ಫೇಸ್‌ಬುಕ್‌ ಉದ್ಯೋಗಿಗಳಿಗೆ ಮಾತ್ರ ಅರ್ಥವಾಗುವ ಪದಗಳು ಯಾವುವು ಗೊತ್ತೇ

By Suneel
|

ಯಾರು ಎಷ್ಟೇ ಬುದ್ಧಿವಂತರಾದ್ರು, ಇಂಗ್ಲೀಷ್‌ ಭಾಷೆ ಮಾತನಾಡುವುದರಲ್ಲಿ ಎಷ್ಟೇ ನಿಪುಣರಾದರು ಸಹ ಎಲ್ಲಾ ಪದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದೊಂದು ಉದ್ಯೋಗ ಕ್ಷೇತ್ರದವರಲ್ಲಿಯೂ ಸಹ ಅವರದೇ ಆದ ಕೆಲವು ಕೋಡ್‌ ಪದಗಳು ಇರುತ್ತವೆ. ಅಂತೆಯೇ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಫೇಸ್‌ಬುಕ್‌ ಕಂಪನಿ ಉದ್ಯೋಗಿಗಳಿಗೆ ಮಾತ್ರ ಅರ್ಥವಾಗುವ ಕುತೂಹಲಕಾರಿ ಪದಗಳನ್ನು ಪರಿಚಯಿಸುತ್ತಿದ್ದೇವೆ. ಅವುಗಳು ಯಾವುವು ಎಂದು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ..

ಓದಿರಿ :ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ಟಿಎನ್‌ಆರ್‌ 250

ಟಿಎನ್‌ಆರ್‌ 250

ಟಿಎನ್‌ಆರ್‌ 250 ಎಂಬ ಪದವನ್ನು ಫೇಸ್‌ಬುಕ್‌ ಉದ್ಯೋಗಿಗಳು ಅಲ್ಲಿನ ಮೊದಲ 250 ಉದ್ಯೋಗಿಗಳಿಗೆ ಬಳಸುತ್ತಾರೆ. ಅಲ್ಲದೇ ಈ ಪದದ ಸಂಕ್ಷಿಪ್ತ ಅರ್ಥ "250 ನವ ಶ್ರೀಮಂತರು".

ಬೂಟ್‌ಕ್ಯಾಂಪ್‌

ಬೂಟ್‌ಕ್ಯಾಂಪ್‌

ಫೇಸ್‌ಬುಕ್‌ನ ಹೊಸ ಉದ್ಯೋಗಿಗಳು 6 ವಾರಗಳು ಕಡ್ಡಾಯವಾಗಿ ಫೇಸ್‌ಬುಕ್‌ ಕಂಪನಿಯ ಬಗ್ಗೆ ಪರಿಚಯ ಪಡೆಯುವುದನ್ನು "ಬೂಟ್‌ಕ್ಯಾಂಪ್‌" ಎಂದು ಕರೆಯಲಾಗುತ್ತಿದೆ.

ಫೇಸ್‌ವರ್ಸರಿ

ಫೇಸ್‌ವರ್ಸರಿ

ಫೇಸ್‌ಬುಕ್‌ ಕಂಪನಿಯಲ್ಲಿ ಒಬ್ಬ ಉದ್ಯೋಗಿ ಕೆಲಸ ನಿರ್ವಹಿಸಿದ ಪ್ರತಿವರ್ಷದ ಆಚರಣೆಯಾಗಿದೆ. ಅಂತಹ ಸಂದರ್ಭದಲ್ಲಿ ಫೇಸ್‌ಬುಕ್‌ ಪೇಜ್‌ನಲ್ಲಿ ಹುಟ್ಟಿದಬ್ಬದ ಆಚರಣೆ ಶುಭಾಶಯಗಳನ್ನು ತಿಳಿಸಿದ ಹಾಗೆ ಪ್ರತಿ ವರ್ಷವು ಸಹ ಎಲ್ಲರೂ ಅಂತಹ ಉದ್ಯೋಗಿಗೆ ಶುಭಾಶಯ ತಿಳಿಸುತ್ತಾರೆ. ಅಲ್ಲದೇ ಅಂದು ಫೇಸ್‌ಬುಕ್‌ ಕ್ಯಾಂಪಸ್‌ನಲ್ಲಿ ವಿಶೇಷ ಬಲೂನ್‌ಗಳನ್ನು ಮಾರಾಟ ಮಾಡುತ್ತಾ ಅವರ ಹೆಸರುಗಳನ್ನು ಪಟ್ಟಿ ಮಾಡಿ ಪೇಜ್‌ನಲ್ಲಿ ಹಾಕಲಾಗಿರುತ್ತದೆ.

ಗೇಮ್‌ ಡೇ

ಗೇಮ್‌ ಡೇ

ಬೆಳವಣಿಗೆ ಆವೃತ್ತಿಯನ್ನು ಪ್ರದರ್ಶಿಸುವ ದಿನ. ಪ್ರತಿ ವಸಂತದಲ್ಲೂ ಸಹ ಫೇಸ್‌ಬುಕ್‌ ಕಂಪನಿ ಉದ್ಯೋಗಿಗಳು ಒಟ್ಟಿಗೆ ಸೇರಿ ತಮ್ಮ ತಮ್ಮ ಟೀಮ್‌ಗಳು ಒಂದೇ ಬಣ್ಣದ ಬಟ್ಟೆಗಳನ್ನು ಧರಿಸಿ ಕಂಪನಿಯ ಪಾರ್ಕ್‌ನಲ್ಲಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಾರೆ. ಇದನ್ನು ಅಲ್ಲಿ ಗೇಮ್‌ ಡೇ ಎನ್ನುತಾರೆ.

ಎಪಿಕ್‌

ಎಪಿಕ್‌

ಎಪಿಕ್‌ ಎಂಬುದು ಗುಣವಾಚಕ ಮಾತ್ರವಲ್ಲದೇ ಫೇಸ್‌ಬುಕ್‌ ಕಂಪನಿಯ ಮುಖ್ಯ ಕೆಫೆಟೇರಿಯಾ ಆಗಿದೆ.

 ಲಿವಿನ್ ದಿ ಡ್ರೀಮ್‌

ಲಿವಿನ್ ದಿ ಡ್ರೀಮ್‌

ಈ ಪದವು ಸ್ಲೋಗನ್‌ ಅಲ್ಲಾ. ಫೇಸ್‌ಬುಕ್‌ ಕ್ಯಾಂಪಸ್‌ನ ಇನ್ನೊಂದು ಕೆಫೆಟೇರಿಯಾ ಹೆಸರು. ಈ ಹೆಸರನ್ನು ಫೇಸ್‌ಬುಕ್‌ ಕಂಪನಿಯ ಕೆಫೆಟೇರಿಯಾದ ಮೊದಲ ಅಡಿಗೆ ಮಾಡುತ್ತಿದ್ದವರ ನೆನಪಿಗಾಗಿ ಅವರು ಸತ್ತ ನಂತರ ಆ ಹೆಸರನ್ನು ಇಡಲಾಗಿದೆ.

ಲಿಟ್ಲು ರೆಡ್‌ ಬುಕ್‌

ಲಿಟ್ಲು ರೆಡ್‌ ಬುಕ್‌

ಫೇಸ್‌ಬುಕ್‌ 2012ರಲ್ಲಿ ಬಿಲಿಯನ್‌ ಬಳಕೆದಾರರನ್ನು ಹೊಂದಿದಾಗ ಅಲ್ಲಿನ ಉದ್ಯೋಗಿಗಳಿಗೆ ನೀಡಿದ ಪುಸ್ತಕಗಳನ್ನು ರೆಡ್‌ ಬುಕ್‌ ಎಂದು ಕರೆಯಲಾಗುತ್ತದೆ. ಈ ಪದವು ಅಲ್ಲಿನ ಉದ್ಯೋಗಿಗಳಿಗೆ ಮಾತ್ರ ಅರ್ಥವಾಗುತ್ತದೆ. ಈ ಪುಸ್ತಕದಲ್ಲಿ ಅಲ್ಲಿನ ಸಂಸ್ಕೃತಿ, ಉದ್ಯೋಗಿಗಳ ಚಾಲೆಂಜ್‌, ಉದ್ದೇಶ ಮತ್ತು ಕಂಪನಿಯ ಕೆಲವು ಹಾಸ್ಯಭರಿತವಾದ ಸನ್ನಿವೇಶಗಳ ಬಗ್ಗೆ ಇರುತ್ತದೆ. ಕೊನೆಯ ಪುಟದಲ್ಲಿ ಉದ್ಯೋಗಿಗಳಿಗೆ "ನಾವು ಎನಾದರೂ ಸೃಜನಾತ್ಮಕವಾಗಿ ಕ್ರಿಯೇಟ್‌ ಮಾಡದಿದ್ದಲ್ಲಿ ಅದು ನಮ್ಮನ್ನೇ ಕಿಲ್‌ (ಸಾಯುಸತ್ತದೆ) ಮಾಡುತ್ತದೆ" ಎಂದು ಸವಾಲು ಹಾಕಿರಲಾಗಿರುತ್ತದೆ.

 20

20

ಫೇಸ್‌ಬುಕ್‌ ಕಂಪನಿಯ ಹೊಸ ಕ್ಯಾಂಪಸ್ ಅನ್ನು ಫ್ಯ್ರಾಂಕ್‌ ಗೆಹ್ರಿ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಫೇಸ್‌ಬುಕ್‌ ಬಿಲ್ಡ್‌ ಮಾಡುತ್ತಿರುವ ಈ ಸರಳ ಮೆನ್ಲೊ ಪಾರ್ಕ್‌ ಕ್ಯಾಂಪಸ್‌ ಅನ್ನು 20 ಎಂದು ಕರೆಯಲಾಗುತ್ತದೆ. ಅತ್ಯುನ್ನತ ವಿಶೇಷತೆಯನ್ನು ಈ ಹೊಸ ಕ್ಯಾಂಪಸ್‌ ಹೊಂದಿದೆ ಎನ್ನಲಾಗಿದೆ. ಅದನ್ನು 20 ಎಂದು ಕರೆಯಲಾಗುತ್ತದೆ.

ಗ್ರಾವಿಟಿ ರೂಂ

ಗ್ರಾವಿಟಿ ರೂಂ

ಇನ್ಸ್ಟಾಗ್ರಾಂನ ಕಛೇರಿಯಲ್ಲಿ ಹೆಸರೇ ಹೇಳುವಂತೆ ಅಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಆ ಕಛೇರಿಯನ್ನು ಗ್ರಾವಿಟಿ ರೂಂ ಎಂದು ಕರೆಯಲಾಗುತ್ತದೆ.

ಹ್ಯಾಕರ್‌ ಸ್ಕ್ವೇರ್‌

ಹ್ಯಾಕರ್‌ ಸ್ಕ್ವೇರ್‌

ಹ್ಯಾಕರ್‌ ಸ್ಕ್ವೇರ್‌ ಫೇಸ್‌ಬುಕ್‌ ಕಂಪನಿಯ ಎಲ್ಲಾ ಕಾರ್ಯಕ್ರಮಗಳಿಗೆ ಪ್ರಧಾನ ಸ್ಥಳವಾಗಿದೆ. ಹಾಗೂ ಎಲ್ಲಾ ಉದ್ಯೋಗಿಗಳು ಒಟ್ಟಿಗೆ ಭೇಟಿಯಾಗಲು ಇರುವ ಮುಖ್ಯ ಸ್ಥಳವನ್ನು ಅಲ್ಲಿನ ಉದ್ಯೋಗಿಗಳು ಹ್ಯಾಕರ್‌ ಸ್ಕ್ವೇರ್ ಎಂದು ಕರೆಯುತ್ತಾರೆ. ಅಲ್ಲದೇ ಇತರೆ ಎಲ್ಲಾ ಸ್ಥಳಗಳನ್ನು ಅಲ್ಲಿಂದ ನೋಡಬಹುದಾಗಿದೆ.

Most Read Articles
Best Mobiles in India

English summary
10 words only Facebook employees understand. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X