ಕೂಲ್‌ ಕೂಲ್‌..! ಬರ್ತಿದೆ ಫೋನ್‌ಗಿಂತಲೂ ಚಿಕ್ಕದಾದ ಎಸಿ..!

By Gizbot Bureau
|

ಜಾಗತಿಕವಾಗಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಬೇಸಿಗೆ ಬಂತೆಂದರೆ ಸೆಕೆ, ಸೆಕೆ ಎಂದು ಗೊಣಗುತ್ತಿರುತ್ತೇವೆ. ಇಂತಹ ಸಂದರ್ಭದಲ್ಲಿ ಎಲ್ಲ ಸಮಯದಲ್ಲಿಯೂ ನಮ್ಮ ಜೊತೆ AC ಇದ್ದರೆ ಎಷ್ಟು ಚಂದ ಅಲ್ವಾ ಅಂತ ಕನಸು ಕಂಡಿರುತ್ತೇವೆ. ಹೌದು, ನಿಮ್ಮ ಕನಸು ನನಸಾಗೋ ಸಮಯ ಬಂದಿದೆ. ಆ ದೇವರು ನಿಮ್ಮ ಕನಸಿಗೆ ತಥಾಸ್ತು ಎಂದಿರುವಂತೆ ಕಾಣುತ್ತಿದೆ. ಸೌಥ್ ಚೀನಾ ಮಾರ್ನಿಂಗ್‌ ಪೋಸ್ಟ್‌ ಒಂದು ವಿಡಿಯೋ ಪೋಸ್ಟ್‌ ಮಾಡಿದ್ದು, ಆ ವಿಡಿಯೋದಲ್ಲಿ ಸೋನಿ ಧರಿಸಬಹುದಾದ ACಯನ್ನು ಅಭಿವೃದ್ಧಿಪಡಿಸಿದೆ. ಶೀಘ್ರದಲ್ಲಿಯೇ ಕ್ರೌಡ್‌ಫಂಡಿಂಗ್‌ ಯೋಜನೆಯ ಮೂಲಕ ಮಾರುಕಟ್ಟೆಗೆ ಕಾಲಿಡಲಿದೆ.

ರಿಯಾನ್‌ ಪಾಕೆಟ್‌

ರಿಯಾನ್‌ ಪಾಕೆಟ್‌

ರಿಯಾನ್ ಪಾಕೆಟ್ ಎಂದು ಕರೆಯಲ್ಪಡುವ ಇದು ಮೊಬೈಲ್‌ಗಿಂತಲೂ ಚಿಕ್ಕದಾದ ACಯಾಗಿದೆ, ಹಿಂಭಾಗದಲ್ಲಿರುವ ಫಲಕದಿಂದ ಉಷ್ಣಾಂಶ ಹಾಗೂ ತಂಪನ್ನು ಬಿಡುಗಡೆ ಮಾಡುತ್ತದೆ. ಈ ಸಾಧನವನ್ನು ವಿಶೇಷ ಅಂಡರ್‌ಶರ್ಟ್‌ನೊಂದಿಗೆ ಬಳಸಬಹುದು, ಅಂಡರ್‌ಶರ್ಟ್‌ನ್ನು ಸಾಧನದೊಂದಿಗೆ ಮಾರಾಟ ಮಾಡಲಾಗುತ್ತದೆ.

ಸ್ಮಾರ್ಟ್‌ಫೋನ್‌ ಕಂಟ್ರೋಲ್‌

ಸ್ಮಾರ್ಟ್‌ಫೋನ್‌ ಕಂಟ್ರೋಲ್‌

ಈ ಎಸಿಯಲ್ಲಿ ತಾಪಮಾನವನ್ನು ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದು. ಇದಷ್ಟೇ ಅಲ್ಲದೇ ಹೆಚ್ಚು ತಣ್ಣನೆ ಅನುಭವ ಸಿಕ್ಕಿಲ್ಲ ಎಂದರೆ, ಸ್ವಯಂಚಾಲಿತವಾಗಿ ಸೂಕ್ತ ತಾಪಮಾನ ಹೊಂದಿಸುವ ಯಾಂತ್ರಿಕ ವ್ಯವಸ್ಥೆಯನ್ನು ಸಹ ಹೊಂದಿದೆ. ಎಸಿಯಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನವು ಕಾರ್ ಮತ್ತು ವೈನ್ ಕೂಲರ್‌ಗಳಲ್ಲಿ ಬಳಸಲಾಗುವ ಪೆಲ್ಟಿಯರ್ ಅಂಶವನ್ನು ಆಧರಿಸಿದೆ ಎಂದು ವೀಡಿಯೊ ಹೇಳುತ್ತದೆ.

90 ನಿಮಿಷ ಕಾರ್ಯ

90 ನಿಮಿಷ ಕಾರ್ಯ

ಬ್ಯಾಟರಿ ಚಾಲಿತ ಈ ಎಸಿ ಎರಡು ಗಂಟೆಗಳ ಚಾರ್ಜಿಂಗ್ ನಂತರ 90 ನಿಮಿಷ ಕಾರ್ಯನಿರ್ವಹಿಸುತ್ತದೆ. ಕ್ರೌಡ್‌ಫಂಡಿಂಗ್ ಯೋಜನೆ ಮೂಲಕ ಕೇವಲ ಎರಡು ದಿನಗಳಲ್ಲಿ 2 ಲಕ್ಷ ಡಾಲರ್‌ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಈ ಎಸಿ ಹೆಚ್ಚು ದುಬಾರಿಯಾಗಿರುತ್ತೆ ಅಂತಾ ನೀವು ಅಂದುಕೊಂಡಿದ್ದರೆ ಇದರ ಬೆಲೆ ನಿಮಗೆ ಅಚ್ಚರಿ ನೀಡುತ್ತದೆ. ಹೌದು ಧರಿಸಬಹುದಾದ ಎಸಿಯ ಬೆಲೆ 130 ಡಾಲರ್‌ ಆಗಿದ್ದು, ಭಾರತೀಯ ರೂಪಾಯಿಗೆ ಹೋಲಿಸಿದರೆ ಸುಮಾರು 9,200 ರೂ. ಆಗುತ್ತದೆ. ಸದ್ಯಕ್ಕೆ ಇದು ಜಪಾನ್‌ನಲ್ಲಿ ಮಾತ್ರ ಮಾರಾಟವಾಗಲಿದೆ.

ಸೆನ್ಶೆಷನ್‌ ಸೃಷ್ಟಿ

ಸೆನ್ಶೆಷನ್‌ ಸೃಷ್ಟಿ

ವಿಡಿಯೋ ಮೂಲಕ ಚೀನಾದಲ್ಲಿ ಈ ಎಸಿ ದೊಡ್ಡ ಕ್ರೇಜ್‌ ಸೃಷ್ಟಿಸಿದೆ. ಆದರೆ, ಹೆಚ್ಚಿನ ಕ್ರೌಡ್‌ಫಂಡಿಂಗ್ ಯೋಜನೆಗಳು ವಾಸ್ತವಕ್ಕೆ ಕಾರ್ಯರೂಪಕ್ಕೆ ಬರದೇ, ಕೇವಲ ಪರಿಕಲ್ಪನೆಗಳಾಗಿ ಕೊನೆಗೊಳ್ಳುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು. ಏನೇ ಆಗಲಿ, ಆದಷ್ಟು ಬೇಗ ಈ ಉತ್ಪನ್ನ ಮುಖ್ಯವಾಹಿನಿಗೆ ಬರಲಿ ಎಂಬುದೇ ಬಹಳಷ್ಟು ಜನರ ಆಶಯ.


Best Mobiles in India

English summary
A wearable " Sony AC" Likely To Hit The Market

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X