೆನಿಗಳು ಜಿಎಸ್ ಟಿ ಮತ್ತು ಇತರೆ ಟ್ಯಾಕ್ಸ್ ಗಳನ್ನು ಸರ್ಕಾರಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ

ಚೀನಾದ ಕಂಪೆನಿಗಳು ಜಿಎಸ್ ಟಿ ಮತ್ತು ಇತರೆ ಟ್ಯಾಕ್ಸ್ ಗಳನ್ನು ಸರ್ಕಾರಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ

ಭಾರತೀಯ ಇ-ಕಾಮರ್ಸ್ ವೆಬ್ ಸೈಟ್ ನ ಎಕ್ಸಿಕ್ಯೂಟೀವ್ ಹೇಳುವ ಪ್ರಕಾರ ಅಲಿಎಕ್ಸ್ ಪ್ರೆಸ್ ಮತ್ತು ಇತರೆ ಚೀನಾ ವೆಬ್ ಸೈಟ್ ಗಳು ಜಿಎಸ್ ಟಿ ಅಥವಾ ಇತರೆ ಕಸ್ಟಮ್ ಡ್ಯೂಟಿಗಳನ್ನು ಪಾವತಿ ಮಾಡುವುದಿಲ್ಲ. ಹಾಗಾಗಿ ಅವರಿಗೆ ಸಾಕಷ್ಟು ಹಣದ ಉಳಿತಾಯವಾಗುತ್ತಿದೆ. ಭಾರತೀಯ ಸರ್ಕಾರಕ್ಕೆ ವಂಚಿಸಿ ಅವರು ಹಣ ಉಳಿತಾಯ ಮಾಡುತ್ತಿದ್ದಾರೆ.

ಚೀನಾ ಪೋಸ್ಟ್ ಮೂಲಕ ವಸ್ತುಗಳನ್ನು ಗಿಫ್ಟ್ ಎಂದು ಕಳುಹಿಸಲಾಗುತ್ತದೆ

ಚೀನಾ ಪೋಸ್ಟ್ ಮೂಲಕ ವಸ್ತುಗಳನ್ನು ಗಿಫ್ಟ್ ಎಂದು ಕಳುಹಿಸಲಾಗುತ್ತದೆ

ಚೀನಾ ಕಂಪೆನಿಗಳು ವಸ್ತುಗಳನ್ನು ಭಾರತೀಯ ಅಂಚೆಯ ಮೂಲಕ ಕಳುಹಿಸುವ ಬದಲಾಗಿ ಚೀನಾ ಅಂಚೆ ಮೂಲಕ ಕಳುಹಿಸುತ್ತಾರೆ. ಆ ಮೂಲಕ ಭಾರತೀಯ ಸರ್ಕಾರಕ್ಕೆ ಆಮದು ಸುಂಕವನ್ನು ವಂಚಿಸುತ್ತಿದ್ದಾರೆ.

ಅನಿವಾಸಿ ಭಾರತೀಯರು ಭಾರತದಲ್ಲಿ ವಾಸಿಸುತ್ತಿರುವ ತಮ್ಮ ಕುಟುಂಬ ಸದಸ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಗಿಫ್ಟ್ ಗಳನ್ನು ಕಳುಹಿಸುವ ಉದ್ದೇಶವನ್ನು ಈ "ಗಿಫ್ಟ್" ಪೋಸ್ಟ್ ಹೊಂದಿದೆ.

ಗಿಫ್ಟ್ ಹಿಂದಿನ ಉದ್ದೇಶವೆಂದರೆ ಎನ್ಆರ್ ಐಗಳಿಗೆ ವಿದೇಶದಲ್ಲೇ ಕುಳಿತು ಭಾರತದಲ್ಲಿ ವಾಸಿಸುತ್ತಿರುವ ತಮ್ಮ ಸ್ನೇಹಿತರು/ಕುಟುಂಬದವರಿಗೆ ಉಡುಗೊರೆಗಳನ್ನು ಕಳುಹಿಸುವುದಕ್ಕೆ ನೆರವಾಗುವುದು.

ತೆರಿಗೆಯಲ್ಲಿ ವಿನಾಯಿತಿ ಮತ್ತು ಮೋಸ ಮಾಡುವ ಕಾರಣ ಚೀನಾದ ಸೈಟ್ ಗಳಲ್ಲಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ

ವಸ್ತುಗಳನ್ನು ಉಡುಗೊರೆಗಳೆಂದು ಕಳುಹಿಸುವ ಕಾರಣದಿಂದಾಗಿ ಅಲಿ ಎಕ್ಸ್ ಪ್ರೆಸ್, ಶೈನ್ ಗಳಲ್ಲಿ ವಸ್ತುಗಳು ಭಾರತೀಯ ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಲಭ್ಯವಾಗುವುದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ.

ಚೀನಾದ ಇ-ಟ್ರೈಲರ್ ಗಳು ಕಳುಹಿಸುವ ವಸ್ತುಗಳಲ್ಲಿ ಅಥವಾ ಪ್ಯಾಕೇಜ್ ನಲ್ಲಿ ಎಂಆರ್ ಪಿ ಬರೆದಿರುವುದಿಲ್ಲ

ಚೀನಾದ ಇ-ಟ್ರೈಲರ್ ಗಳು ಕಳುಹಿಸುವ ವಸ್ತುಗಳಲ್ಲಿ ಅಥವಾ ಪ್ಯಾಕೇಜ್ ನಲ್ಲಿ ಎಂಆರ್ ಪಿ ಬರೆದಿರುವುದಿಲ್ಲ

ಚೀನಾದ ಶಾಪಿಂಗ್ ಸೈಟ್ ಗಳ ಮೇಲೆ ಬಂದಿರುವ ಮತ್ತೊಂದು ದೊಡ್ಡ ಅಪವಾದವೇನೆಂದರೆ ಚೀನಾ ವೆಬ್ ಸೈಟ್ ಖರೀದಿಸುವ ವಸ್ತುಗಳಿಗೆ ಮ್ಯಾಕ್ಸಿಮಂ ರೀಟೈಲ್ ಪ್ರೈಸ್( ಗರಿಷ್ಟ ಮಾರಾಟ ಬೆಲೆ ಅಥವಾ ಎಂಆರ್ ಪಿ)ಯನ್ನು ನಮೂದಿಸಿರುವುದಿಲ್ಲ. ಪ್ಯಾಕೇಜ್ಡ್ ಕಮೋಡಿಟೀಸ್ ರೂಲ್ಸ್ 2017 ರ ಪ್ರಕಾರ ಪ್ರತಿಯೊಂದು ವಸ್ತುವಿನ ಮೇಲೂ ಕೂಡ ಎಂಆರ್ ಪಿ ನಮೂದಿಸುವುದು ಖಡ್ಡಾಯವಾಗಿರುತ್ತದೆ.

ಸರ್ಕಾರವು ವರ್ಷಕ್ಕೆ ಕೇವಲ 4 ಉಡುಗೊರೆ ಮಾತ್ರ ಕಳಿಸುವಂತೆ ನಿಯಮ ಮಾಡುವ ಸಾಧ್ಯತೆ

ಟೈಮ್ಸ್ ಆಫ್ ಇಂಡಿಯಾಗೆ ಬಂದಿರುವ ಮಾಹಿತಿಯ ಪ್ರಕಾರ ಸರ್ಕಾರವು ಭಾರತೀಯ ಅಂಚೆಗೆ ಆಮದು ವಸ್ತುಗಳನ್ನು ಕಲೆಕ್ಟ್ ಮಾಡುವಾಗ ಒಂದು ವಿಳಾಸಕ್ಕೆ ವರ್ಷಕ್ಕೆ ಕೇವಲ ನಾಲ್ಕು ಉಡುಗೊರೆಗಳನ್ನು ಮಾತ್ರವೇ ಕಳುಹಿಸಲು ಅವಕಾಶ ನೀಡುವ ಹೊಸ ನಿಯಮವನ್ನು ಜಾರಿಗೆ ತರುವ ಸಾಧ್ಯತೆ ಇದೆ.

ಭಾರತೀಯ ಪೋಸ್ಟ್ ಕೂಡ ಆಮದು ಹಬ್ ಗಳನ್ನು ಸೆಟ್ ಅಪ್ ಮಾಡಲಿದೆ

ಭಾರತೀಯ ಕಂಪೆನಿಗಳಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ಆಮದು ಹಬ್ ಗಳನ್ನು ಸೆಟ್ ಅಪ್ ಮಾಡುವ ಸಾಧ್ಯತೆ ಇದೆ.

Best Mobiles in India

Read more about:
English summary
10 reasons why you may not be able to shop from Ali Express, Club Factory and other Chinese e-commerce websites

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X