773 ಮಿಲಿಯನ್ ಇಮೇಲ್ ಐಡಿ ಹ್ಯಾಕ್- ನಿಮ್ಮದೂ ಇರಬಹುದಾ?

|

ಕಳೆದ ಕೆಲವು ವರ್ಷಗಳಲ್ಲಿ ನಡೆದ ದೊಡ್ಡ ಮಟ್ಟದ ಡಾಟಾ ಲೀಕ್ ಇದಾಗಿದೆ. ಸುಮಾರು 773 ಮಿಲಿಯನ್ ಇಮೇಲ್ ಐಡಿ ಮತ್ತು 21 ಮಿಲಿಯನ್ ಪ್ರಮುಖ ಪಾಸ್ ವರ್ಡ್ ಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಟ್ರಾಯ್ ಸೆಕ್ಯುರಿಟಿ ರೀಸರ್ಚರ್ ಆಗಿರುವ ಟ್ರಾಯ್ ಹಂಟ್ ಕಂಡುಹಿಡಿದಿರುವ ಇದು ದೊಡ್ಡ ಡಾಟಾ ಹುಡುಕಾಟವಾಗಿದ್ದು ಯಾರು ಬೇಕಿದ್ದರೂ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಹ್ಯಾಕಿಂಗ್ ಅಟ್ಯಾಕ್ ನಡೆಸುವ ಉದ್ದೇಶದಿಂದ ಇದನ್ನು ಕ್ರಿಮಿನಲ್ ಗಳು ಕೂಡ ಬಳಸಬಹುದು ಎಂಬುದನ್ನ ಟ್ರಾಯ್ ತಿಳಿಸಿದ್ದಾರೆ. ಹ್ಯಾಕಿಂಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿದೆ.

ಹ್ಯಾಕ್ ಆಗಿರುವ ಇಮೇಲ್ ಐಡಿಗಳ ಸಂಖ್ಯೆ: 772,904,991

ಹ್ಯಾಕ್ ಆಗಿರುವ ಇಮೇಲ್ ಐಡಿಗಳ ಸಂಖ್ಯೆ: 772,904,991

ಹ್ಯಾಕ್ ಆಗಿರುವ ಪಾಸ್ ವರ್ಡ್ ಗಳ ಸಂಖ್ಯೆ: 21,222,975

ಹ್ಯಾಕ್ ಆಗಿರುವ ಲಿಸ್ಟ್ ನಲ್ಲಿ ನಿಮ್ಮ ಇಮೇಲ್ ಐಡಿ ಇದೆಯಾ ಎಂಬುದನ್ನು ಹೇಗೆ ಕಂಡುಹಿಡಿಯುವುದು?

ಹ್ಯಾಕ್ ಆಗಿರುವ ಲಿಸ್ಟ್ ನಲ್ಲಿ ನಿಮ್ಮ ಇಮೇಲ್ ಐಡಿ ಇದೆಯಾ ಎಂಬುದನ್ನು ಹೇಗೆ ಕಂಡುಹಿಡಿಯುವುದು?

ಸಂಶೋಧಕರು ಡಾಟಾಬೇಸ್ ನಲ್ಲಿ ವೆಬ್ ಸೈಟ್ ನ್ನು ಸಂಯೋಜಿಸಿದ್ದಾರೆ. ಅದುವೇ ‘Have I been Pwned' (https://haveibeenpwned.com). ಇಲ್ಲಿ ನೀವು ನಿಮ್ಮ ಇಮೇಲ್ ಐಡಿ ಹ್ಯಾಕ್ ಆಗಿದೆಯೇ ಎಂಬುದನ್ನು ಲಿಸ್ಟ್ ನಲ್ಲಿ ಸುಲಭವಾಗಿ ಚೆಕ್ ಮಾಡಬಹುದು. ನಿಮ್ಮ ಇಮೇಲ್ ಐಡಿಯನ್ನು ಡೈಲಾಗ್ ಬಾಕ್ಸ್ ನಲ್ಲಿ ಹಾಕಿ ಚೆಕ್ ಮಾಡಿದರೆ ಸಾಕು.

ನಿಮ್ಮ ಇಮೇಲ್ ಐಡಿ ಹ್ಯಾಕ್ ಆಗಿಲ್ಲದೇ ಇದ್ದಲ್ಲಿ ನಿಮಗೆ ಈ ಮೆಸೇಜ್ ಸಿಗುತ್ತದೆ ಮೆಸೇಜ್: "Oh no - pwned! Pwned on 3 breached sites and found no pastes (subscribe to search sensitive breaches).

ಈ ಮೇಲಿನ ಮೆಸೇಜ್ ಬಂದಲ್ಲಿ ನಿಮ್ಮ ಇಮೇಲ್ ಐಡಿ ಹ್ಯಾಕ್ ಆಗಿಲ್ಲ ಎಂಬುದು ಅರ್ಥವಾಗುತ್ತದೆ. ನಿಮ್ಮ ಇಮೇಲ್ ಭದ್ರವಾಗಿರುವುದರ ಸೂಚನೆ ಇದು.

ನಿಮ್ಮ ಇಮೇಲ್ ಐಡಿ ಹ್ಯಾಕ್ ಆಗಿದ್ದಲ್ಲಿ ಈ ಕೆಳಗಿನ ಮೆಸೇಜ್ ಸಿಗುತ್ತದೆ ಮೆಸೇಜ್: "Good news - no pwnage found! No breached accounts and no pastes (subscribe to search sensitive breaches)." ಇದು ನಿಮಗೆ ನಿಮ್ಮ ಇಮೇಲ್ ಐಡಿಯ ಸೆಕ್ಯುರಿಟಿ ಬ್ರೀಚಸ್ ನ ಹೆಸರು ಮತ್ತು ಸಂಖ್ಯೆಯನ್ನು ಕೂಡ ಉಲ್ಲೇಖಿಸುತ್ತದೆ.

ನಿಮ್ಮ ಪಾಸ್ ವರ್ಡ್ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ?

ನಿಮ್ಮ ಪಾಸ್ ವರ್ಡ್ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ?

ಈ ವೆಬ್ ಸೈಟ್ ಗೆ ತೆರಳಿ: https://haveibeenpwned.com/Passwords. ಪೇಜ್ ನಲ್ಲಿ ನೀಡಲಾಗಿರುವ ಡೈಲಾಗ್ ಬಾಕ್ಸ್ ನಲ್ಲಿ ನಿಮ್ಮ ಪಾಸ್ ವರ್ಡ್ ನ್ನು ಎಂಟರ್ ಮಾಡಿ

ನಿಮ್ಮ ಪಾಸ್ ವರ್ಡ್ ಹ್ಯಾಕ್ ಆಗಿಲ್ಲದೇ ಇದ್ದಲ್ಲಿ ನಿಮಗೆ ಈ ಮೆಸೇಜ್ ಸಿಗುತ್ತದೆ ಮೆಸೇಜ್ : "Good news - no pwnage found!"

ಪಾಸ್ ವರ್ಡ್ ಒಂದೊಮ್ಮೆ ಹ್ಯಾಕ್ ಆಗಿದ್ದಲ್ಲಿ ಈ ಕೆಳಗಿನ ಮೆಸೇಜ್ ಬರುತ್ತದೆ ಮೆಸೇಜ್: "Oh no - pwned! Pwned on 3 breached sites and found no pastes (subscribe to search sensitive breaches)."

ಇಲ್ಲೂ ಕೂಡ ನಿಮ್ಮ ಪಾಸ್ ವರ್ಡ್ ನ ಸೆಕ್ಯುರಿಟಿ ಬ್ರೀಚಸ್ ನ ಹೆಸರು ಮತ್ತು ಸಂಖ್ಯೆಯನ್ನು ತಿಳಿಸಲಾಗುತ್ತದೆ.

ಇಮೇಲ್ ಹ್ಯಾಕ್ ಆಗಿದ್ದಲ್ಲಿ ಏನು ಮಾಡಬೇಕು?

ಇಮೇಲ್ ಹ್ಯಾಕ್ ಆಗಿದ್ದಲ್ಲಿ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಇಮೇಲ್ ಐಡಿ ಹ್ಯಾಕ್ ಆಗಿರುವ ಲಿಸ್ಟ್ ನಲ್ಲಿ ಬಂದಲ್ಲಿ, ನಿಮ್ಮ ಇಮೇಲ್ ಐಡಿಯ ಪಾಸ್ ವರ್ಡ್ ನ್ನು ಕೂಡಲೇ ಬದಲಾಯಿಸಿಕೊಳ್ಳಿ.

ಪಾಸ್ ವರ್ಡ್ ಹ್ಯಾಕ್ ಆಗಿದ್ದಲ್ಲಿ ಏನು ಮಾಡಬೇಕು?

ಪಾಸ್ ವರ್ಡ್ ಹ್ಯಾಕ್ ಆಗಿದ್ದಲ್ಲಿ ಏನು ಮಾಡಬೇಕು?

ಇಲ್ಲೂ ಕೂಡ ನೀವು ಕೂಡಲೇ ನಿಮ್ಮ ಪಾಸ್ ವರ್ಡ್ ನ್ನು ಬದಲಾಯಿಸಿಕೊಳ್ಳಬೇಕು.

ಹ್ಯಾಕ್ ಆಗಿರುವ ಇಮೇಲ್ ಐಡಿ ಮತ್ತು ಪಾಸ್ ವರ್ಡ್ ನ್ನು ಕ್ಲೌಡ್ ಮೆಗಾ ಸೇವೆಯಲ್ಲಿ ಆಯೋಜಿಸಲಾಗಿರುತ್ತದೆ.

140 ಮಿಲಿಯನ್ ಲೀಕ್ ಆಗಿರುವ ಇಮೇಲ್ ಐಡಿಗಳು ಹೊಸತು

140 ಮಿಲಿಯನ್ ಲೀಕ್ ಆಗಿರುವ ಇಮೇಲ್ ಐಡಿಗಳು ಹೊಸತು

ಕಳೆದ ಬಾರಿ ನಡೆದ ಬ್ರೀಚ್ ನಲ್ಲಿ ಕಾಣಿಸದ ಸುಮಾರು 140 ಮಿಲಿಯನ್ ಇಮೇಲ್ ಐಡಿಗಳು ಈ ಬಾರಿಯ ಲೀಕ್ ನಲ್ಲಿ ಗುರುತಿಸಿಕೊಂಡಿವೆ. ಅಂದರೆ ಇವೆಲ್ಲವೂ ಹೊಸ ಇಮೇಲ್ ಐಡಿಗಳಾಗಿವೆ.

ಲೀಕ್ ಆಗಿರುವ ಒಟ್ಟು ಇಮೇಲ್ ಐಡಿ ಮತ್ತು ಪಾಸ್ ವರ್ಡ್ ಗಳ ಸಂಗ್ರಹವು 12,000 ಸಪರೇಟ್ ಫೈಲ್ ಮತ್ತು 87ಜಿಬಿ ಪ್ಲಸ್ ಡಾಟಾವನ್ನು ಒಳಗೊಂಡಿದೆ.

Best Mobiles in India

English summary
773 million email IDs hacked: How to check and what to do if yours was one of them

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X