Subscribe to Gizbot

ಬೆಂಗಳೂರಿನ ಹುಡುಗನಿಂದ 3D ಸೆಲ್ಫೀ ಆವಿಷ್ಕಾರ

Written By:

ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಫೋಟೊ ತೆಗೆಯ ಬೇಕಾದರೆ ಹಲೋ ಈ ಕ್ಯಾಮೆರಾ ನೋಡಿ ಒಮ್ಮೆ ಎಂದು ಹೇಳುತ್ತಿದ್ದರೂ . ಆದರೇ ನಮ್ಮ ಯೂತ್ಸ್‌ ಆ ಎಲ್ಲಾ ಸಂಪ್ರದಾಯಗಳನ್ನು ಬದಲಾಯಿಸಿದ್ದಾರೆ. ಹಾಯ್‌ ಗಾಯ್ಸ್‌ ಎಲ್ಲಾ ಮೊಬೈಲ್‌ ನೋಡಿ ಅಂತಾರೆ, ಲೋ ಹೊಗೋ ನಾವು ನೋಡಿಲ್ದೆ ಇರೋ ಮೊಬೈಲಾ ನಿಂದು ಅಂತ ಯಾರು ಹೇಳಲ್ಲಾ. ಯಾಕಂದ್ರೆ ಸೆಲ್ಫೀ ಫೋಟೊ ತೆಗಯೋದೇ ಹಾಗೆ.

ಓದಿರಿ: ಏರ್‌ಟೆಲ್‌ ಗ್ರಾಹಕರೇ ಯಾವಾಗಲು ಸ್ಮಾರ್ಟ್‌

ಸೆಲ್ಫೀ ಹುಚ್ಚು ಇಂದು ಸ್ಮಾರ್ಟ್‌ಫೋನ್‌ ಇರುವವರಿಗೆಲ್ಲಾ ಇದ್ದೇ ಇದೆ. ಇದುವರೆಗೆ ಸೆಲ್ಫೀ ಬಗ್ಗೆ ಮಾತ್ರ ತಿಳಿದಿದ್ದ ನಿಮಗೆ ಇಂದು 3D ಸೆಲ್ಫೀ ಬಗ್ಗೆ ಪರಿಚಯ ಮಾಡಲಿದ್ದೇವೆ. ಏನಪ್ಪಾ ಇದು 3D ಸೆಲ್ಫೀನಾ!! ಎಲ್ಲಿ ಹೇಗೆ ಎಂದು ಹಲವಾರು ಪ್ರಶ್ನೆಗಳು ನಿಮಗೆ ಕಾಡದೇ ಇರಲಾರೆವು. ಈ 3D ಸೆಲ್ಫೀಗಾಗಿ ನೀವು ಹೆಚ್ಚು ದೂರ ಏನು ಹೋಗಬೇಕಿಲ್ಲಾ. ಜಸ್ಟ್ ಬೆಂಗಳೂರಿಗೆ ಭೇಟಿ ನೀಡಿದ್ರೆ ಆಯಿತು.

ಬೆಂಗಳೂರಿನಲ್ಲಿ ಈಗ ನಿಮ್ಮದೇ ಭಾವಚಿತ್ರವನ್ನು 3D ಸೆಲ್ಫೀ ತೆಗೆದು ಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
CloneMe

CloneMe

CloneMe ಕಂಪನಿಯೂ ಬೆಂಗಳೂರಿನಲ್ಲಿ 3D ಸೆಲ್ಫೀ ತೆಗೆಯುವುದನ್ನು ಪ್ರಾರಂಭಮಾಡಿದೆ. ಈ 3D ಪ್ರಿಂಟೆಡ್‌ ಪ್ರತಿಮೆಯು ನಿಮ್ಮನ್ನು ಸ್ಕ್ಯಾನ್‌ ಮಾಡಿ ನಿಮ್ಮಂತೆಯೇ ಪ್ರತಿಕೃತಿಯನ್ನು ನೀಡುತ್ತದೆ.

3D ಪ್ರಿಂಟೆಡ್‌

3D ಪ್ರಿಂಟೆಡ್‌

3D ಪ್ರಿಂಟೆಡ್ ಮ್ಯಾನುಫ್ಯಾಕ್ಚರಿಂಗ್‌ ಪ್ರಕ್ರಿಯೇ ಆಗಿದ್ದು, ಒಂದು ವಸ್ತುವನ್ನು ಡಿಜಿಟಲ್‌ ಇಮೇಜ್‌ ಆಗಿ ಪರಿವರ್ತಿಸಿ ಅದನ್ನು ಪ್ರತಿಕೃತಿಯಾಗಿ ಮಾರ್ಪಡಿಸುವುದು. ಅಂದರೆ ನಿಮ್ಮನ್ನು ಸ್ಕ್ಯಾನ್‌ ಮಾಡಿ ನಿಮ್ಮ ರೀತಿಯಲ್ಲಿಯೇ ಪ್ರತಿಮೆ ನೀಡುತ್ತದೆ.

CloneMe ಸಂಚಾಲಕರು

CloneMe ಸಂಚಾಲಕರು

ಬೆಂಗಳೂರಿನವರೇ ಆದ ಸಿದ್ಧಾರ್ಥ್ ರಾಥೋಡ್‌ ಇದರ ಸಂಸ್ಥಾಪಕರಾಗಿದ್ದಾರೆ. ಇವರು ಇಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಬೆಂಗಳೂರಿನ ರಾಮಯ್ಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೇ ಇನೋವೇಶನ್‌ ಮತ್ತು ವಾಣಿಜ್ಯೋದ್ಯಮದಲ್ಲಿ UK ಯ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸಹ-ಸಂಸ್ಥಾಪಕರು

ಸಹ-ಸಂಸ್ಥಾಪಕರು

ಡಾ|| ಕಮಲೇಶ್ ಕಥಾರಿ, ಇವರು ಮಾಕ್ಸಿಲೋಫೇಸಿಯಲ್ ಸರ್ಜನ್ ಆಗಿದ್ದು, ಜರ್ಮನಿ, ಯುಕೆ, ಸ್ವೀಡನ್‌ ಮತ್ತು ಸ್ವಿಜರ್‌ಲ್ಯಾಂಡ್‌ಗಳ ಹಲವು ವಿಶ್ವ ವಿದ್ಯಾನಿಲಯಗಳಲ್ಲಿ ಅಂಡರ್‌ಜೋನ್‌ ತರಬೇತಿಯಲ್ಲಿದ್ದಾರೆ. ಒಬ್ಬ ಸರ್ಜ್‌ನ್‌ ಆಗಿ ಇವರು ಡೆಂಟಲ್‌ ಆಪರೇಷನ್‌ಗಾಗಿ 3D ಪ್ರಿಂಟಿಂಗ್ ಬಳಸಿಕೊಳ್ಳುತ್ತಿದ್ದಾರೆ.

ಸ್ಥಾಪನೆ ಮತ್ತು ಸ್ಥಳ

ಸ್ಥಾಪನೆ ಮತ್ತು ಸ್ಥಳ

CloneMe ಕಳೆದ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರಿನ ಮಂತ್ರಿ ಮಹಲ್‌ ಬಳಿ ಸ್ಟೋರ್‌ ಸ್ಥಾಪಿಸಿದೆ. ಹಲವು ಜನರು ಕುತೂಹಲದಿಂದ ಹೆಚ್ಚು ಭೇಟಿ ನೀಡುತ್ತಿದ್ದು, ಕೆಲವರು ತಮ್ಮ ಪ್ರತಿಕೃತಿಗಳನ್ನು 3D ಪ್ರಿಂಟಿಂಗ್‌ ನಿಂದ ಪಡೆಯುತ್ತಿದ್ದಾರೆ.

ಪ್ರೋಸೆಸ್

ಪ್ರೋಸೆಸ್

ಗ್ರಾಹಕರು ತಮ್ಮ ಪ್ರತಿಕೃತಿಗಳನ್ನು ಟರ್ನ್‌ ಟೇಬಲ್‌ ಮೇಲೆ ನಿಂತು ದೇಹ ಸ್ಕ್ಯಾನ್‌ ಮಾಡಿಸಿ ಪಡೆಯಬಹುದಾಗಿದೆ. ಟರ್ನ್‌ಟೇಬಲ್‌ ಫೋಟೊಗ್ರಫಿ ಸ್ಟುಡಿಯೋ ಆಗಿದ್ದು, ಕ್ಯಾಮೆರಾ 2D ಫೋಟೊಗ್ರಾಫ್, ಸ್ಕ್ಯಾನರ್ 3D ಪ್ರಿಂಟೆಡ್‌ ಫಿಗರೈನ್‌ಆಗಿದೆ.ಸ್ಕ್ಯಾನ್‌ ವೇಳೆಯಲ್ಲಿ ಏನಾಗುತ್ತಿದೆ ಎಂಬುದನ್ನು ಇತರರು ನೋಡಬಹುದಾಗಿದೆ. ಇದು ಕೇವಲ 30 ಸೆಕೆಂಡ್‌ಗಳಲ್ಲಿ ಜರುಗುತ್ತದೆ.

ಇಮೇಜ್‌

ಇಮೇಜ್‌

ಸ್ಕ್ಯಾನ್‌ ಮಾಡಿದ ಇಮೇಜ್‌ CloneMe ಗೆ ವರ್ಗಾವಣೆ ಆಗುತ್ತದೆ. ಗಾಂಧಿನಗರದಲ್ಲಿ ಇದರ ಘಟಕವಿದ್ದು, ಅಲ್ಲಿ ಮ್ಯಾನುಫ್ಯಾಕ್ಚರ್‌ ಆಗುತ್ತದೆ. ಈ ಪ್ರಾಡಕ್ಟ್‌ ಗ್ರಾಹಕರಿಗೆ 7 ದಿನಗಳ ಒಳಗಾಗಿ ದೊರೆಯಲಿದೆ. ಇದರ ಬೆಲೆ ಗಾತ್ರದ ಮೇಲೆ ನಿಶ್ಚಯವಾಗುತ್ತದೆ.

ನವೀನತೆಯ ಪ್ರಾಡಕ್ಟ್‌/ ನಿಮ್ಮ ಡಿಜಿಟಲ್‌ ಪ್ರತಿಮೆ ಪಡೆಯಿರಿ

ನವೀನತೆಯ ಪ್ರಾಡಕ್ಟ್‌/ ನಿಮ್ಮ ಡಿಜಿಟಲ್‌ ಪ್ರತಿಮೆ ಪಡೆಯಿರಿ

ಸೆಲ್ಫೀ ನೆಚ್ಚಿನ ಆಸಕ್ತರು ತಮ್ಮ ಪ್ರತಿಕೃತಿಯ ಪ್ರತಿಮೆಯನ್ನು 3D ಪ್ರಿಂಟರ್‌ನಿಂದ ಪಡೆಯಬಹುದಾಗಿದೆ. ಫೋಟೊ ಬದಲಾಗಿ ತಮ್ಮ ತಮ್ಮ ಪ್ರತಿಮೆಗಳನ್ನು ಇಟ್ಟುಕೊಳ್ಳಬಹುದಾಗಿದೆ.

ಉಡುಗೊರೆ

ಉಡುಗೊರೆ

ಹೆಚ್ಚು ಜನರು ಇಂದು ತಮ್ಮ ಸ್ನೇಹಿತರಿಗೆ ಹೊಸ ಬಗೆಯ ನವೀನ ಉಡುಗೊರೆಗಳನ್ನು ಕೊಡಲು ನಿಶ್ಚಯಿಸುತ್ತಾರೆ. ಅಂತಹವರಿಗೆ ಇದು ಸೂಪರ್ ಮ್ಯಾನ್‌ ಕಾಸ್ಟೂಮ್‌ ಆಗಿದೆ.

ಆರ್ಕಿಟೆಕ್ಚರ್

ಆರ್ಕಿಟೆಕ್ಚರ್

3D ಪ್ರಿಟಂರ್ ಉತ್ತಮ ವಾಸ್ತುಶಿಲ್ಪವಾಗಿದ್ದು, ಇದರ ಪ್ರತಿಕೃತಿಗಳು ವಾಸ್ತುಶಿಲ್ಪದ ಬಗ್ಗೆ ವಿವರಿಸಲು ಮತ್ತು ಆಂತರಿಕ ವಿನ್ಯಾಸ ವಿವರಿಸಲು ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The ubiquitous selfies have now moved to the next level of three dimension. Imagine holding in your palm a miniaturised figurine of yourself. That is now possible in Bengaluru, thanks to a startup, CloneMe. The process involves creating a 3D-printed replica from a scanned image of a human being or an object.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot