5G ಸ್ಮಾರ್ಟ್‌ಫೋನ್‌ ಬಳಸಿದ್ರೆ ಕ್ಯಾನ್ಸರ್‌ ಬರುತ್ತಾ? ಈ ವಿಚಾರದ ಬಗ್ಗೆ ನೀವು ತಿಳಿಯಲೇಬೇಕು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಮಂದಿ 5G ಫೋನ್‌ಗಳಿಗೆ ಹೆಚ್ಚಿನ ಅಧ್ಯತೆ ನೀಡುತ್ತಿದ್ದಾರೆ. ಭಾರತದಲ್ಲಿ 5G ರೂಲ್‌ಔಟ್‌ ಆದ ನಂತರ ಇದರ ಪ್ರಮಾಣ ತುಸು ಹೆಚ್ಚೆ ಇದೆ. ಆದರೆ 5G ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡುವಂತಹ ವರದಿಯೊಂದು ಇದೀಗ ಬಹಿರಂಗವಾಗಿದೆ. ಯುಎಸ್‌ನ ನ್ಯಾಷನಲ್‌ ಕ್ಯಾನ್ಸರ್‌ ಇನ್ಸಿಟ್ಯೂಟ್‌ ನೀಡಿರುವ ಈ ವರದಿಯಲ್ಲಿ 5G ಸ್ಮಾರ್ಟ್‌ಫೋನ್‌ಗಳ ಬಳಕೆ ಕ್ಯಾನ್ಸರ್‌ ಅನ್ನು ತರುವ ಸಾಧ್ಯತೆಯಿದೆ ಎಂದು ಹೇಳಿದೆ.

5G

ಹೌದು, 5G ಸ್ಮಾರ್ಟ್‌ಫೋನ್‌ಗಳು ಕ್ಯಾನ್ಸರ್‌ಗೆ ಕಾರಣವಾಗಲಿವೆ ಎಂದು ಯುಎಸ್‌ನ ನ್ಯಾಷನಲ್‌ ಇನ್ಸ್ಟಿಟ್ಯೂಯ್‌ ವರದಿಯಲ್ಲಿ ಹೇಳಲಾಗಿದೆ. 5G ಸ್ಮಾರ್ಟ್‌ಫೋನ್‌ಗಳಲ್ಲಿರುವ ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ರೇಡಿಯೇಷನ್‌ (ರೇಡಿಯೋ ಆವರ್ತನ ವಿಕಿರಣ) ಇರುವ ಕಾರಣ ಇದು ಕ್ಯಾನ್ಸರ್‌ ಉಂಟು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. 5G ರೇಡಿಯೇಷನ್‌ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಕ್ಯಾನ್ಸರ್‌ ಉಂಟು ಮಾಡಲಿದೆ ಎನ್ನಲಾಗಿದೆ. ಹಾಗಾದ್ರೆ 5G ಸ್ಮಾರ್ಟ್‌ಫೋನ್‌ ಬಳಕೆದಾರರು ಕ್ಯಾನ್ಸರ್‌ ಅಪಾಯದಿಂದ ದೂರಾಗಲು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

5G ಸ್ಮಾರ್ಟ್‌ಫೋನ್‌ ಕ್ಯಾನ್ಸರ್‌ಗೆ ಹೇಗೆ ಕಾರಣವಾಗಲಿದೆ?

5G ಸ್ಮಾರ್ಟ್‌ಫೋನ್‌ ಕ್ಯಾನ್ಸರ್‌ಗೆ ಹೇಗೆ ಕಾರಣವಾಗಲಿದೆ?

5G ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರೇಡಿಯೇಷನ್‌ ಅನ್ನು ಹೊಂದಿವೆ. ಇದರಿಂದ ನೇರವಾಗಿ ಮನುಷ್ಯನ ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಫೋನ್‌ಗಳನ್ನು ತಲೆಯ ಹತ್ತಿರ ಇಟ್ಟುಕೊಳ್ಳುವ ಮಂದಿಗೆ ಇದರ ನೇರ ಪರಿಣಾಮ ಬೀರಲಿದೆ. ಇದಲ್ಲದೆ ಬ್ರೈನ್‌ ಟ್ಯೂಮರ್‌ಗೆ ಕಾರಣವಾಗು ರೇಡಿಯೇಷನ್‌ ಕೂಡ ಇದರಲ್ಲಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ.

5G ಸ್ಮಾರ್ಟ್‌ಫೋನ್‌ನಲ್ಲಿರುವ ರೇಡಿಯೇಷನ್‌ ಎಷ್ಟು?

5G ಸ್ಮಾರ್ಟ್‌ಫೋನ್‌ನಲ್ಲಿರುವ ರೇಡಿಯೇಷನ್‌ ಎಷ್ಟು?

ಎಲೆಕ್ಟ್ರೋಮ್ಯಾಗ್ನೇಟಿಕ್‌ ಸ್ಪೆಕ್ಟ್ರಮ್ ರೇಡಿಯೊ ಫ್ರಿಕ್ವೆನ್ಸಿ ರೇಂಜ್‌ ನಲ್ಲಿ ಸೇಲ್ ಫೋನ್‌ಗಳು ರೇಡಿಯೇಷನ್‌ ಅನ್ನು ಹೊರಸೂಸುತ್ತವೆ. ಅದರಂತೆ 2G, 3G ಮತ್ತು 4G ಸ್ಮಾರ್ಟ್‌ಫೋನ್‌ಗಳು 0.7 ಮತ್ತು 2.7 GHz ನಡುವಿನ ಫ್ರಿಕ್ವೆನ್ಸಿ ರೇಂಜ್‌ ಹೊಂದಿವೆ. ಆದರೆ 5G ಸ್ಮಾರ್ಟ್‌ಫೋನ್‌ಗಳು 80GHz ವರೆಗಿನ ಫ್ರಿಕ್ವೆನ್ಸಿ ರೇಂಜ್‌ ಅನ್ನು
ಬಳಸುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ರೇಡಿಯೇಷನ್‌ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎನ್ನಲಾಗಿದೆ.

5G ಬಳಕೆದಾರರು ಅನುಸರಿಸಬೇಕಾದ ಕ್ರಮಗಳು

5G ಬಳಕೆದಾರರು ಅನುಸರಿಸಬೇಕಾದ ಕ್ರಮಗಳು

* 5G ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ರೇಡಿಯೇಷನ್‌ ಇರುವುದರಿಂದ ಫೋನ್ ಅನ್ನು ಅವಕಾಶವಿದ್ದಾಗ ಮಾತ್ರ ಹತ್ತಿರ ಇಟ್ಟುಕೊಳ್ಳಿ ಬಾಕಿ ಸಮಯದಲ್ಲಿ ನಿಮ್ಮಿಂದ ದೂರವಿಡುವುದು ಸೂಕ್ತ.
* ಬ್ಲೂಟೂತ್ ಮತ್ತು NFC ಹೆಡ್‌ಸೆಟ್‌ಗಳನ್ನು ಬಳಸುವುದು ಸೂಕ್ತವಲ್ಲ. ಬದಲಿಗೆ ವೈರ್ಡ್ ಹೆಡ್‌ಸೆಟ್‌ಗಳನ್ನು ಬಳಸುವುದರಿಂದ ಸೆಲ್‌ಫೋನ್ ವಿಕಿರಣದ ಎಫೆಕ್ಟ್‌ ಅನ್ನು ತಪ್ಪಿಸಬಹುದು.
* ತಲೆಯ ಹತ್ತಿರ ಕಿಟ್ಟು ಮಲಗಬೇಡಿ, ಹೀಗೆ ಮಾಡುವುದರಿಂದ ಹೆಚ್ಚು ರೇಡಿಯೇಶನ್ ಬಿಡುಗಡೆಯಾಗುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಚಾರ್ಜ್

* ಇನ್ನು ಚಾರ್ಜ್ ಮಾಡುವಾಗ ಫೋನ್ ಬಳಸಬೇಡಿ.
* ಆ್ಯಂಟಿ ರೇಡಿಯೇಷನ್‌ ಸ್ಟಿಕ್ಕರ್‌ಗಳನ್ನು ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಇರಿಸುವುದು ಸೂಕ್ತ.
* ಮಕ್ಕಳಿಗೆ ಮೊಬೈಲ್ ಕೊಡಬೇಡಿ. ಕೊಡಬೇಕಾದರೆ ಸಿಮ್ ತೆಗೆದರೆ ಉತ್ತಮ. ಇಲ್ಲದಿದ್ದರೆ, ಅವರು ವಿಕಿರಣದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ.
* ಗರ್ಭಿಣಿಯರು ಆದಷ್ಟು ಕಡಿಮೆ ಸೆಲ್ ಫೋನ್ ಬಳಸಿದರೆ ಉತ್ತಮ. ಇಲ್ಲದಿದ್ದರೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸ್ಮಾರ್ಟ್‌ಫೋನ್‌ಗಳ

ಸ್ಮಾರ್ಟ್‌ಫೋನ್‌ಗಳ ರೇಡಿಯೇಷನ್‌ನಿಂದ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎಂಬುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದಾಗುವ ಅನಾನುಕೂಲತೆಗಳ ಮೇಲೆ ಹಲವು ಅಧ್ಯಯನಗಳು ನಡೆದಿವೆ. ಆದರೂ 5G ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿನ ಆರೋಗ್ಯ ಸಮಸ್ಯೆ ಸೃಷ್ಟಿ ಮಾಡುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವುದು ಸೂಕ್ತ.

Best Mobiles in India

Read more about:
English summary
5G Smartphone Cause radio frequency radiation Increases Cancer Risk?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X