ಏರ್ ಟೆಲ್ ನಲ್ಲಿ 1000ಜಿಬಿ ಡಾಟಾ ಉಚಿತ- ಪಡೆದುಕೊಳ್ಳುವುದು ಹೇಗೆ ಗೊತ್ತಾ?

By Gizbot Bureau
|

ಜಿಯೋ ಗಿಗಾಫೈಬರ್ ನ್ನು ರಿಲಯನ್ಸ್ ಜಿಯೋ ಬಿಡುಗಡೆಗೊಳಿಸುತ್ತಿದೆ ಎಂಬ ಸುದ್ದಿ ಬಂದಾಗಿನಿಂದಲೂ ಭಾರತದ ಬ್ರಾಡ್ ಬ್ಯಾಂಡ್ ಸೇವೆಯ ಇತರೆ ಸಂಸ್ಥೆಗಳು ಭಾರೀ ಒತ್ತಡಕ್ಕೆ ಸಿಲುಕಿವೆ.ದೇಶದಲ್ಲಿ ಅತೀ ಹೆಚ್ಚು ಚಂದಾದಾರರನ್ನು ಹೊಂದಿರುವ ಏರ್ ಟೆಲ್, ಆಕ್ಟ್ ಫೈಬರ್ ನೆಟ್ ನಂತಹ ಕಂಪೆನಿಗಳು ಇರುವ ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ಹೊಸ ಗ್ರಾಹಕರನ್ನು ಪಡೆಯುವುದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿವೆ. ಇಂತಹ ಒಂದು ಪ್ರಯತ್ನದಲ್ಲಿ ಇದೀಗ ಏರ್ ಟೆಲ್ ಸಂಸ್ಥೆ 1000GB ಡಾಟಾವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ.

ಬೋನಸ್ ಡಾಟಾ:

ಬೋನಸ್ ಡಾಟಾ:

ಬ್ರಾಡ್ ಬ್ಯಾಂಡ್ ಪ್ಲಾನ್ ನ ಅಡಿಯಲ್ಲಿ 1000ಜಿಬಿ ಡಾಟಾವನ್ನು ಕಂಪೆನಿಯು ಬೋನಸ್ ರೂಪದಲ್ಲಿ ನೀಡುತ್ತದೆ. ಆದರೆ ಕ್ಯಾಚ್ ಇದೆ. ಎಲ್ಲಾ ಬ್ರಾಡ್ ಬ್ಯಾಂಡ್ ಪ್ಲಾನ್ ಗಳಲ್ಲಿ ಇದು ಲಭ್ಯವಿರುವುದಿಲ್ಲ.799 ರುಪಾಯಿ ಪ್ಲಾನ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪ್ಲಾನ್ ನ್ನು ಹೊಂದಿದವರಿಗೆ ಮಾತ್ರವೇ ಏರ್ ಟೆಲ್ ಈ ಬೋನಸ್ ನ್ನು ನೀಡುತ್ತದೆ. ಬೋನಸ್ ಡಾಟಾವು ಮಾರ್ಚ್ 31,2019 ರ ವರೆಗೆ ಮಾತ್ರವೇ ಲಭ್ಯವಿರುತ್ತದೆ.

499 ರುಪಾಯಿ ಪ್ಲಾನ್:

499 ರುಪಾಯಿ ಪ್ಲಾನ್:

ಏರ್ ಟೆಲ್ ನ ಬ್ರಾಡ್ ಬ್ಯಾಂಡ್ ಪ್ಲಾನ್ ರುಪಾಯಿ 499 ರಿಂದ ಆರಂಭವಾಗುತ್ತದೆ. ರುಪಾಯಿ 499 ಪ್ಲಾನ್ 6 ತಿಂಗಳಿಗೆ ಮತ್ತು 12 ತಿಂಗಳ ಪ್ಲಾನ್ ಗಳಲ್ಲಿ ಲಭ್ಯವಿದೆ. 799 ರುಪಾಯಿ ಪ್ಲಾನ್ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಏರ್ ಟೆಲ್ ಈ ಬೋನಸ್ ಡಾಟಾವನ್ನು ನೀಡುತ್ತದೆ. ರುಪಾಯಿ 799 ಬ್ರಾಡ್ ಬ್ಯಾಂಡ್ ಪ್ಲಾನ್ 100ಜಿಬಿ ಡಾಟಾವನ್ನು 40Mbps ವೇಗದಲ್ಲಿ ನೀಡುತ್ತದೆ ಜೊತೆಗೆ ಉಚಿತ ವಾಯ್ಸ್ ಕರೆಗಳನ್ನು ಭಾರತದಾದ್ಯಂತ ನೀಡುತ್ತದೆ. ಇದರ ಅಡಿಯಲ್ಲಿ ನಿಮಗೆ ಲಭ್ಯವಾಗುವ ಬೋನಸ್ ಡಾಟಾ 500GB ಆಗಿರುತ್ತದೆ.

999 ರುಪಾಯಿ ಪ್ಲಾನ್:

999 ರುಪಾಯಿ ಪ್ಲಾನ್:

ಎರಡನೆಯದ್ದು ರುಪಾಯಿ 999 ಪ್ಲಾನ್. ಇದರಲ್ಲಿ 250ಜಿಬಿ ಬ್ರಾಡ್ ಬ್ಯಾಂಡ್ ಡಾಟಾ ಲಭ್ಯವಾಗುತ್ತದೆ ಜೊತೆಗೆ ಉಚಿತ ವಾಯ್ಸ್ ಕರೆಗಳನ್ನು ಭಾರತದಾದ್ಯಂತ ಮಾಡುವುದಕ್ಕೆ ಅವಕಾಶವಿರುತ್ತದೆ. ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ಚಂದಾದಾರಿಕೆ ಕೂಡ ಸಿಗುತ್ತದೆ. ಏರ್ ಟೆಲ್ 1000ಜಿಬಿ ಬೋನಸ್ ಡಾಟಾವನ್ನು ಇದರ ಜೊತೆಗೆ ನೀಡುತ್ತದೆ.

1299 ರುಪಾಯಿ ಪ್ಲಾನ್:

1299 ರುಪಾಯಿ ಪ್ಲಾನ್:

ಮೂರನೆಯದ್ದು 1299 ರುಪಾಯಿ ಪ್ಲಾನ್. ಇದರಲ್ಲಿ 500ಜಿಬಿ ಡಾಟಾ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳಿರುತ್ತದೆ ಮತ್ತು ಡಾಟಾ ರೋಲ್ ಓವರ್ ಫೆಸಿಲಿಟಿ ಮತ್ತು ಅಮೇಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗೆ ಚಂದಾದಾರಿಕೆ ಲಭ್ಯವಿದೆ. ಇದರಲ್ಲೂ ಕೂಡ ಏರ್ ಟೆಲ್ 100ಜಿಬಿ ಡಾಟಾವನ್ನು ಬೋನಸ್ ಆಗಿ ನೀಡಿತ್ತದೆ.

ಇತರೆ ಪ್ಲಾನ್ ಗಳು:

ಇತರೆ ಪ್ಲಾನ್ ಗಳು:

ಕೊನೆಯದಾಗಿ ರುಪಾಯಿ 1999 ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ಅನಿಯಮಿತ ಡಾಟಾ 100Mbps ಸ್ಪೀಡ್ ವರೆಗೆ ಸಿಗುತ್ತದೆ ಜೊತೆಗೆ 1000GB ಬೋನಸ್ ಡಾಟಾ ಇರುತ್ತದೆ.ಏರ್ ಟೆಲ್ ನಲ್ಲಿ ಅರ್ಧವಾರ್ಷಿಕ ಮತ್ತು ವಾರ್ಷಿಕ ಎರಡೂ ಪ್ಲಾನ್ ಗಳು ಇದರಲ್ಲಿ ಲಭ್ಯವಿದೆ. ಅಂದರೆ ನಿಮಗೆ ರುಪಾಯಿ 678,ರುಪಾಯಿ 848, ರುಪಾಯಿ 1103, ರುಪಾಯಿ 1696 ರ ಪ್ಲಾನ್ ನಲ್ಲೂ ಕೂಡ ಬೋನಸ್ 1000ಜಿಬಿ ಡಾಟಾ ಲಭ್ಯವಾಗುತ್ತದೆ. ಇವೆಲ್ಲವೂ ಮಾಸಿಕ ಬಾಡಿಗೆ ಇರುವ ಮತ್ತು ಅರ್ಧ ವರ್ಷಕ್ಕೆ ಅಥವಾ ಒಂದು ವರ್ಷಕ್ಕೆ ಪಾವತಿಸುವ ಪ್ಲಾನ್ ಗಳಾಗಿದೆ.

ರಿಯಾಯಿತಿ:

ರಿಯಾಯಿತಿ:

ಅರ್ಧ ವಾರ್ಷಿಕ ಮತ್ತು ವಾರ್ಷಿಕ ಬ್ರಾಡ್ ಬ್ಯಾಂಡ್ ಪ್ಲಾನ್ ಗಳಲ್ಲಿ ಏರ್ ಟೆಲ್ ಇತ್ತೀಚೆಗೆ ರಿಯಾಯಿತಿ ದರವನ್ನೂ ಕೂಡ ನಿಗದಿಗೊಳಿಸಿದೆ. 15 ಶೇಕಡಾದವರೆಗೆ ರಿಯಾಯಿತಿಯನ್ನು ಅರ್ಧವಾರ್ಷಿಕಕಕ್ಕೆ ಮತ್ತು 20 ಶೇಕಡಾ ರಿಯಾಯಿತಿಯನ್ನು ಒಂದು ವರ್ಷಕ್ಕೆ ಏರ್ ಟೆಲ್ ನೀಡುತ್ತದೆ.

Best Mobiles in India

Read more about:
English summary
Airtel is giving bonus 1000GB data to broadband users but there's a catch

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X