ACT ಫೈಬರ್ ನೆಟ್ ನಿಂದ ಆಕ್ಟ್ ಸ್ಟ್ರೀಮ್ ಟಿವಿ 4ಕೆ ಬಿಡುಗಡೆ

  By Gizbot Bureau
  |

  ಆಕ್ಟ್ ಫೈಬರ್ ನೆಟ್ ಕೆಲವು ಪ್ರಮುಖ ಪ್ರಕಟಣೆಯನ್ನು ಮಾಡುತ್ತಿದೆ. ಕೆಲವೇ ತಿಂಗಳ ಹಿಂದೆ ಕಂಪೆನಿಯು ತನ್ನ ರಿಬ್ರ್ಯಾಂಡ್ ಆಗಿರುವ ಲೋಗೋವನ್ನು ಮತ್ತು ಭವಿಷ್ಯದ ಕೆಲವು ಪ್ಲಾನ್ ಗಳ ಬಗ್ಗೆ ಪ್ರಕಟಣೆಯನ್ನು ನೀಡಿತ್ತು. ಆದರೆ ಇದೀಗ ಆಕ್ಟ್ ಫೈಬರ್ ನೆಟ್ ಆಕ್ಟ್ ಸ್ಟ್ರೀಮ್ ಟಿವಿ 4ಕೆಯೊಂದಿಗೆ ಬಂದಿದೆ.

  ACT ಫೈಬರ್ ನೆಟ್ ನಿಂದ ಆಕ್ಟ್ ಸ್ಟ್ರೀಮ್ ಟಿವಿ 4ಕೆ ಬಿಡುಗಡೆ

  ಹಲವಾರು ಕಟೆಂಟ್ ಪ್ರೊವೈಡರ್ ಗಳ ಜೊತೆಗೆ ಕೈಜೋಡಿಸಿರುವ ಕಂಪೆನಿ ಕೆಲವು ಗೇಮಿಂಗ್ ಗಳ ಮೇಲೂ ಕೂಡ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಬೆಂಗಳೂರಿನಲ್ಲಿ ನಡೆದ ಪ್ರಮುಖ ಕಾರ್ಯಕ್ರಮವೊಂದರಲ್ಲಿ ಆಕ್ಟ ಫೈಬರ್ ನೆಟ್ ಆಕ್ಟ್ ಸ್ಟ್ರೀಮ್ ಟಿವಿ 4ಕೆ ಯನ್ನು ಪ್ರಕಟಿಸಿತು.

  ಆಕ್ಟ್ ವಿಷನ್ ಮೂಲಕ ಪ್ರಮುಖ ಇನ್-ಹೋಮ್ ಎಂಟರ್ಟೈನ್ ಮೆಂಟ್ ಕಂಪೆನಿಯಾಗಿ ಇದು ಹೊರಹೊಮ್ಮಲಿದೆ. ಹೊಸ ಆಕ್ಟ್ ಸ್ಟ್ರೀಮ್ ಟಿವಿ 4ಕೆ ಕೆಲವು ಪ್ರಮುಖ ಬೇಡಿಕೆ ಇರುವ ಆನ್ ಸ್ಕ್ರೀನ್ ಸೇವೆಗಳನ್ನು ಒಟ್ಟುಗೂಡಿಸುವ ಉದ್ದೇಶ ಹೊಂದಿದೆ ಉದಾಹರಣೆಗೆ ಲೈವ್ ಟಿವಿ, ಆನ್-ಡಿಮಾಂಡ್ ಕಟೆಂಟ್ ಸರ್ವೀಸ್ ಮತ್ತು ಇತರೆ ಕೆಲವು ಆಪ್ಸ್ ಗಳು ಇದರಲ್ಲಿ ಸೇರಿರುತ್ತವೆ.

  ಕಳೆದ ಐದು ವರ್ಷದಲ್ಲಿ ಆನ್-ಡಿಮಾಂಡ್ ಕಟೆಂಟ್ ಗಳ ಪ್ರಸಿದ್ಧತೆಯು 10 ಪಟ್ಟು ಅಧಿಕಗೊಂಡಿದೆ. ಆಕ್ಟರ್ ಫೈಬರ್ ನೆಟ್ ಹೇಳುವ ಪ್ರಕಾರ ಗ್ರಾಹಕರು ಸ್ಟ್ರೀಮಿಂಗ್ ಸೇವೆ ಮತ್ತು ಡಿಟಿಹೆಚ್ ಕನೆಕ್ಷನ್ ಎರಡನ್ನೂ ಒಂದೇ ಪ್ರೊಡಕ್ಟ್ ನಲ್ಲಿ ಮನೆಯಲ್ಲಿ ಕಾಣುವುದಕ್ಕೆ ಇಚ್ಛಿಸುತ್ತಾರೆ.

  ಪ್ರತಿಯೊಂದು ಟಾಸ್ಕ್ ಗೂ ಕೂಡ ವಿಭಿನ್ನ ಸೇವೆಯನ್ನು ಪಡೆಯುವ ಬದಲಾಗಿ ಆಕ್ಟ್ ಫೈಬರ್ ನೆಟ್ ನ ಸ್ಟ್ರೀಮ್ ಟಿವಿ 4ಕೆ ಬಳಕೆದಾರರಿಗೆ ತಾವು ಬಯಸುವ ಸೇವೆಯನ್ನು ಸುಲಭವಾಗಿ ಒದಗಿಸುತ್ತದೆ. ಡಿವೈಸ್ ಈಗಾಗಲೇ ತಯಾರಾಗಿದ್ದು 4ಕೆ ಸ್ಟ್ರೀಮಿಂಗ್ ಗೆ ಅನುಕೂಲಕರವಾಗಿದೆ. ಭಾರತದಲ್ಲಿ ಅಮೇಜಾನ್ ಫೈಯರ್ ಟಿವಿ ಸ್ಟಿಕ್ 4ಕೆ ಜೊತೆಗೆ ಈ ಡಿವೈಸ್ ಗಳು ಸ್ಪರ್ಧೆಗೆ ಇಳಿಯಲಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಆಕ್ಟ್ ಸ್ಟ್ರೀಮ್ ಟಿವಿ 4ಕೆ ಫೀಚರ್ ಗಳು:

  ಗ್ರಾಹಕರಿಗೆ ಸ್ಟ್ರೀಮ್ ಟಿವಿ 4ಕೆ ಹೋಮ್-ಹಬ್ ನ್ನು ನೀಡುತ್ತದೆ ಮತ್ತು ತಮ್ಮೆಲ್ಲ ಇಷ್ಟದ ಕಂಟೆಂಟ್ ಗಳನ್ನು ಪಡೆಯುವುದಕ್ಕೆ ನೆರವಾಗುತ್ತವೆ.ನೆಟ್ ಫ್ಲಿಕ್ಸ್, ಝೀ5,ಸೋನಿ ಲೈವ್, ಯುಟ್ಯೂಬ್ ಇತ್ಯಾದಿಗಳನ್ನು ಇದು ಒಳಗೊಂಡಿರುತ್ತದೆ. ಜಾಯ್ ಸ್ಟಿಕ್ಸ್, ಬ್ಲೂಟೂತ್ ಮೌಸ್, ಕೀಬೋರ್ಡ್ ಮತ್ತು ಇತ್ಯಾದಿಗಳನ್ನು ಕೂಡ ಗೇಮಿಂಗ್ ಉದ್ದೇಶದಿಂದ ಹೊಂದಿರುತ್ತದೆ.

  ಆಕ್ಟ್ ಫೈಬರ್ ನೆಟ್

  ಆಕ್ಟ್ ಫೈಬರ್ ನೆಟ್ ನ ಹೊಸ ಫ್ಲಾಟ್ ಫಾರ್ಮ್ ಪ್ಲೇ ಸ್ಟೋರ್ ಗೆ ಕೂಡ ಆಕ್ಸಿಸ್ ನ್ನು ನೀಡುತ್ತದೆ. 3000 ಕ್ಕೂ ಅಧಿಕ ಆಪ್ಸ್ ಗಳನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಚಾನಲ್ ಗಳು ಮನೆಯ ಲೈವ್ ಟಿವಿ ಹೋಮ್ ಹಬ್ ಸೆಕ್ಷನ್ ನಲ್ಲಿ ಡಿಸ್ಪ್ಲೇ ಆಗುತ್ತದೆ. ತಪ್ಪಿ ಹೋಗಿರುವ ಶೋಗಳನ್ನು 24 ಘಂಟೆಗಳ ಅವಧಿಯಲ್ಲಿ ವೀಕ್ಷಿಸುವುದಕ್ಕೆ ಅವಕಾಶವಿರುತ್ತದೆ.ಗೂಗಲ್ ಅಸಿಸ್ಟೆಂಟ್ ಗೂ ಕೂಡ ಈ ಫ್ಲಾಟ್ ಫಾರ್ಮ್ ಅನುವು ಮಾಡಿಕೊಡುತ್ತದೆ.

  ಬ್ಲೂಟೂತ್ ಬೆಂಬಲವನ್ನು ಆಕ್ಟ್ ಫೈಬರ್ ನೆಟ್ ನ ಈ ಹೊಸ ಫ್ಲಾಟ್ ಫಾರ್ಮ್ ನಲ್ಲಿ ಪಡೆಯಬಹುದು. ರಿಮೋಟ್ ನಲ್ಲಿ ನಾಲ್ಕು ಪ್ರಮುಖ ಬಟನ್ ಗಳಿದ್ದು ಕ್ವಿಕ್ ಆಕ್ಸಿಸ್ ಗೆ ನೆರವು ನೀಡುತ್ತದೆ.

  ಆಕ್ಟ್ ಸ್ಟ್ರೀಮ್ ಟಿವಿ 4ಕೆ ಬೆಲೆ

  ಸ್ಟ್ರೀಮ್ ಟಿವಿ 4ಕೆ ಬೆಲೆ 4499 ರುಪಾಯಿಗಳು ಮತ್ತು ಪರಿಚಯಾರ್ಥವಾಗಿ ಕಂಪೆನಿಯು 5000 ಆಯ್ದ ಗ್ರಾಹಕರಿಗೆ ವಿಶೇಷ ಬೆನಿಫಿಟ್ ಗಳನ್ನು ನೀಡುತ್ತದೆ. ಮೇ 2019 ರ ನಂತರ ಆಕ್ಟ್ ಫೈಬರ್ ನೆಟ್ ನ ಸ್ಟ್ರೀಮ್ ಟಿವಿ 4ಕೆ ಬ್ರಾಡ್ ಬ್ಯಾಂಡ್ ಪ್ಲಾನ್ ಗಳನ್ನು ಕಮರ್ಷಿಯಲ್ ಆಗಿ ಬಿಡುಗಡೆಗೊಳಿಸಲಿದೆ. ಅಲ್ಲಿಯವರೆಗೂ ಆಕ್ಟ್ ಫೈಬರ್ ನೆಟ್ ನ ಗ್ರಾಹಕರು ಪ್ರೀಮಿಯಂ ಕಟೆಂಟ್ ನ್ನು ಸದ್ಯ ಲಭ್ಯವಿರುವ ಒಟಿಟಿ ಸ್ಟ್ರೀಮಿಂಗ್ ಪಾರ್ಟ್ನರ್ ಗಳ ಜೊತೆಗೆ ಚಂದಾದಾರಿಕೆಯನ್ನು ಪಡೆಯಬಹುದು ಮತ್ತು ಮಾಸಿಕ ಬಿಲ್ ನಂತೆಯೇ ತಮ್ಮ ಬಿಲ್ ನ್ನು ಪಾವತಿ ಮಾಡಬಹುದು.

  ನೆಟ್ ಫ್ಲಿಕ್ಸ್

  ಇತ್ತೀಚೆಗೆ ನೆಟ್ ಫ್ಲಿಕ್ಸ್ ಜೊತೆಗೆ ಆಕ್ಟ್ ಫೈಬರ್ ನೆಟ್ ಕೈಜೋಡಿಸಿದೆ ಮತ್ತು ಆಕ್ಟ್ ಮೂಲಕ ಯಾರು ನೆಟ್ ಫ್ಲಿಕ್ಸ್ ಗೆ ಚಂದಾದಾರಿಕೆಯನ್ನು ಪಡೆಯುತ್ತಾರೋ ಅವರಿಗೆ 350 ರುಪಾಯಿಯ ರಿಯಾಯಿತಿಯನ್ನು ಕೂಡ ಆಕ್ಟ್ ಫೈಬರ್ ನೆಟ್ ಒದಗಿಸುತ್ತದೆ.

  ಕಳೆದ ಕೆಲವೇ ತಿಂಗಳ ಮುಂಚೆ ಗೇಮರ್ ಕನೆಕ್ಟ್-ಭಾರತದ ಪ್ರಮುಖ ಪ್ರೀಮಿಯಂ ಗೇಮಿಂಗ್ ಶೋಕೇಸ್ ಫ್ಲಾಟ್ ಫಾರ್ಮ್ ಜೊತೆಗೆ ಕೂಡ ಆಕ್ಟ್ ಫೈಬರ್ ನೆಟ್ ಸಹಭಾಗಿತ್ವ ಪಡೆದಿದೆ. ಸೋನಿ ಲೈವ್,ಝೀ5,ನೆಟ್ ಫ್ಲಿಕ್ಸ್ ಮತ್ತು ಇತ್ಯಾದಿಗಳ ಜೊತೆಗೂ ಕೂಡ ಕಂಪೆನಿ ಸಹಭಾಗಿತ್ವ ಹೊಂದಿದೆ. ಜೈಪುರ, ಲಕ್ನೋದಲ್ಲಿ ಕಳೆದ ಎರಡು ತಿಂಗಳ ಮುನ್ನ ಕಂಪೆನಿಯು ಸೇವೆಯನ್ನು ಪ್ರಾರಂಭಿಸಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  ACT Stream TV 4K Launched by ACT Fibernet, Combines On-Demand Streaming and Live TV into Single Device

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more