ಪ್ರಾದೇಶಿಕ ಭಾಷೆಗಳಲ್ಲಿ ಏರ್ ಟೆಲ್ ಡಿಜಿಟಲ್ ಟಿವಿಯ ಟಾಪ್ ಅಪ್ ಪ್ಲಾನ್ ಗಳು ರೂಪಾಯಿ 7 ರಿಂದ ಆರಂಭ

By Gizbot Bureau
|

ಕೇಬಲ್ ಟಿವಿ ಮತ್ತು ಡಿಟಿಹೆಚ್ ಚಂದಾದಾರರು ಸಾಕಷ್ಟು ಸಮಸ್ಯೆಗಳು ತಮ್ಮ ಚಂದಾದಾರಿಕೆಯ ಬಿಲ್ ವಿಚಾರದಲ್ಲಿ ಎದುರಿಸುತ್ತಿದ್ದಾರೆ. ಟ್ರಾಯ್ ಪರಿಚಯಿಸಿರುವ ಹೊಸ ತಾರಿಫ್ ಪ್ಲಾನ್ ಅವರ ಮಾಸಿಕ ತಿಂಗಳ ಬಿಲ್ ನ್ನು ಅಧಿಕಗೊಳಿಸುತ್ತಿದೆ ಎಂದು ದೂರುತ್ತಿದ್ದಾರೆ. ಇನ್ನು ಕೆಲವು ಈ ಬದಲಾವಣೆ ಅಂತಹ ದೊಡ್ಡ ವ್ಯತ್ಯಾಸವನ್ನೇನು ಸೃಷ್ಟಿಸಿಲ್ಲ. ಸಣ್ಣ ಮಟ್ಟದ ಉಳಿತಾಯಕ್ಕೆ ಅಷ್ಟೇ ಸಹಕಾರಿ ಎಂದಿದ್ದಾರೆ.

ಪ್ರಾದೇಶಿಕ ಭಾಷೆಗಳಲ್ಲಿ ಏರ್ ಟೆಲ್ ಡಿಜಿಟಲ್ ಟಿವಿಯ ಟಾಪ್ ಅಪ್ ಪ್ಲಾನ್ ಗಳು ರೂಪಾಯಿ

ಪ್ರತಿಯೊಬ್ಬ ಚಂದಾದಾರರು ಕೂಡ ತಮ್ಮ ಟಿವಿ ಬಿಲ್ ನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಬಂಡಲ್ ಆಗಿರುವ ಆಡ್-ಆನ್ ಗಳು, ಸರ್ವೀಸ್ ಪ್ರೊವೈಡರ್ ಗಳಿಂದ ಪರಿಚಯಿಸಲಾಗಿರುವ ಕೋಂಬೋ ಪ್ಯಾಕ್ ಗಳನ್ನು ಪಡೆದು ಸಾಧಿಸಿಕೊಳ್ಳುವುದಕ್ಕೆ ಅವಕಾಶವಿದೆ.ಪ್ರತಿಯೊಂದು ಚಾನಲ್ ಗಳ ಆಯ್ಕೆಯನ್ನು ಕೋಂಬೊ ಪ್ಲಾನ್ ಗಳಗೆ ಹೋಲಿಸಿದರೆ ಸಣ್ಣ ಮೊತ್ತದ ರಿಯಾಯಿತಿ ಸಿಗುತ್ತದೆ ಎಂದು ಹೇಳಲಾಗುತ್ತಿದೆ.

ಹಲವು ಸೇವಾ ಪ್ರೊವೈಡರ್ ಗಳು ಈಗಾಗಲೇ ಸಾಕಷ್ಟು ಕೊಂಬೋ ಪ್ಲಾನ್ ಗಳನ್ನು ಬಿಡುಗಡೆಗೊಳಿಸಿದ್ದಾರೆ. ಇದೀಗ ಏರ್ ಟೆಲ್ ಡಿಜಿಟಲ್ ಟಿವಿ ಕೆಲವು ಪ್ರಾದೇಶಿಕ ಆಡ್-ಆನ್ ಪ್ಯಾಕ್ ಗಳನ್ನು ಕೇವಲ ಆರಂಭಿಕ ಬೆಲೆ 7 ರುಪಾಯಿಗೆ ಪ್ರಾರಂಭಿಸಿದೆ.

ಇದು ಪ್ರಸಿದ್ಧ ಪ್ರಾದೇಶಿಕ ಚಾನಲ್ ಗಳ ಒಂದು ಪಟ್ಟಿಯಾಗಿದ್ದು ಒಂದೇ ಪ್ಯಾಕ್ ನಲ್ಲಿ ಎಲ್ಲಾ ಚಾನಲ್ ಗಳು ಸಿಗುತ್ತದೆ. ಇದರ ಜೊತೆಗೆ ಸಣ್ಣ ಮಟ್ಟದಲ್ಲಿ ರಿಯಾಯಿತಿ ಬೆಲೆಯನ್ನು ಕೂಡ ಏರ್ ಟೆಲ್ ನೀಡುತ್ತಿದೆ. ಮೈ ಏರ್ ಟೆಲ್ ಆಪ್ ಅಥವಾ ಕಂಪೆನಿಯ ವೆಬ್ ಸೈಟ್ ನಲ್ಲಿ ಯಾವುದೇ ತೊಂದರೆ ಇಲ್ಲದೆ ಈ ಆಡ್ ಆನ್ ಪ್ಯಾಕ್ ಗಳನ್ನು ಏರ್ ಟೆಲ್ ಡಿಜಿಟಲ್ ಟಿವಿಗಾಗಿ ಆಕ್ಟಿವೇಟ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.

ಏರ್ ಟೆಲ್ ಡಿಜಿಟಲ್ ಟಿವಿ ಪ್ರಾದೇಶಿಕ ಟಾಪ್-ಅಪ್ಸ್ : ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು

ಏರ್ ಟೆಲ್ ಡಿಜಿಟಲ್ ಟಿವಿ ಪ್ರಾದೇಶಿಕ ಟಾಪ್-ಅಪ್ಸ್ : ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು

ಬೇರೆಬೇರೆ ಭಾಷೆಗಳಿಗಾಗಿ ಏರ್ ಟೆಲ್ ಡಿಜಿಟಲ್ ಟಿವಿ 13 ಪ್ರಾದೇಶಿಕ ಟಾಪ್-ಅಪ್ ಪ್ಲಾನ್ ಗಳನ್ನು ಪರಿಚಯಿಸಿದೆ.

ಭಾಷೆ ಮತ್ತು ಪ್ಯಾಕ್ - ತಿಂಗಳ ಹಣ

ಬೆಂಗಾಳಿ ಪ್ರಾದೇಶಿಕ - 67 ರುಪಾಯಿಗಳು

ಮಿನಿ ಬೆಂಗಾಳಿ ಪ್ರಾದೇಶಿಕ - 42 ರುಪಾಯಿಗಳು

ಗುಜರಾತಿ ಪ್ರಾದೇಶಿಕ - 7 ರುಪಾಯಿ (ಏರ್ ಟೆಲ್ ನಲ್ಲಿ ಕೆಲವೇ ಕೆಲವು ಗುಜರಾತಿ ಚಾನಲ್ ಗಳಿದೆ)

ಕನ್ನಡ ಪ್ರಾದೇಶಿಕ - 114 ರುಪಾಯಿ

ಮಿನಿ ಕನ್ನಡ ಪ್ರಾದೇಶಿಕ - 86 ರುಪಾಯಿ

ಮಳಯಾಳಂ ಪ್ರಾದೇಶಿಕ - 84 ರುಪಾಯಿಗಳು

ಮಿನಿ ಮಳಯಾಳಂ ಪ್ರಾದೇಶಿಕ - 54 ರುಪಾಯಿಗಳು

ಮರಾಠಿ ಪ್ರಾದೇಶಿಕ - 53 ರುಪಾಯಿಗಳು

ಮಿನಿ ಮರಾಠಿ ಪ್ರಾದೇಶಿಕ - 45 ರುಪಾಯಿಗಳು

ಇದರ ಜೊತೆಗೆ ಏರ್ ಟೆಲ್ ಡಿಜಿಟಲ್ ಟಿವಿ ಪ್ರಾದೇಶಿಕ ಟಾಪ್ ಪ್ಲಾನ್ ಗಳನ್ನು ತಮಿಳು ಮತ್ತು ತೆಲುಗು ನೋಡುಗರಿಗಾಗಿ ಬಿಡುಗಡೆಗೊಳಿಸಿದೆ. ತಮಿಳು ಪ್ರಾದೇಶಿಕ ಟಾಪ್ ಅಪ್ ನ ಬೆಲೆ 113 ರುಪಾಯಿಗಳು, ಮಿನಿ ತಮಿಳು ಪ್ರಾದೇಶಿಕ ಟಾಪ್ ಅಪ್ ನ ಬೆಲೆ 71 ರುಪಾಯಿಗಳು. ಕೊನೆಯ ದಾಗಿ ತೆಲುಗು ನೋಡುಗರಿಗಾಗಿ ತೆಲುಗು ಪ್ರಾದೇಶಿಕ ಮತ್ತು ತೆಲುಗು ಮಿನಿ ಪ್ರಾದೇಶಿಕ ಪ್ಯಾಕ್ ಗಳ ಬೆಲೆ ಕ್ರಮವಾಗಿ ರುಪಾಯಿ 135 ಮತ್ತು 88 ರುಪಾಯಿಗಳಾಗಿರುತ್ತದೆ.

ಏರ್ ಟೆಲ್ ಡಿಜಿಟಲ್ ಟಿವಿ

ಏರ್ ಟೆಲ್ ಡಿಜಿಟಲ್ ಟಿವಿ

ಏರ್ ಟೆಲ್ ಡಿಜಿಟಲ್ ಟಿವಿ ತಿಳಿಸಿರುವಂತೆ ಆಡ್-ಆನ್ ಪ್ಯಾಕ್ ನಲ್ಲಿ ಯಾವೆಲ್ಲ ಚಾನಲ್ ಗಳು ಬರಲಿದೆ ಎಂಬ ಲಿಸ್ಟ್ ಕೂಡ ತಿಳಿಸುತ್ತದೆ. ಉದಾಹರಣೆಗೆ ಏರ್ ಟೆಲ್ ಮಿನಿ ತಮಿಳಿ ರೀಜನಲ್ ಪ್ಯಾಕ್ 71 ರುಪಾಯಿ ಯಲ್ಲಿ ಸನ್ ಟಿವಿ, ಚುಟ್ಟಿ ಟಿವಿ, ಸನ್ ನ್ಯೂಸ್, ಸ್ಟಾರ್ ವಿಜಯ, ಝೀ ತಮಿಳಿ, ರಾಜ್ ಮ್ಯೂಸಿಕ್ ತಮಿಳ್, ಜಯಾ ಪ್ಲಸ್, ಆದಿತ್ಯಾ ಮತ್ತು ನ್ಯೂಸ್ 18 ತಮಿಳು ನಾಡು ಚಾನಲ್ ಗಳು ಒಂದು ತಿಂಗಳ ಅವಧಿಗೆ ಬರಲಿದೆ.

ಸುಮಾರು 15 ಮಿಲಿಯನ್ ಚಂದಾದಾರರಿಗಾಗಿ ಡಿಟಿಹೆಚ್ ಆಪರೇಟರ್ ಗಳು ಹಿಂದಿ, ಇಂಗ್ಲೀಷ್ ಸ್ಪೋರ್ಟ್ಸ್ ಮತ್ತು ನ್ಯೂಸ್ ಚಾನಲ್ ಗಳ ಬಗೆಗಿನ ಟಾಪ್ ಅಪ್ ನ್ನು ಇದುವರೆಗೂ ಹೇಳಿಲ್ಲ. ಈಗ ಉಳಿದಿರುವ ಟಾಪ್ ಅಪ್ ಗಳನ್ನು ಏರ್ ಟೆಲ್ ಡಿಜಿಟಲ್ ಟಿವಿ ಯಾವಾಗ ಬಿಡುಗಡೆಗೊಳಿಸುತ್ತದೆ ಎಂಬ ಬಗ್ಗೆ ಯಾವುದೇ ಟೈಮ್ ಲೈನ್ ನಿಗದಿಯಾಗಿಲ್ಲ.ಈ ಟಾಪ್ ಅಪ್ ಗಳ ಜೊತೆಗೆ ಏರ್ ಟೆಲ್ ಕೆಲವು ಮಾಹಿತಿ ಅನುಸಾರದ ಪ್ಯಾಕ್ ಗಳನ್ನು ಬಿಡುಗಡೆಗೊಳಿಸಿದೆ. ಅದಕ್ಕಾಗಿ ಕೆಲವು ರಿಯಾಯಿತಿಯನ್ನು ಕೂಡ ಕಂಪೆನು ನೀಡುತ್ತಿದೆ.

ಆಯ್ದ ಕೊಂಬೋ ಟಾಪ್ ಅಪ್ ಗಳ ಮೇಲೆ ಎನ್ ಸಿಎಫ್ ಚಾರ್ಜ್ ಕೂಡ ಬೀಳಲಿದೆ:

ಆಯ್ದ ಕೊಂಬೋ ಟಾಪ್ ಅಪ್ ಗಳ ಮೇಲೆ ಎನ್ ಸಿಎಫ್ ಚಾರ್ಜ್ ಕೂಡ ಬೀಳಲಿದೆ:

ಇದರ ಜೊತೆಗೆ ಟ್ರಾಯ್ ನ ಹೊಸ ತಾರಿಫ್ ನ ಎನ್ ಸಿಎಫ್ ಚಾರ್ಜ್ ರುಪಾಯಿ 153 ಕೂಡ ಸೇರಿಕೊಳ್ಳುತ್ತದೆ. ನೀವು ಆಯ್ದ ಚಾನಲ್ ಗಳ ಮೇಲೆ ಈ ಚಾರ್ಜ್ ನ್ನು ಕೂಡ ನೀವು ನೀಡಬೇಕಾಗುತ್ತದೆ. ಅಂದರೆ ನೀವು ತೆಲುಗು ಕೊಂಬೋ ಟಾಪ್ ಅಪ್ ನ್ನು ಆಯ್ಕೆ ಮಾಡಿಕೊಂಡಿದ್ದರೆ ರುಪಾಯಿ 153+ ರೂಪಾಯಿ 135 ಸೇರಿ ಒಟ್ಟು ತಿಂಗಳಿಗೆ ರುಪಾಯಿ 288 ನ್ನು ನೀವು ಪಾವತಿ ಮಾಡಬೇಕು. ಖಂಡಿತ ಇದು ಬಹಳ ಉಳಿತಾಯಕ್ಕೆ ನೆರವಾಗುತ್ತದೆ. ಆದರೆ ಯಾರು ಕೊಂಬೋ ಪ್ಯಾಕ್ ನಲ್ಲಿ ಬರುವ ಚಾನಲ್ ಗಳನ್ನು ವೀಕ್ಷಿಸುವುದಿಲ್ಲವೇ ಅವರು ತಮಗೆ ಬೇಕಾದ ಚಾನಲ್ ಗಳನ್ನು ಆಯ್ದುಕೊಳ್ಳುವುದೇ ಸರಿಯಾದ ಮಾರ್ಗವಾಗಿದೆ.

Best Mobiles in India

Read more about:
English summary
Airtel Digital TV Lists Top-Up Plans in Local Languages Starting at Rs 7

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X