ಐಟಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಈ ಕೌಶಲ್ಯಗಳು

By Suneel
|

ಟೆಕ್‌ ಕ್ಷೇತ್ರ ಇಂದು ತನ್ನ ವೇಗವನ್ನು ದಿನದಿಂದ ದಿನಕ್ಕೆ ಬೆಳವಣಿಗೆಯಲ್ಲಿ ಹೆಚ್ಚು ವೇಗಗೊಳಿಸಿದೆ. ಆದರೂ ಸಹ ಟೆಕ್‌ ಕ್ಷೇತ್ರದಲ್ಲಿ ಕೆಲಸ ಮಾಡಿ ಅಭಿವೃದ್ದಿ ಹೊಂದುವುದು ಸುಲಭದ ಮಾತಲ್ಲ. ಹಾಗೆ ಟೆಕ್‌ ಉದ್ಯಮಗಳಲ್ಲಿ ಉತ್ತಮ ಸ್ಥಾನಗಳಿಸುವುದು ಎಂದರೇ ಸುಮ್ಮನೆ ಅಲ್ಲಾ.

ಓದಿರಿ: ಬೆಂಗಳೂರಿನ ಹುಡುಗನಿಂದ 3D ಸೆಲ್ಫೀ ಆವಿಷ್ಕಾರ

ಟೆಕ್‌ ಕಂಪನಿಗಳಲ್ಲಿ ಕೆಲಸ ಪಡೆದು ಕಂಪನಿಗಳಲ್ಲಿ ಉತ್ತಮ ಸಂಬಳ ಪಡೆಯುತ್ತಾ ಒಳ್ಳೇ ಹಂತ ತಲುಪಲು ಟೆಕ್ ಉದ್ಯಮಗಳಿಗೆ ಅತ್ಯುತ್ತಮ ಕೌಶಲ್ಯಗಳೇ ಬೇಕಾಗಿವೆ. ವಿಶೇಷ ರೀತಿಯ ಸೃಜನಶೀಲ ತಂತ್ರಜ್ಞಾನ ಕೌಶಲ್ಯಗಳನ್ನು ಹೊಂದಿದ್ದಲ್ಲಿ ಸುಲಭವಾಗಿ ಕೆಲಸದ ಶ್ರೇಣಿಕೃತ ಹಂತಗಳಲ್ಲಿ ಉತ್ತಮ ಹಂತಗಳನ್ನು ತಲುಪಬಹುದಾಗಿದೆ. ಹಾಗಾದರೆ ಅಂತಹ ಕೌಶಲ್ಯಗಳು ಯಾವುವು ಎಂದು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಹೇಳುತ್ತಿದೆ.

ಐಟಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗಲು ಈ ಕೌಶಲಗಳು

ಬಳಕೆದಾರರ ಅನುಭವದ ವಿನ್ಯಾಸಗಳು

ಬಳಕೆದಾರರ ಅನುಭವದ ವಿನ್ಯಾಸಗಳು

ಸಂವಹನದ ಭಾಷೆಗಳಲ್ಲಿ HTML, ಜಾವಸ್ಕ್ರಿಪ್ಟ್‌, ಸಿಎಸ್‌ಎಸ್‌ ಪ್ರಮುಖವಾಗಿದ್ದು, ಇವುಗಳು ಇಂಟರ್ನೆಟ್‌ ರೂಲಿಂಗ್ ಪ್ರಪಂಚವನ್ನು ಆಳುತ್ತಿವೆ. ಇಂತಹ ಪ್ರೋಗ್ರಾಮ್‌ ಅಭಿವೃದ್ದಿಗೊಳಿಸುತ್ತಾ ಬಳಕೆದಾರರ ಅನುಭವದ ವಿನ್ಯಾಸಗಳನ್ನು ಅಭಿವೃದ್ದಿಗೊಳಿಸಬೇಕು.

ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ದಿಪಡಿಸುವುದು.

ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ದಿಪಡಿಸುವುದು.

ಟೆಕ್‌ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಉಳಿಯಲು ಇಂದು ಸಿಸ್ಟಮ್‌ ಮತ್ತು ಮೊಬೈಲ್‌ ಎರಡು ಗ್ಯಾಜೆಟ್ಸ್‌ಗಳಲ್ಲಿಯೂ ಕಾರ್ಯನಿರ್ವಹಿಸುವಂತಹ ಉತ್ತಮವಾದ ಗ್ಯಾಹಕ ಸ್ನೇಹಿ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿ ಪಡಿಸುವ ಕೌಶಲ ಹೊಂದಿರಬೇಕು.

 ರೂಬಿ ಆನ್‌ ರೈಲ್ಸ್

ರೂಬಿ ಆನ್‌ ರೈಲ್ಸ್

ರೈಲ್ಸ್‌ ಫ್ರೇಮ್‌ವರ್ಕ್‌ ಸಂಬಂಧಿಸಿದಂತೆ ಡಾಟಾಬೇಸ್‌ ಡ್ರೈವೆನ್‌ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿಗೊಳಿಸುವ ಕೌಶಲಗಳನ್ನು ರೂಢಿಸಿಕೊಳ್ಳುವುದು. ಇವುಗಳು ಹೈ ಕ್ವಾಲಿಟಿ ಮತ್ತು ಆಬ್ಜೆಕ್ಟ್‌ ಓರಿಯೆಂಟೆಡ್‌ ವೆಬ್‌ ಅಪ್ಲಿಕೇಶನ್‌ಗಳಾಗಿರಬೇಕು.

ನೆಟ್ವರ್ಕಿಂಗ್ ಸರ್ಟಿಫಿಕೇಶನ್‌

ನೆಟ್ವರ್ಕಿಂಗ್ ಸರ್ಟಿಫಿಕೇಶನ್‌

ಎಲ್ಲಾ ಉದ್ಯೋಗಿಗಳು ಪ್ರಸ್ತುತ ಟ್ರೆಂಡ್‌ಗಳಿಗೆ ತಕ್ಕಂತೆ ಅನಾಲಿಸಿಸ್‌ಮಾಡುವ ಉದ್ಯೋಗಿಗಳನ್ನೇ ಕೆಲಸಕ್ಕೆ ಹುಡುಕುತ್ತಾರೆ. ಡಾಟಾ ಅನಾಲಿಟಿಕ್ಸ್‌ ಕೌಶಲಗಳನ್ನು ಹೊಂದಿದ್ದಲ್ಲಿ ಟೆಕ್‌ ಕ್ಷೇತ್ರದ ದಿಗ್ಗಜರಾಗಿ ಉಳಿಯಲು ವೇದಿಕೆ ಸಿಗುತ್ತದೆ.

ಡಾಟಾ ಅನಾಲಿಟಿಕ್ಸ್

ಡಾಟಾ ಅನಾಲಿಟಿಕ್ಸ್

ಇಂದು ನೆಟ್‌ವರ್ಕ್‌ ಇಂಜಿನಿಯರ್‌ಗಳು, ಸಿಸ್ಟಮ್‌ ಮೆನೇಜರ್‌ಗಳು, ಕಂಪ್ಯೂಟರ್‌ ಆಧಾರಿತ ವರ್ಕ್‌ಪ್ಲೇಸ್‌ಗಳಲ್ಲಿ ಡಾಟಾ ಅನಾಲಿಟಿಕ್ಸ್‌ ತಿಳಿದಿರುವವರನ್ನು ಹುಡುಕುತ್ತಾರೆ. ನೆಟ್‌ವರ್ಕಿಂಗ್ ಸರ್ಟಿಫಿಕೇಶನ್‌ ಹಾರ್ಡ್‌ವೇರ್‌ ಮತ್ತು ನೆಟ್‌ವರ್ಕಿಂಗ್‌ನಲ್ಲಿ ಉತ್ತಮ ಉದ್ಯೋಗ ನೀಡಬಲ್ಲದು. ಇಂತಹ ಕ್ಷೇತ್ರಗಳಲ್ಲಿ ಈ ಕೌಶಲ ಇರುವವರಿಗೆ ನೆಟ್‌ವರ್ಕ್‌ ಇಂಜಿನಿಯರ್, ಸಿಸ್ಟಮ್‌ ಆಡ್ಮಿನ್‌, ಟೆಕ್ನಿಕಲ್ ಆಪರೇಟರ್‌ ಆಗಿ ಕೆಲಸವನ್ನು ನೇಮಿಸುತ್ತಾರೆ.

ಎಥಿಕಲ್‌ ಹ್ಯಾಕಿಂಗ್‌

ಎಥಿಕಲ್‌ ಹ್ಯಾಕಿಂಗ್‌

ಸಿಸ್ಟಮ್‌ ಸೆಕ್ಯುರಿಟಿ ಮತ್ತು ಹ್ಯಾಕಿಂಗ್ ಸಮಸ್ಯೆಗಳನ್ನು ನಿಭಾಯಿಸುವವರಿಗೆ ಇಂದು ಕಂಪನಿಗಳಲ್ಲಿ ಉತ್ತಮ ಅವಕಾಶಗಳು ಇವೆ. ಅಲ್ಲಿ ಹ್ಯಾಕಿಂಗ್‌ ಎಕ್ಸ್‌ಪರ್ಟ್‌ಗಳು ಲೂಪೋಲ್ಸ್‌ಗಳನ್ನು, ಕಂಪನಿಯ ಬಗ್ಗೆ ಮಾಹಿತಿ ಕದಿಯುವವರನ್ನು ಹುಡುಕಿ ಕಂಪನಿಯ ಮಾಹಿತಿಯನ್ನು ನಿರ್ವಹಣೆ ಮಾಡುವವರನ್ನು ಕಂಪನಿಗಳು ಉತ್ತಮ ಸ್ಥಾನಗಳನ್ನು ನೀಡುತ್ತವೆ.

ಎಗಿಲ್‌ ಮಾಧರಿ

ಎಗಿಲ್‌ ಮಾಧರಿ

ಇಂದು ಕಂಪನಿಗಳು ಸಾಂಪ್ರದಾಯಿಕ ಸಾಫ್ಟ್‌ವೇರ್‌ಗಳನ್ನು ತ್ಯಜಿಸಿ ಆಗಾಗ ಹೊಸ ರೀತಿಯಲ್ಲಿ ಎಗಿಲ್‌ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್‌ ಮಾಡುತ್ತಿರುತ್ತವೆ. ಎಗಿಲ್‌ ಸಾಫ್ಟ್‌ವೇರ್‌ ಅಭಿವೃದ್ದಿ ಇಂದು ವ್ಯಾಪಕ ಮಾನ್ಯತೆ ಪಡೆದಿದೆ. ಇಂದು ಸಾಫ್ಟ್‌ವೇರ್ ಅಭಿವೃದ್ದಿ ಪಡಿಸುವವರಿಗೆ ಹೆಚ್ಚು ಅವಕಾಶಗಳು ಇವೆ.

Best Mobiles in India

English summary
Acquiring specialized technological skills brings many benefits, it opens up opportunities in different fields and it puts you in a position to demand salary above your peers. This is why it is important to keep track of market trends in tech and learn the latest to stay ahead.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X